ಕೈವಾರ ತಾತಯ್ಯ ತಮ್ಮ ತತ್ವಪದಗಳು ಇಂದಿಗೂ ಪ್ರಸ್ತುತ- ಆದರ್ಶ ಎಲ್ಲರಿಗೂ ಮಾದರಿ: ಪ್ರದೀಪ್ ಈಶ್ವರ್

| Published : Aug 26 2024, 01:40 AM IST / Updated: Aug 26 2024, 05:17 AM IST

ಕೈವಾರ ತಾತಯ್ಯ ತಮ್ಮ ತತ್ವಪದಗಳು ಇಂದಿಗೂ ಪ್ರಸ್ತುತ- ಆದರ್ಶ ಎಲ್ಲರಿಗೂ ಮಾದರಿ: ಪ್ರದೀಪ್ ಈಶ್ವರ್
Share this Article
  • FB
  • TW
  • Linkdin
  • Email

ಸಾರಾಂಶ

ಕೈವಾರ ತಾತಯ್ಯ ತಮ್ಮ ತತ್ವಪದಗಳು ಇಂದಿಗೂ ಪ್ರಸ್ತುತ. ಅವರು ತತ್ವಪದಗಳ ಮೂಲಕ ಸಮಾಜದ ಅಂಕುಡೊಂಕು ತಿದ್ದುವ ಪ್ರಯತ್ನ ಮಾಡಿದರು. ಅವರ ಆದರ್ಶಗಳು ನಮ್ಮೆಲ್ಲರಿಗೂ ಮಾದರಿಯಾಗಿದೆ ಎಂದು ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ತಿಳಿಸಿದರು. 

  ಚನ್ನಪಟ್ಟಣ :  ಕೈವಾರ ತಾತಯ್ಯ ತಮ್ಮ ತತ್ವಪದಗಳು ಇಂದಿಗೂ ಪ್ರಸ್ತುತ. ಅವರು ತತ್ವಪದಗಳ ಮೂಲಕ ಸಮಾಜದ ಅಂಕುಡೊಂಕು ತಿದ್ದುವ ಪ್ರಯತ್ನ ಮಾಡಿದರು. ಅವರ ಆದರ್ಶಗಳು ನಮ್ಮೆಲ್ಲರಿಗೂ ಮಾದರಿಯಾಗಿದೆ ಎಂದು ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ತಿಳಿಸಿದರು. 

ನಗರದ ಶತಮಾನೋತ್ಸವ ಭವನದಲ್ಲಿ ಶ್ರೀ ಕೃಷ್ಣದೇವರಾಯ ಬಲಿಜ ಸಂಘದ ಆಯೋಜಿಸಿದ್ದ ಕೈವಾರ ತಾತಯ್ಯನವರ ಆರಾಧನೆ, 7ನೇ ವರ್ಷದ ವಾರ್ಷಿಕೋತ್ಸವ ಹಾಗೂ ಸಮಾಜದ ಪ್ರತಿಭಾವಂತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.ಕೈವಾರ ತಾತಯ್ಯನವರ ತತ್ವ, ಆದರ್ಶಗಳ ಮೇಲೆ ನಮ್ಮ ಬದುಕು ರೂಪಿತವಾಗಬೇಕು.

