ಕಬ್ಬೂರ ಮಾರುತಿ ದೇವರ ಓಕುಳಿ ಸಂಪನ್ನ

| Published : May 29 2024, 12:48 AM IST

ಕಬ್ಬೂರ ಮಾರುತಿ ದೇವರ ಓಕುಳಿ ಸಂಪನ್ನ
Share this Article
  • FB
  • TW
  • Linkdin
  • Email

ಸಾರಾಂಶ

ಕಬ್ಬೂರ ಪಟ್ಟಣದ ಶ್ರೀ ಹನುಮಾನ (ಮಾರುತಿ) ದೇವರ ಓಕುಳಿ ಸಂಪನ್ನಗೊಂಡಿತು. ಮಾರುತಿ ದೇವರಿಗೆ ಮಹಾರುದ್ರಾಭಿಷೇಕ, ಮಹಾಪೂಜೆ, ಪೂಜೆ-ಪುನಸ್ಕಾರ, ನೈವೇದ್ಯ ಸಮರ್ಪಣೆ ಕಾರ್ಯಕ್ರಮ ಜರುಗಿತು.

ಕನ್ನಡಪ್ರಭ ವಾರ್ತೆ ಕಬ್ಬೂರ

ಪಟ್ಟಣದ ಶ್ರೀ ಹನುಮಾನ (ಮಾರುತಿ) ದೇವರ ಓಕುಳಿ ಸಂಪನ್ನಗೊಂಡಿತು. ಮಾರುತಿ ದೇವರಿಗೆ ಮಹಾರುದ್ರಾಭಿಷೇಕ, ಮಹಾಪೂಜೆ, ಪೂಜೆ-ಪುನಸ್ಕಾರ, ನೈವೇದ್ಯ ಸಮರ್ಪಣೆ ಕಾರ್ಯಕ್ರಮ ಜರುಗಿತು. ಸೋಮವಾರ ಬೆಳಗ್ಗೆ ವಿವಿಧ ತುರ್ಸಾ ತುರ್ಸಿನ ಚೌಡಕಿ ಪದಗಳು ಜರುಗಿದವು. ಮಧ್ಯಾಹ್ನ ಮಹಾಪ್ರಸಾದ ನಡೆಯಿತು. ಸಂಜೆ ಸ್ಥಳೀಯ ಹಾಗೂ ಸುತ್ತ-ಮುತ್ತಲಿನ ಹಳ್ಳಿಗಳ ಜನರಿಂದ ನೀರು ಎರಚುವ ಮೂಲಕ ಓಕುಳಿ ಜರುಗಿತು. ಮಾರುತಿ ದೇವರ ಓಕುಳಿ ಕಮಿಟಿ ಅಧ್ಯಕ್ಷ ಮಿಲನ ಪಾಟೀಲ, ಸುನೀಲ ಕುಲಕರ್ಣಿ, ವಾಮನ ದೇಶಪಾಂಡೆ, ಘಟಿಗೆಪ್ಪ ಬೆಲ್ಲದ, ಕಾಶಪ್ಪ ಕಾಡೇಶಗೋಳ, ಚಿದಾನಂದ ಹಳ್ಳೂರ, ಡಾ.ಅಣ್ಣಪ್ಪ ಕಾಗವಾಡೆ, ಪಿಂಟು ಕಾಗವಾಡೆ, ರಾಯಪ್ಪ ಪೂಜೇರಿ, ಭೂತಪ್ಪ ಕಬಾಡಗಿ, ಶಂಕರ ಕಾಮಗೌಡ, ವಹಾಬಳೇಶ್ವರ ಕುಂದರಗಿ, ಭೀಮಪ್ಪ ಹಿರೇಕುರಬರ, ಮಲ್ಲಪ್ಪ ಕಾಮಗೌಡ ಸೇರಿದಂತೆ ಪಟ್ಟಣದ ವಿವಿಧ ಸಮುದಾಯದ ಹಿರಿಯರು, ಇಲ್ಲಿಯ ಮಾರುತಿ ದೇವರ ಓಕುಳಿ ಉತ್ಸವ ಕಮಿಟಿ ಸದಸ್ಯರು, ಪಟ್ಟಣದ ನಾಗರಿಕರು ಸೇರಿದಂತೆ ಸಾವಿರಾರು ಭಕ್ತರು ಇದ್ದರು.