ಕಡೂರುಡಿಸೆಂಬರ್ 31 ರ ಬುಧವಾರ ಸಂಜೆ ಕಡೂರು ಸಮೀಪದ ವೇದಾ ಪಾರ್ಕಿನಲ್ಲಿ ನಡೆಯಬೇಕಾಗಿದ್ದ ಕಡೂರು ಉತ್ಸವವನ್ನು ಕಾನೂನಿನ ತೊಡಕಿನಿಂದ ಮುಂದೂಡಲಾಗಿದೆ ಎಂದು ಎಂಪಿಕೆ ಈವೆಂಟ್ಸ್ ಮುಖ್ಯಸ್ಥ ಜಿಮ್ ಚೇತನ್ ತಿಳಿಸಿದರು.

ಎಂಪಿಕೆ ಈವೆಂಟ್ಸ್ ಆಯೋಜಿತ ಉತ್ಸವಕ್ಕೆ ಕಾನೂನು ತೊಡಕು

ಕನ್ನಡಪ್ರಭ ವಾರ್ತೆ, ಕಡೂರು

ಡಿಸೆಂಬರ್ 31 ರ ಬುಧವಾರ ಸಂಜೆ ಕಡೂರು ಸಮೀಪದ ವೇದಾ ಪಾರ್ಕಿನಲ್ಲಿ ನಡೆಯಬೇಕಾಗಿದ್ದ ಕಡೂರು ಉತ್ಸವವನ್ನು ಕಾನೂನಿನ ತೊಡಕಿನಿಂದ ಮುಂದೂಡಲಾಗಿದೆ ಎಂದು ಎಂಪಿಕೆ ಈವೆಂಟ್ಸ್ ಮುಖ್ಯಸ್ಥ ಜಿಮ್ ಚೇತನ್ ತಿಳಿಸಿದರು.ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬುಧವಾರ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಕಡೂರಿನ ಎಂಪಿಕೆ ಈವೆಂಟ್ಸ್ ಅವರು ಕಡೂರು ಉತ್ಸವಕ್ಕೆ ಕಾನೂನಿನ ತೊಡಕುಗಳು ಬಂದಿದ್ದರಿಂದ ಈ ಉತ್ಸವ ಮುಂದಿನ ದಿನಗಳಲ್ಲಿ ಮಾಡಲು ನಿರ್ಧರಿಸಲಾಗಿದೆ. ಕಡೂರಿನ ಜನತೆ ಸಹಕಾರ ನೀಡಬೇಕು ಎಂದರು.

ಕಾರ್ಯಕ್ರಮ ಆಯೋಜಿಸಿದಾಗ ಸಾರ್ವಜನಿಕರು ಕಡೂರು ಉತ್ಸವದ ಟಿಕೇಟ್ ಗಳನ್ನು ಖರೀದಿಸುವ ಮೂಲಕ ಪ್ರೋತ್ಸಾಹಿ ಸಿದ್ದಕ್ಕೆ ನಾವು ಜನರಿಗೆ ಆಭಾರಿಯಾಗಿದ್ದೇವೆ. ಆದರೆ ವೇದಾ ಪಾರ್ಕಿನಲ್ಲಿ ಉತ್ಸವ ಆಚರಣೆಗೆ ಸಿದ್ದತೆ ನಡೆಯುತ್ತಿರುವ ಬೆನ್ನಲ್ಲೇ ಕಾನೂನಿನ ತೊಡಕು ಇರುವ ಕಾರಣ ಬೇರೆಡೆ ನಡೆಸಲು ನಿರ್ಧರಿಸಲಾಗಿದೆ.

ಈಗಾಗಲೆ ಪಾಸ್‌ಗಳು ವಿತರಣೆಯಾಗಿದ್ದು, ಪಾಸ್ ಪಡೆದವರು ತಮ್ಮ ಪ್ರತಿನಿಧಿಗಳಿಂದ ವಾಪಸ್ ಹಣ ಪಡೆದುಕೊಳ್ಳುವಂತೆ ಆಯೋಜಕರು ಮನವಿ ಮಾಡಿದರು. ಉತ್ಸವದ ಪಾಸ್ ಪಡೆಯಲು ಉತ್ತಮ ಪ್ರತಿಕ್ರಿಯೆ ಸಾರ್ವಜನಿಕರಿಂದ ಬಂದಿತ್ತು ಅದಕ್ಕಾಗಿ ಧನ್ಯವಾದ ತಿಳಿಸುತ್ತೇವೆ. ಇದೇ ರೀತಿ ನಿಮ್ಮ ಪ್ರೋತ್ಸಾಹ ಮುಂದೆಯೂ ಇರಲಿ ಎಂದು ಮನವಿ ಮಾಡಿದರು. ಕಾಮಿಡಿ ಕಿಲಾಡಿಗಳ ಶೋನ ನಟಿ ನಯನಾ ಅವರ ಯು ಟ್ಯೂಬ್‌ ಚಾನಲ್‌ನಲ್ಲಿ ಕಡೂರು ಆ್‌ಲ್ಬ ಮ್ ಸಾಂಗ್ ಡಿ.31 ರ ಸಂಜೆ 6.33 ಕ್ಕೆ ಪ್ರಸಾರವಾಗಲಿದೆ ಎಂದು ಮಾಹಿತಿ ಮಿಮಿಕ್ರಿ ಪ್ರವೀಣ್ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾಜಿ ಪುರಸಭಾ ಸದಸ್ಯ ಮರುಗುದ್ದಿ ಮನು, ಮನುಗುಂಚಿ, ಹರ್ಷದ್, ಅಕ್ಷಯ್, ಸಂಜಯ್ ಮತ್ತಿತರರು ಹಾಜರಿದ್ದರು.24ಕೆಕೆಡಿಯು1. ಸುದ್ದಿಗೋಷ್ಠಿಯಲ್ಲಿ ಕಡೂರು ಎಂಪಿಕೆ ಇವೆಂಟ್ಸ್ ಪದಾಧಿಕಾರಿಗಳಾದ ಚೇತನ್,ಪ್ರವೀಣ್,ಅಕ್ಷಯ್,ಹರ್ಷದ್ ಇದ್ದರು.