ಗುಂಡ್ಲುಪೇಟೆಗೆ ಕಬಿನಿ ನೀರು ಸದ್ಯಕ್ಕೆ ಬರಂಗೆ ಕಾಣ್ತಿಲ್ಲ!

| Published : Mar 25 2024, 12:51 AM IST

ಸಾರಾಂಶ

ಈಗಾಗಲೇ ಬೇಸಿಗೆ ಆರಂಭವಾಗಿದ್ದು, ಕಬಿನಿ ನೀರು ಗುಂಡ್ಲುಪೇಟೆ ಪಟ್ಟಣದ ಬಂದು ತಿಂಗಳುಗಳೇ ಉರುಳುತ್ತಿದೆ. ಡಿಜಿಟಲ್‌ ಸ್ಟಾರ್ಟರ್‌ ರಿಪೇರಿ ಹಾಗೂ ಹೊಸ ಸ್ಟಾರ್ಟರ್‌ ಖರೀದಿಗೆ ಒಂದು ತಿಂಗಳಿಗೂ ಹೆಚ್ಚು ದಿನಾ ಬೇಕಾ? ಇದು ಪುರಸಭೆ ನಿರ್ಲಕ್ಷ್ಯವಲ್ಲದೇ ಮತ್ತೇನು? ಪುರಸಭೆಯಲ್ಲಿ ೨೩ ಮಂದಿ ಪುರಸಭೆ ಸದಸ್ಯರು ಇದ್ದರೂ ಕಬಿನಿ ಕುಡಿಯುವ ನೀರಿನ ವಿಚಾರದಲ್ಲಿ ಕೈಚೆಲ್ಲಿ ಕುಳಿತಿದ್ದರೆ,ಇತ್ತ ಚಾಮರಾಜನಗರ ಜಿಲ್ಲಾಡಳಿತ ಮಾತ್ರ ಕುಡಿಯುವ ನೀರಿನ ವಿಚಾರದಲ್ಲಿ ತಮಗೆ ಸಂಬಂಧವಿಲ್ಲದಂತೆ ವರ್ತಿಸುತ್ತಿದೆ.

