2025ರ ಏ. 1ರಂದು ಇಎಂಸಿಸಿಆರ್ ಮತ್ತು ಇಎಂಎಫ್ಆರ್ ಸೇರಿದಂತೆ ಪ್ರಮುಖ ಪುನರುಜ್ಜೀವನ ಹಾಗೂ ನವೀಕರಣ ಕಾಮಗಾರಿಗಳಿಗಾಗಿ ಸ್ಥಗಿತಗೊಳಿಸಲಾಗಿದ್ದ ಘಟಕವು ಕೇವಲ 600 ದಿನಗಳಲ್ಲಿ ಕ್ರಿಟಿಕಾಲಿಟಿ ಸಾಧಿಸಿರುವುದು ವಿಶೇಷವಾಗಿದೆ.
ಕಾರವಾರ: ಕೈಗಾ ಅಣು ವಿದ್ಯುತ್ ಸ್ಥಾವರದ ಘಟಕ- 1 ನ. 22ರ ಬೆಳಗ್ಗೆ ಯಶಸ್ವಿಯಾಗಿ ಕ್ರಿಟಿಕಾಲಿಟಿ ಹಂತ ತಲುಪಿದೆ. ಅಂದರೆ, ಅಣು ರಿಯಾಕ್ಟರ್ನಲ್ಲಿ ನಿಯಂತ್ರಿತ ಮತ್ತು ನಿರಂತರ ಅಣು ವಿದಳನ ಸರಪಳಿ ಕ್ರಿಯೆ ಆರಂಭಗೊಂಡಿದೆ ಎಂದು ಭಾರತೀಯ ಅಣು ವಿದ್ಯುತ್ ನಿಗಮ(ಎನ್ಪಿಸಿಐಎಲ್) ಪ್ರಕಟಣೆಯಲ್ಲಿ ತಿಳಿಸಿದೆ.2025ರ ಏ. 1ರಂದು ಇಎಂಸಿಸಿಆರ್ ಮತ್ತು ಇಎಂಎಫ್ಆರ್ ಸೇರಿದಂತೆ ಪ್ರಮುಖ ಪುನರುಜ್ಜೀವನ ಹಾಗೂ ನವೀಕರಣ ಕಾಮಗಾರಿಗಳಿಗಾಗಿ ಸ್ಥಗಿತಗೊಳಿಸಲಾಗಿದ್ದ ಘಟಕವು ಕೇವಲ 600 ದಿನಗಳಲ್ಲಿ ಕ್ರಿಟಿಕಾಲಿಟಿ ಸಾಧಿಸಿರುವುದು ವಿಶೇಷವಾಗಿದೆ. ಈ ಸಾಧನೆಯೊಂದಿಗೆ ಇಷ್ಟು ಕಡಿಮೆ ಅವಧಿಯಲ್ಲಿ ಕ್ರಿಟಿಕಾಲಿಟಿ ತಲುಪಿದ ಎನ್ಪಿಸಿಐಎಲ್ನ ಮೊದಲ ರಿಯಾಕ್ಟರ್ ಎಂಬ ಹೆಗ್ಗಳಿಕೆಗೆ ಕೆಜಿಎಸ್- 1 ಪಾತ್ರವಾಗಿದೆ ಎಂದು ಸಂಸ್ಥೆ ತಿಳಿಸಿದೆ.ಈ ಸಾಧನೆಯು ಕೈಗಾ ಘಟಕದ ಸಿಬ್ಬಂದಿಯ ಅಪಾರ ಪರಿಶ್ರಮ, ತಾಂತ್ರಿಕ ಪರಿಣಿತಿ, ಬದ್ಧತೆ ಹಾಗೂ ಸಂಘಟಿತ ತಂಡದ ಕಾರ್ಯನಿರ್ವಹಣೆಗೆ ಸಾಕ್ಷಿಯಾಗಿದೆ. ಕೈಗಾ ತಂಡ, ಎನ್ಪಿಸಿಐಎಲ್ ಕುಟುಂಬ ಹಾಗೂ ಅಣುಶಕ್ತಿ ಇಲಾಖೆಯ ಸಮಸ್ತ ಸಿಬ್ಬಂದಿಗೆ ಸಂಸ್ಥೆಯು ಅಭಿನಂದನೆ ಸಲ್ಲಿಸಿದೆ. ಹಟ್ಟಿಕೇರಿ ಟೋಲ್ ಗೇಟ್ ಬಳಿ ಹುಲ್ಲಿನ ಪ್ರದೇಶಕ್ಕೆ ಬೆಂಕಿ
ಅಂಕೋಲಾ: ತಾಲೂಕಿನ ಹಟ್ಟಿಕೇರಿ ಟೋಲ್ ಗೇಟ್ ಬಳಿ ಏಕಾಏಕಿ ಬೆಳೆದು ನಿಂತ ಹುಲ್ಲಿಗೆ ಬೆಂಕಿ ತಗುಲಿದ್ದು, ಸುಮಾರು ಒಂದು ಕಿಮೀಯಷ್ಟು ಉದ್ದದ ಪ್ರದೇಶ ಬೆಂಕಿಗೆ ಆಹುತಿಯಾಗಿದೆ.ತಕ್ಷಣ ಸ್ಥಳಕ್ಕೆ ಆಗಮಿಸಿದ ಅಂಕೋಲಾ ಅಗ್ನಿಶಾಮಕ ಠಾಣೆಯ ಠಾಣಾಧಿಕಾರಿಗಳು ಮತ್ತು ಸಿಬ್ಬಂದಿ ಹರಸಾಹಸ ಪಟ್ಟು ಬೆಂಕಿ ಆರಿಸಿದರು.ಠಾಣಾಧಿಕಾರಿ ರಾಜೇಶ್ ನಾಯಕ, ಸಿಬ್ಬಂದಿಗಳಾದ ಗಣೇಶ ನಾಯಕ್, ಕುಮಾರ್ ಗೌಡ, ಮಂಜುನಾಥ್ ನಾಯಕ್, ವಿನ್ಯಾಸ ನಾಯಕ್ ಸೇರಿದಂತೆ ಇತರರು ಬೆಂಕಿ ಆರಿಸಲು ಶ್ರಮಿಸಿ ಗಂಟೆಗಟ್ಟಲೆ ಶ್ರಮಿಸಿ ಬೆಂಕಿ ನಂದಿಸಿದರು.ಈ ಪ್ರದೇಶದ ಮೇಲ್ಭಾಗದಲ್ಲಿ ಸೀಬರ್ಡ್ ಸಂಬಂಧಪಟ್ಟ ಅಕೇಶಿಯಾ ಮರಗಳಿದ್ದು, ಸ್ವಲ್ಪ ಸಮಯ ಕಳೆದರೂ ಸಂಪೂರ್ಣ ಬೆಟ್ಟವೇ ಬೆಂಕಿಗೆ ಆಹುತಿಯಾಗುತ್ತಿತ್ತು. ಅಧಿಕಾರಿಗಳ ಕರ್ತವ್ಯಪ್ರಜ್ಞೆಯಿಂದ ಆಗುವ ದೊಡ್ಡ ಅನಾಹುತ ತಪ್ಪಿದಂತಾಗಿದೆ.