ಕಬ್ಬಡಕೇರಿ ಶ್ರೀಮುತ್ತಪ್ಪ ದೇವಾಲಯ: ಗೋಪೂಜೆ, ಶ್ರೀಲಕ್ಷ್ಮೀ ಪೂಜೆ

| Published : Nov 11 2024, 11:48 PM IST

ಕಬ್ಬಡಕೇರಿ ಶ್ರೀಮುತ್ತಪ್ಪ ದೇವಾಲಯ: ಗೋಪೂಜೆ, ಶ್ರೀಲಕ್ಷ್ಮೀ ಪೂಜೆ
Share this Article
  • FB
  • TW
  • Linkdin
  • Email

ಸಾರಾಂಶ

ಶ್ರೀ ಮುತ್ತಪ್ಪ ದೇವಾಲಯದಲ್ಲಿ ಗೋ ಪೂಜೆ ಹಾಗೂ ಶ್ರೀ ಲಕ್ಷ್ಮೀ ಪೂಜೆ ನಡೆಯಿತು. ಗೋವಿನ ಮಹತ್ವ ಕುರಿತು ಡಾ. ಮಹಬಲೇಶ್ವರ ಭಟ್‌ ವಿವರಿಸಿದರು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಮಡಿಕೇರಿ ಗ್ರಾಮಾಂತರ ಪ್ರಖಂಡದ ವಿಶ್ವ ಹಿಂದೂ ಪರಿಷತ್, ಭಜರಂಗದಳ ಮತ್ತು ಮಾತೃಶಕ್ತಿ ದುರ್ಗಾವಾಹಿನಿ ವತಿಯಿಂದ ಹೊದ್ದೂರಿನ ಕಬ್ಬಡಕೇರಿಯ ಶ್ರೀಮುತ್ತಪ್ಪ ದೇವಾಲಯದಲ್ಲಿ ಗೋಪೂಜೆ ಹಾಗೂ ಶ್ರೀಲಕ್ಷ್ಮೀ ಪೂಜೆ ಶ್ರದ್ಧಾಭಕ್ತಿಯಿಂದ ನಡೆಯಿತು.

ಗೋವುಗಳಿಗೆ ಫಲಹಾರ ನೀಡಿ, ವಿಶೇಷ ಪೂಜೆ ಸಲ್ಲಿಸಿ ಗೋಸಂತತಿಯ ಉದ್ಧಾರಕ್ಕೆ ಪ್ರಾರ್ಥನೆ ಸಲ್ಲಿಸಲಾಯಿತು. ಜಿಲ್ಲಾ ಮಠಮಂದಿರ ಅರ್ಚಕರ ಪ್ರಮುಖ್ ಡಾ.ಮಹಾಬಲೇಶ್ವರ ಭಟ್ ಗೋವಿನ ಮಹತ್ವದ ಕುರಿತು ತಿಳಿಸಿದರು.

ದೇವಾಲಯದ ಅಧ್ಯಕ್ಷ ಬಾಲಕೃಷ್ಣ, ಪೂಜಾರಿ ಮಣಿ ಅವರ ಸಹಕಾರದಲ್ಲಿ ನಡೆದ ಪೂಜೆಯಲ್ಲಿ ವಿಶ್ವ ಹಿಂದೂ ಪರಿಷತ್ ಕಾರ್ಯಾಧ್ಯಕ್ಷ ಸುರೇಶ್ ಮುತ್ತಪ್ಪ, ಕಾರ್ಯದರ್ಶಿ ರಮೇಶ್ ಪುದಿಯೊಕ್ಕಡ, ಮಾತೃಶಕ್ತಿ ಜಿಲ್ಲಾ ಸಂಯೋಜಕಿ ಪೂರ್ಣಿಮಾ ಸುರೇಶ್, ಮಡಿಕೇರಿ ತಾಲೂಕು ಸಂಯೋಜಕಿ ಮಮತ, ಭಜರಂಗದಳ ಪ್ರಮುಖರಾದ ಪ್ರವೀಣ್, ಸಜೀನ ಸೂರಜ್, ಪುರುಷೋತ್ತಮ, ಮಾತೃಶಕ್ತಿಯ ರುಕ್ಮಿಣಿ, ಜಾನಕಿ ಚಂಗಪ್ಪ, ಹೊದ್ದೂರು ಘಟಕದ ಪ್ರಮುಖರು, ಗ್ರಾಮಸ್ಥರು ಪಾಲ್ಗೊಂಡಿದ್ದರು.