 ಅವರು ತಮ್ಮ ಜೀವನದಲ್ಲಿ ಕಂಡುಕೊಂಡ ಸತ್ಯಗಳನ್ನು ಜನರಿಗೆ ತಲುಪಿಸಿದರು. ಅವರು ಅಲೌಕಿಕ ವಾದವನ್ನು ಅಳವಡಿಸಿಕೊಂಡು ಜನಸಾಮಾನ್ಯರಿಗೆ ಸನ್ಮಾರ್ಗ ತೋರಿಸಿದ ಅಂತಹ ಮಹಾನ್ ಸಂತ. ಅವರ ತತ್ವಗಳನ್ನು ಮುಂದಿನ ಪೀಳಿಗೆಗೆ ತಲುಪಿಸುವ ಗುರುತರ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.ಜಿಲ್ಲಾ ಬಿಲಿಜ ಸಂಘದ ಅಧ್ಯಕ್ಷ ವಿ.ಕಿಶೋರ್ ಮಾತನಾಡಿ, ಈ ಹಿಂದೆ ಬಣಜಿಗ ಎಂದು ಗುರುತಿಸಲ್ಪಡುತ್ತಿದ್ದ ನಮ್ಮ ಸಮಾಜ ಇಂದು ಬಲಿಜ ಎಂದು ಮರುನಾಮಕರಣಗೊಂಡಿದೆ. ಸಣ್ಣಪುಟ್ಟ ವ್ಯಾಪಾರ ಮಾಡುತ್ತಿರುವ ನಮ್ಮ ಸಮಾಜದವರು ಇನ್ನೂ ಬಡತನದಲ್ಲೆ ಜೀವಿಸುತ್ತಿದ್ದಾರೆ. 

ಸಮಾಜದ ಅರ್ಥಿಕ ಪ್ರಗತಿಗೆ ಅನೂಕೂಲವಾಗುವಂತೆ ಸರ್ಕಾರ ಯೋಜನೆಗಳನ್ನು ರೂಪಿಸಬೇಕೆಂದು ಮನವಿ ಮಾಡಿಕೊಂಡರು.ಕೇವಲ ಶಿಕ್ಷಣದಲ್ಲಿ ಮಾತ್ರ ನಮಗೆ ಮೀಸಲಾಯಿತಿ ದೊರೆಯುತ್ತಿದ್ದು, ಉದ್ಯೋಗ ಹಾಗೂ ರಾಜಕೀಯದಲ್ಲೂ ಮೀಸಲಾತಿ ಒದಗಿಸುವಂತೆ ಸರ್ಕಾರವನ್ನು ಒತ್ತಾಯಿಸುವ ಕೆಲಸವನ್ನು ನಾವೆಲ್ಲರೂ ಮಾಡಬೇಕಿದೆ. ಕಳೆದ ಸರ್ಕಾರ ಬಲಿಜ ನಿಗಮ ಮಂಡಳಿ ರಚಿಸಿದ್ದರೂ ಇಂದಿನ ಸರಕಾರ ಅದಕ್ಕೆ ಅಗತ್ಯ ಅನುದಾನ ನೀಡದಿರುವ ಬಗ್ಗೆಯು ಹೋರಾಟ ರೂಪಿಸಬೇಕಾದ ಅನಿವಾರ್ಯತೆ ಇದೆ ಎಂದರು. 

ಇದೇ ವೇಳೆ ಕಾಂಗರೋ ಕೇರ್‌ನ ಸಂಸ್ಥಾಪಕ ಶೇಖರ್ ಸುಬ್ಬಯ್ಯ, ಹೃದಯರೋಗ ತಜ್ಞ ನಟರಾಜ್ ಶೆಟ್ಟಿ ಹಾಗೂ ಮಕ್ಕಳ ತಜ್ಞೆ ಡಾ. ರಾಜಶ್ರೀ ಅವರನ್ನು ಸನ್ಮಾನಿಸಲಾಯಿತು. ಅತಿ ಹೆಚ್ಚು ಅಂಕಗಳಿಸಿದ ಬಲಿಜ ಸಮಾಜದ ೨೦ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.ಕಾರ್ಯಕ್ರಮದಲ್ಲಿ ಕರ್ನಾಟಕ ಬಲಿಜ ವೇದಿಕೆಯ ಮುನಿಕೃಷ್ಣ, ರಾಜ್ಯ ಕಾರ್ಯದರ್ಶಿ ಜಗದೀಶ್, ಪ್ರಶಾಂತ್, ರಾಮುಲು ಇತರರು ಇದ್ದರು.