ಮಂಗಳೂರು ನಗರದಲ್ಲಿ ಮತ್ತೆ ಕಾಡುಕೋಣ ಪ್ರತ್ಯಕ್ಷ!

| Published : Dec 05 2023, 01:30 AM IST

ಸಾರಾಂಶ

ಒಂಟಿ ಕೋಣ ಇದಾಗಿದ್ದು, ಇಲ್ಲಿನ ಕೆಲವೊಂದು ಮನೆಯ ಕಬ್ಬಿಣದ ಮುಳ್ಳಿನ ಬೇಲಿ ಹಾರಿ, ಬೇಲಿ ಮುರಿದ ಕುರುಹು ಪತ್ತೆಯಾಗಿದೆ. ಕೋಣದ ಓಡಾಟ ಸಿಸಿ ಕ್ಯಾಮರದಲ್ಲೂ ಸೆರೆಯಾಗಿದೆ‌.

ಕನ್ನಡಪ್ರಭ ವಾರ್ತೆ ಮಂಗಳೂರು

ನಗರದಲ್ಲಿ ಕೆಲವು ಸಮಯದ ಬಳಿಕ ಮತ್ತೆ ಕಾಡುಕೋಣ ಪ್ರತ್ಯಕ್ಷವಾಗಿದೆ. ಕದ್ರಿ ಕೈಬಟ್ಟಲು, ಕರಾವಳಿ ಲೇನ್ ಸುತ್ತಮುತ್ತಲಿನ ಪರಿಸರದಲ್ಲಿ ಭಾನುವಾರ ರಾತ್ರಿ, ಸೋಮವಾರ ಮುಂಜಾನೆ ಕಾಡುಕೋಣ ಕಾಣಿಸಿಕೊಂಡಿದೆ.ಒಂಟಿ ಕೋಣ ಇದಾಗಿದ್ದು, ಇಲ್ಲಿನ ಕೆಲವೊಂದು ಮನೆಯ ಕಬ್ಬಿಣದ ಮುಳ್ಳಿನ ಬೇಲಿ ಹಾರಿ, ಬೇಲಿ ಮುರಿದ ಕುರುಹು ಪತ್ತೆಯಾಗಿದೆ. ಕೋಣದ ಓಡಾಟ ಸಿಸಿ ಕ್ಯಾಮರದಲ್ಲೂ ಸೆರೆಯಾಗಿದೆ‌.

ವಿಷಯ ತಿಳಿದ ಅರಣ್ಯ ಅಧಿಕಾರಿಗಳು ಭಾನುವಾರ ರಾತ್ರಿಯೇ ಸ್ಥಳಕ್ಕೆ ಧಾವಿಸಿ ಕಾರ್ಯಾಚರಣೆ ನಡೆಸಿದ್ದಾರೆ. ಸೋಮವಾರ ಹಗಲಲ್ಲೂ ಕಾರ್ಯಾಚರಣೆ ಮುಂದುವರಿದಿತ್ತು.ಸೋಮವಾರ ಹಗಲಿನಲ್ಲಿ ಈ ಕಾಡುಕೋಣ ವಿಶ್ರಾಂತಿ ಪಡೆದಿರುವ ಶಂಕೆ ಇದ್ದು, ರಾತ್ರಿ ಹೊತ್ತು ಸಂಚರಿಸುವುದರಿಂದ ಅರಣ್ಯ ಇಲಾಖೆ ಅಧಿಕಾರಿಗಳು ರಾತ್ರಿಗಾಗಿ ಕಾದು ಕಾರ್ಯಾಚರಿಸುವುದಾಗಿ ತಿಳಿಸಿದ್ದಾರೆ. ಮಂಗಳೂರು ಮಹಾನಗರ ಪಾಲಿಕೆಯ ಸದಸ್ಯ ಮನೋಹರ ಶೆಟ್ಟಿ ಸ್ಥಳದಲ್ಲಿದ್ದರು.