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆಈಗಾಗಲೇ ಬೇಸಿಗೆ ಆರಂಭವಾಗಿದ್ದು, ಕಬಿನಿ ನೀರು ಗುಂಡ್ಲುಪೇಟೆ ಪಟ್ಟಣದ ಬಂದು ತಿಂಗಳುಗಳೇ ಉರುಳುತ್ತಿದೆ. ಡಿಜಿಟಲ್‌ ಸ್ಟಾರ್ಟರ್‌ ರಿಪೇರಿ ಹಾಗೂ ಹೊಸ ಸ್ಟಾರ್ಟರ್‌ ಖರೀದಿಗೆ ಒಂದು ತಿಂಗಳಿಗೂ ಹೆಚ್ಚು ದಿನಾ ಬೇಕಾ? ಇದು ಪುರಸಭೆ ನಿರ್ಲಕ್ಷ್ಯವಲ್ಲದೇ ಮತ್ತೇನು? ಪುರಸಭೆಯಲ್ಲಿ ೨೩ ಮಂದಿ ಪುರಸಭೆ ಸದಸ್ಯರು ಇದ್ದರೂ ಕಬಿನಿ ಕುಡಿಯುವ ನೀರಿನ ವಿಚಾರದಲ್ಲಿ ಕೈಚೆಲ್ಲಿ ಕುಳಿತಿದ್ದರೆ,ಇತ್ತ ಚಾಮರಾಜನಗರ ಜಿಲ್ಲಾಡಳಿತ ಮಾತ್ರ ಕುಡಿಯುವ ನೀರಿನ ವಿಚಾರದಲ್ಲಿ ತಮಗೆ ಸಂಬಂಧವಿಲ್ಲದಂತೆ ವರ್ತಿಸುತ್ತಿದೆ.ಪಟ್ಟಣಕ್ಕೆ ಕಬಿನಿ ನೀರು ಬಂದು ತಿಂಗಳು ಉರುಳಿದೆ.ಒಂದು ತಿಂಗಳಿನಿಂದ ಪಟ್ಟಣದ ಜನತೆ ನೀರಿಗಾಗಿ ಪರದಾಟ ಪಡುತ್ತಿದ್ದಾರೆ ಈ ಸಮಸ್ಯೆಗೆ ಕಾರಣ ಹುಡುಕವ ಕೆಲಸ ಪುರಸಭೆ ಮಾಡುತ್ತಿದೆ ಆದರೂ ಸಮಸ್ಯೆಗೆ ಪರಿಹಾರ ಮಾತ್ರ ಸದ್ಯಕ್ಕೆ ಸಿಕ್ಕಂತೆ ಕಾಣುತ್ತಿಲ್ಲ.ಅದೆಂಥ ಸ್ಟಾರ್ಟರ್?‌:ಕಬಿನಿ ನೀರು ಸರಬರಾಜು ಮಾಡುವ ಎಲ್ಲಾ ಡಿಜಿಟಲ್‌ ಸ್ಟಾರ್ಟರ್‌ ಕೆಟ್ಟಿವೆ. ಕೆಟ್ಟ ಸ್ಟಾರ್ಟರ್‌ ದುರಸ್ಥಿ ಮಾಡಲು ಒಂದು ತಿಂಗಳು ಬೇಕಾ? ದುರಸ್ಥಿ ನೆಪದಲ್ಲಿ ತಿಂಗಳಿನಿಂದ ಗುಂಡ್ಲುಪೇಟೆಗೆ ಕಬಿನಿ ನೀರಂತೂ ಬಂದಿಲ್ಲ. ಗುಂಡ್ಲುಪೇಟೆ ಸೇರಿದಂತೆ ಹತ್ತಾರು ಹಳ್ಳಿಗಳಿಗೆ ಕಬಿನಿ ನೀರು ಸರಬರಾಜಾಗುತ್ತಿದೆ. ಕೆಟ್ಟ ಸ್ಟಾರ್ಟರ್‌ ಕೆಟ್ಟರೆ ಮತ್ತೆ ರಿಪೇರಿ ಆಗಲು ಇಷ್ಟೊಂದು ಸಮಯ ಬೇಕಾ? ಯಾಕೆ ದುರಸ್ಥಿ ಆಗುತ್ತಿಲ್ಲ? ಆಯ್ತು ಕೆಟ್ಟ ಡಿಜಿಟಲ್‌ ಸ್ಟಾರ್ಟರ್‌ ರಿಪೇರಿಯಾಗುವ ಹೊಸದಾಗಿ ಖರೀದಿಸಿ ಜನತೆಗೆ ನೀರು ಕೊಡಬಹುದಿತ್ತಲ್ಲವೇ? ಕಬಿನಿ ನೀರಿಜನ ಯೋಜನೆಯ ನಾಲ್ಕು ಡಿಜಿಟಲ್‌ ಸ್ಟಾರ್ಟರ್‌ ಗಳನ್ನು ಬಿಚ್ಚಿಕೊಂಡು ರಿಪೇರಿಗೆ ಮತ್ತೆ ಬೆಂಗಳೂರಿಗೆ ಹೋಗಿದ್ದಾರೆ.ಇನ್ನೂ ರಿಪೇರಿಯಾಗಿಲ್ಲ ಜೊತೆಗೆ ಹೊಸ ಸ್ಟಾರ್ಟರ್‌ ಕೂಡ ಬಂದಿಲ್ಲ.ನಿರ್ಲಕ್ಷ್ಯ ಕಾಣುತ್ತಿದೆ: ಪಟ್ಟಣಕ್ಕೆ ಕಬಿನಿ ನೀರು ೨೦೦೨ ರಲ್ಲಿ ಬಂತು.ಅಲ್ಲಿಂದ ಇಲ್ಲಿಯ ತನಕ ತಿಂಗಳಾನುಗಟ್ಟಲೇ ಕಬಿನಿ ನೀರು ನಿಂತದ್ದೇ ಇಲ್ಲ.ಈಗ ತಿಂಗಳುಗಳು ಉರುಳಿದೆ ಇನ್ನೂ ಕಬಿನಿ ನೀರು ಬಂದಿಲ್ಲ ಇದು ಪುರಸಭೆಯ ನಿರ್ಲಕ್ಷ್ಯ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌ ಕೂಡ ಕುಡಿವ ನೀರಿನ ಸಮಸ್ಯೆ ಬಗೆಹರಿಸಲು ಪುರಸಭೆ ಅಧಿಕಾರಿಗೆ ಸೂಚನೆ ನೀಡಿದ್ದಾರೆ.ಆದರೂ ಕಬಿನಿ ನೀರು ಜನರಿಗೆ ತಲುಪಿಸಲು ಪುರಸಭೆ ವಿಫಲವಾಗಿದೆ.ಎಚ್ಚರಿಸಿದ ಕನ್ನಡಪ್ರಭ: ಪಟ್ಟಣದ ಜನತೆಗೆ ಕಬಿನಿ ನೀರಿಲ್ಲದೆ ಪರದಾಡುತ್ತಿರುವ ಬಗ್ಗೆ ಕನ್ನಡಪ್ರಭ ಪತ್ರಿಕೆ ನಾಲ್ಕು ವರದಿ ಪ್ರಕಟಿಸಿ ಪುರಸಭೆ ಎಚ್ಚರಿಸಿ ಸಾರ್ವಜನಿಕ ಗಮನ ಸೆಳೆಯುವ ಕೆಲಸ ಮಾಡಿದೆ.ಜಿಲ್ಲಾಧಿಕಾರಿಗಳೇ ನಿಮ್ಮ ಗಮನಕ್ಕೆ ಬಂದಿಲ್ವ!:ಗುಂಡ್ಲುಪೇಟೆ: ಪಟ್ಟಣದಲ್ಲಿ ಕಬಿನಿ ಕುಡಿಯುವ ನೀರಿನ ಸಮಸ್ಯೆಗೆ ಪಟ್ಟಣದ ನಾಗರೀಕರು ಪರದಾಡುತ್ತಿದ್ದಾರೆ.ಇಲ್ಲಿನ ಜನರು ಕಷ್ಟ ನಿಮ್ಮ ಗಮನಕ್ಕೆ ಬಂದಿಲ್ಲವೇ ಎಂದು ಜನರು ಪ್ರಶ್ನಿಸಿದ್ದಾರೆ. ಕಬಿನಿ ನೀರಿನ ಸಮಸ್ಯೆ ಒಂದು,ಎರಡು ದಿನಗಳ ಸಮಸ್ಯೆಯಲ್ಲ,ಒಂದು ತಿಂಗಳಿಗೂ ಹೆಚ್ಚು ದಿನಗಳಿಂದ ಕಬಿನಿ ನೀರಿಗಾಗಿ ಶಬರಿಯಂತೆ ಕಾಯುತ್ತಿದ್ದೇವೆ ಇದು ನಿಮ್ಮ ಗಮನಕ್ಕೆ ಬಂದಿಲ್ಲವೇ?ಪುರಸಭೆ ಅಧಿಕಾರಿಗಳು ತಂದಿಲ್ಲವೇ?