ಕೈವಾರ ತಾತಯ್ಯನವರ ಜಯಂತಿ

| Published : Mar 27 2025, 01:04 AM IST

ಸಾರಾಂಶ

ಕೈವಾರ ತಾತಯ್ಯನವರು ಪವಾಡ ಪುರುಷರು ಹಾಗೂ ಕಾಲಜ್ಞಾನಿಗಳಾಗಿದ್ದು, ಇಂದಿನ ಯುವಜನತೆ ತಾತಯ್ಯನವರ ತತ್ವ- ಸಿದ್ಧಾಂತಗಳನ್ನು ಮೈಗೂಡಿಸಿಕೊಳ್ಳಬೇಕು ಹಾಗೂ ಪೋಷಕರು ತಮ್ಮ ಮಕ್ಕಳಿಗೆ ಆಸ್ತಿ ಸಂಪಾದನೆ ಮಾಡುವ ಬದಲು ಶಿಕ್ಷಣ ಕೊಡಿಸಲು ಮುಂದಾಗಬೇಕು

ಚಿಂತಾಮಣಿ: ಕೈವಾರ ತಾತಯ್ಯನವರು ಪವಾಡ ಪುರುಷರು ಹಾಗೂ ಕಾಲಜ್ಞಾನಿಗಳಾಗಿದ್ದು, ಇಂದಿನ ಯುವಜನತೆ ತಾತಯ್ಯನವರ ತತ್ವ- ಸಿದ್ಧಾಂತಗಳನ್ನು ಮೈಗೂಡಿಸಿಕೊಳ್ಳಬೇಕು ಹಾಗೂ ಪೋಷಕರು ತಮ್ಮ ಮಕ್ಕಳಿಗೆ ಆಸ್ತಿ ಸಂಪಾದನೆ ಮಾಡುವ ಬದಲು ಶಿಕ್ಷಣ ಕೊಡಿಸಲು ಮುಂದಾಗಬೇಕು ಎಂದು ತಹಸೀಲ್ದಾರ್ ಸುದರ್ಶನ್ ಯಾದವ್ ತಿಳಿಸಿದರು. ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಹಾಗೂ ಬಲಿಜ ಸಮುದಾಯದಿಂದ ನಗರದ ನಾಗನಾಥೇಶ್ವರಸ್ವಾಮಿ ದೇವಾಲಯದ ಆವರಣದಲ್ಲಿ ಕೈವಾರ ತಾತಯ್ಯನವರ ಮಠದಲ್ಲಿ ನಡೆದ ೨೯೯ನೇ ಜಯಂತಿಯಲ್ಲಿ ಕೈವಾರ ತಾತಯ್ಯನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು. ಬಲಿಜ ಸಮುದಾಯದಲ್ಲಿ ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿ ಯಲ್ಲಿ ಹೆಚ್ಚಿನ ಅಂಕ ಪಡೆದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ತಾಪಂ ಇಒ ಆನಂದ್, ಉಪ ತಹಸೀಲ್ದಾರ್ ಮೋಹನ್‌ ಕುಮಾರ್, ಬಲಿಜ ಸಂಘದ ತಾಲೂಕು ಅಧ್ಯಕ್ಷ ಮುರುಗಮಲ್ಲ ಲಕ್ಷ್ಮೀನಾರಾಯಣರೆಡ್ಡಿ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಅಶೋಕ್‌ ಕುಮಾರ್, ಕಸಾಪ, ಅಧ್ಯಕ್ಷ ಶ್ರೀನಿವಾಸ್, ನಗರಸಭೆ ಅಧ್ಯಕ್ಷ ಜಗನ್ನಾಥ್, ನಗರಸಭಾ ಸದಸ್ಯರಾದ ರಾಜಾಚಾರಿ. ಕಳಾವತಿ ಆಂಜಿನಪ್ಪ, ಸಮುದಾಯದ ಮುಖಂಡರಾದ ಕುಂಟೆಗಡ್ಡೆ ಲಕ್ಷ್ಮಣ್, ಶಿವಣ್ಣ, ಆರ್‌ಎಂಜೆ ಶ್ರೀನಿವಾಸ್, ಅಶ್ವತ್ಥ್, ಕಟಾಯಪ್ಪಗಾರಿ ವೆಂಕಟರಮಣಪ್ಪ, ಕಾಗತಿ ಚಲಂ, ಎಸ್.ವಿಜಯಮ್ಮ, ವಿ.ನಾಗರಾಜ್, ವೆಂಕಟಾಚಲಪತಿ, ಜಿ.ಎಲ್.ಶಂಕರ್, ನವೀನ್, ವೇಣು, ವಿ.ಕೆ.ಕೃಷ್ಣಪ್ಪ ಸೇರಿ ಬಲಿಜ ಸಮುದಾಯದ ಮುಖಂಡರು ಉಪಸ್ಥಿತರಿದ್ದರು.