ಸೋದೆ ಶ್ರೀ ವಾದಿರಾಜ ಮಠದ ಭಾವಿ ಪರ್ಯಾಯೋತ್ಸವದ ಪ್ರಯುಕ್ತ 29ರಂದು ನಡೆಯುವ ಬಾಳೆ ಮುಹೂರ್ತ ಮತ್ತು ಮೂರು ದಿನಗಳ ರಾಷ್ಟ್ರ ಮಟ್ಟದ ಬಾಳೆ ಮೇಳ - ‘ಕದಳೀ ವಿಶ್ವದರ್ಶನ’ದಂಗವಾಗಿ ಉಡುಪಿ ಜಿಲ್ಲೆಯ ಶಾಲಾ ವಿದ್ಯಾರ್ಥಿಗಳಿಗೆ ವೈಶಿಷ್ಟ್ಯಪೂರ್ಣ ಚಿತ್ರಕಲಾ ಸ್ಪರ್ಧೆಯನ್ನು ಆಯೋಜಿಸಲಾಗಿದೆ.
ಉಡುಪಿ: ಸೋದೆ ಶ್ರೀ ವಾದಿರಾಜ ಮಠದ ಭಾವಿ ಪರ್ಯಾಯೋತ್ಸವದ ಪ್ರಯುಕ್ತ 29ರಂದು ನಡೆಯುವ ಬಾಳೆ ಮುಹೂರ್ತ ಮತ್ತು ಮೂರು ದಿನಗಳ ರಾಷ್ಟ್ರ ಮಟ್ಟದ ಬಾಳೆ ಮೇಳ - ‘ಕದಳೀ ವಿಶ್ವದರ್ಶನ’ದಂಗವಾಗಿ ಉಡುಪಿ ಜಿಲ್ಲೆಯ ಶಾಲಾ ವಿದ್ಯಾರ್ಥಿಗಳಿಗೆ ವೈಶಿಷ್ಟ್ಯಪೂರ್ಣ ಚಿತ್ರಕಲಾ ಸ್ಪರ್ಧೆಯನ್ನು ಆಯೋಜಿಸಲಾಗಿದೆ.
ವಿದ್ಯಾರ್ಥಿಗಳಲ್ಲಿರುವ ಕಲಾಪ್ರತಿಭೆ ಹಾಗೂ ಸೃಜನಶೀಲ ಸಾಮರ್ಥ್ಯವನ್ನು ಗುರುತಿಸಿ, ಪ್ರೋತ್ಸಾಹಿಸುವುದರ ಜೊತೆಗೆ, ಅವರನ್ನು ಕದಳೀ ವಿಶ್ವದರ್ಶನ ಮೇಳದ ಭಾಗೀದಾರರನ್ನಾಗಿಸುವ ಉದ್ದೇಶದಿಂದ 1 ರಿಂದ 10ನೇ ತರಗತಿಯ ವರೆಗಿನ ವಿದ್ಯಾರ್ಥಿಗಳಿಗಾಗಿ ಬಾಳೆ ಕೃಷಿ ಹಾಗೂ ಬಾಳೆಯ ಮಹತ್ವವನ್ನು ಆಧರಿಸಿದ ಚಿತ್ರಕಲಾ ಸ್ಪರ್ಧೆ ಆಯೋಜಿಸಲಾಗಿದೆ.ಈ ಸ್ಪರ್ಧೆಯು 22ದಂದು ಬೆಳಿಗ್ಗೆ 9 ಗಂಟೆಗೆ, ಯಕ್ಷಗಾನ ಕಲಾರಂಗದ ಐ.ವೈ.ಸಿ. ಸಭಾಂಗಣದಲ್ಲಿ ನಡೆಯಲಿದೆ. ಸ್ಪರ್ಧೆಯಲ್ಲಿ ಮೂಡಿಬರುವ ಅತ್ಯುತ್ತಮ ಚಿತ್ರಕೃತಿಗಳನ್ನು ಆಯ್ಕೆ ಮಾಡಿ, ವಿಜೇತ ವಿದ್ಯಾರ್ಥಿಗಳಿಗೆ ಡಿ.1ರ ಸಂಜೆ ಕದಳೀ ವಿಶ್ವದರ್ಶನ ಬಾಳೆ ಮೇಳದ ಸಮಾರೋಪ ಸಮಾರಂಭದಲ್ಲಿ ಬಹುಮಾನಗಳನ್ನು ಪ್ರದಾನ ಮಾಡಲಾಗುವುದು. ಚಿತ್ರಕಲಾ ಸ್ಪರ್ಧೆ: ವಿಭಾಗ 1 : (1 ರಿಂದ 3ನೇ ತರಗತಿ) ವಿಷಯ : ಬಾಳೆಗಿಡ - ಬಾಳೆಹಣ್ಣು ವ್ಯಾಪಾರ ಅಥವಾ ಬಾಳೆ ತೋಟ. ವಿಭಾಗ 2 : (4 ರಿಂದ 7ನೇ ತರಗತಿ) ವಿಷಯ: ಬಾಳೆಯ ತೋಟದಲ್ಲಿ ಮಂಗಗಳು ಅಥವಾ ಆನೆಗಳು ಅಥವಾ ಗೋವುಗಳು ವಿಭಾಗ 3 : (8 ರಿಂದ 10ನೇ ತರಗತಿ) ಬಾಳೆಯ ತೋಟದಲ್ಲಿ ಕೃಷ್ಣ ಬಲರಾಮ ಬಾಳೆಗೆ ಸಂಬಂಧಿಸಿದ ವಿಷಯಗಳಿಗೆ ಸಂಬಂಧಿಸಿದ ಚಿತ್ರಗಳನ್ನು ಮಾತ್ರ ಪರಿಗಣನೆಗೆ ತೆಗೆದುಕೊಳ್ಳಲಾಗುವುದು. ಸ್ವಂತ, ಸೃಜನಾತ್ಮಕ ಚಿತ್ರಗಳಿಗೆ ಪ್ರಾಧಾನ್ಯತೆ ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ಸಂಪರ್ಕ: ನಟರಾಜ ಉಪಾಧ್ಯಾಯ ( 9880945716 )