--------------------------------------

ಎಮ್ಮೆಮಾಡು: ಜ.12ರಂದು ಕೂರ್ಗ್ ಜಂಇಯ್ಯತುಲ್ ಉಲಮಾ ಗೋಲ್ಡನ್ ಜ್ಯುಬಿಲಿ

ಕನ್ನಡಪ್ರಭವಾರ್ತೆ ವಿರಾಜಪೇಟೆ

ಅಖಿಲ ಭಾರತ ಸುನ್ನೀ ಜಂಇಯ್ಯತುಲ್ ಉಲಮಾ ಇದರ ಅಧೀನದ ಕೂರ್ಗ್ ಜಂಇಯ್ಯತುಲ್ ಉಲಮಾ ಸಂಘಟನೆಯ 50-ನೇ ವಾರ್ಷಿಕ ಮಹಾ ಸಮ್ಮೇಳನ ಘೋಷಣಾ ಸಂಗಮವು ವಿರಾಜಪೇಟೆಯ ಅನ್ವಾರುಲ್ ಹುದಾ ಕ್ಯಾಂಪಸ್ ನಲ್ಲಿ ನಡೆಯಿತು. ಜ.12ರಂದು ಎಮ್ಮೆಮಾಡಿನಲ್ಲಿ ಶೈಖುನಾ ರಈಸುಲ್ ಉಲಮಾ ಸುಲೈಮಾನ್ ಉಸ್ತಾದ್, ಶೈಖುನಾ ಸುಲ್ತಾನುಲ್ ಉಲಮಾ ಎ.ಪಿ ಉಸ್ತಾದರ ನೇತೃತ್ವದಲ್ಲಿ ಐತಿಹಾಸಿಕ ಮಹಾ ಸಮ್ಮೇಳನ ನಡೆಯಲಿದೆ.

ಕೂರ್ಗ್ ಜಂಇಯ್ಯತುಲ್ ಉಲಮಾ ಅಧ್ಯಕ್ಷ ಸಯ್ಯಿದ್ ಶಿಹಾಬುದ್ದೀನ್ ಐದರೂಸಿ ಕಿಲ್ಲೂರು ತಙ್ಙಳ್ ರವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯು ಪ್ರಧಾನ ಕಾರ್ಯದರ್ಶಿ ಶೈಖುನಾ ಅಹ್ಸನಿ ಉಸ್ತಾದರು ಸ್ವಾಗತಿಸಿದರು.

ಸಿ.ಕೆ ಉಸ್ತಾದರು ಉದ್ಘಾಟಿಸಿದರು. ಎಸ್ ವೈ ಎಸ್ ರಾಜ್ಯಾಧ್ಯಕ್ಷ ಹಫೀಲ್ ಸಅದಿ ಸಮ್ಮೇಳನದ ರೂಪುರೇಷೆಗಳನ್ನು ವಿವರಿಸಿದರು. ಅಖಿಲ ಭಾರತ ಸುನ್ನೀ ಜಂಇಯ್ಯತುಲ್ ಉಲಮಾ ಪ್ರಧಾನ ಕಾರ್ಯದರ್ಶಿ ಶೈಖುನಾ ಸುಲ್ತಾನುಲ್ ಉಲಮಾರ ನಿರ್ದೇಶನದಂತೆ ಕೂರ್ಗ್ ಜಂಇಯ್ಯತುಲ್ ಉಲಮಾ ಗೋಲ್ಡನ್ ಜ್ಯುಬಿಲಿ ಮಹಾ ಸಮ್ಮೇಳನವನ್ನು ಸಯ್ಯದ್ ಕಿಲ್ಲೂರು ತಙ್ಙಳ್ ಘೋಷಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಜಂಇಯ್ಯತುಲ್ ಉಲಮಾ ಮುಶಾವರಾ ಸದಸ್ಯರು ಕೆ ಎಂ ಜೆ, ಎಸ್ ಎಸ್ ಎಫ್, ಎಸ್ ವೈ ಎಸ್ ಜಿಲ್ಲಾ ನಾಯಕರು ಭಾಗವಹಿಸಿದ್ದರು. ಕಾರ್ಯಕ್ರಮದ ಯಶಸ್ಸಿಗೆ 111 ಸದಸ್ಯರ ಸ್ವಾಗತ ಸಮಿತಿ ರಚಿಸಲಾಯಿತು. ಜಂಇಯ್ಯತುಲ್ ಉಲಮಾ ನಾಯಕರಾದ ಸಯ್ಯಿದ್ ಇಲ್ಯಾಸ್ ಅಲ್ ಐದರೂಸಿ ಅವರ ನೇತೃತ್ವದಲ್ಲಿ ಸಮಾರೋಪ ದುಆ ನಡೆಯಿತು.