ಸುಮುಖ ಪ್ರೊಡಕ್ಷನ್ಸ್‌ ಲಾಂಛನದಲ್ಲಿ ಜಿಸ್ನು ಎಸ್ ಮೆನನ್ ಮತ್ತು ಸಿದ್ದಾರ್ಥ್‌ ಶೆಟ್ಟಿ ನಿರ್ದೇಶನ ವಿಶಾಂತ್ ಮಿನೆಜಸ್ ನಿರ್ಮಾಣದಲ್ಲಿ ತಯಾರಾದ ‘ಕಜ್ಜ’ ತುಳು ಸಿನಿಮಾ ಮಂಗಳೂರಿನ ಭಾರತ್ ಮಾಲ್‌ನಲ್ಲಿರುವ ಭಾರತ್ ಸಿನಿಮಾಸ್‌ನಲ್ಲಿ ಗುರುವಾರ ತೆರೆ ಕಂಡಿತು.

ಮಂಗಳೂರು: ಸುಮುಖ ಪ್ರೊಡಕ್ಷನ್ಸ್‌ ಲಾಂಛನದಲ್ಲಿ ಜಿಸ್ನು ಎಸ್ ಮೆನನ್ ಮತ್ತು ಸಿದ್ದಾರ್ಥ್‌ ಶೆಟ್ಟಿ ನಿರ್ದೇಶನ ವಿಶಾಂತ್ ಮಿನೆಜಸ್ ನಿರ್ಮಾಣದಲ್ಲಿ ತಯಾರಾದ ‘ಕಜ್ಜ’ ತುಳು ಸಿನಿಮಾ ಮಂಗಳೂರಿನ ಭಾರತ್ ಮಾಲ್‌ನಲ್ಲಿರುವ ಭಾರತ್ ಸಿನಿಮಾಸ್‌ನಲ್ಲಿ ಗುರುವಾರ ತೆರೆ ಕಂಡಿತು.

ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು, ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಸಮಾರಂಭವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು.ತುಳುಚಿತ್ರರಂಗಕ್ಕೆ ತನ್ನದೇ ಆದ ಇತಿಹಾಸ ಇದೆ. ‘ಕಜ್ಜ’ ತುಳು ಸಿನಿಮಾ ಯಶಸ್ವಿ ಪ್ರದರ್ಶನಗಳನ್ನು ದಾಖಲಿಸಲಿ ಎಂದು ಹರಿಕೃಷ್ಣ ಪುನರೂರು ಹೇಳಿದರು.

ಪ್ರದೀಪ್ ಕಲ್ಕೂರ ಮಾತನಾಡಿ, ತುಳು ಭಾಷೆಯ ಬೆಳವಣಿಗೆಯಲ್ಲಿ ತುಳು ಚಿತ್ರರಂಗದ ದೊಡ್ಡ ಕೊಡುಗೆ ಇದೆ. ‘ಕಜ್ಜ’ ಸಿನಿಮಾವನ್ನು ಪ್ರತಿಯೋರ್ವರು ನೋಡಿ ಪ್ರೋತ್ಸಾಹಿಸಬೇಕು ಎಂದರು.

ನಿರ್ದೇಶಕ ವಿಜಯಕುಮಾರ್ ಕೊಡಿಯಾಲ್ ಬೈಲ್ ಮಾತನಾಡಿ, ನಾಯಕ ನಟ ಸಿದ್ದಾರ್ಥ್‌ ಶೆಟ್ಟಿ ಮತ್ತು ಮೋಹನ್ ರಾಜ್ ಕಜ್ಜ ಸಿನಿಮಾಕ್ಕಾಗಿ ದುಡಿದಿದ್ದಾರೆ. ಅವರ ತಪಸ್ಸು ಫಲ ಕೊಡಲಿ, ತುಳುಸಿನಿಮಾರಂಗದಲ್ಲಿ ಕಜ್ಜ ದಾಖಲೆ ಬರೆಯಲಿ ಎಂದರು.ನಿರ್ದೇಶಕ ಪ್ರಕಾಶ್ ಪಾಂಡೇಶ್ವರ್ ಮಾತನಾಡಿ, ಕಜ್ಜ ಸಿನಿಮಾ ಪ್ರೀಮಿಯರ್ ಶೋ ಮೂಲಕ ಮೆಚ್ಚುಗೆ ಗಳಿಸಿದೆ. ಎಲ್ಲರೂ ಸಿನಿಮಾ ನೋಡಿ ಪ್ರೋತ್ಸಾಹಿಸಿ ಎಂದರು.ನಿಟ್ಟೆಗುತ್ತು ರವಿರಾಜ್ ಶೆಟ್ಟಿ, ಬಾಲಕೃಷ್ಣ ಶೆಟ್ಟಿ, ಹರೀಶ್ ಶೆಟ್ಟಿ, ಪ್ರೇಮ್ ಶೆಟ್ಟಿ ಸುರತ್ಕಲ್, ಮೋಹನ್ ಕೊಪ್ಪಲ, ಸಂದೇಶ್ ಸುವರ್ಣ, ಕ್ಲಿಪರ್ಡ್‌ ಸ್ವಿಕೇರಾ, ಸಂದೇಶ್ ಬಂಗೇರ, ಸ್ವರಾಜ್ ಶೆಟ್ಟಿ, ಮೋಹನ್ ರಾಜ್, ಸಿದ್ದಾರ್ಥ್‌ ಶೆಟ್ಟಿ, ರೂಪ ವರ್ಕಾಡಿ, ವೆನ್ಸಿಟಾ ಡಯಾಸ್, ಶ್ವೇತಾ ಕೋಟ್ಯಾನ್, ಗೌತಮ್ ಬಂಗೇರ ಮತ್ತಿತರರಿದ್ದರು. ಕನ್ನಡದ ಖ್ಯಾತ ನಟ ವಸಿಷ್ಠ ಸಿಂಹ ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಕಜ್ಜ ತುಳು ಸಿನಿಮಾ ಮಂಗಳೂರು, ಸುರತ್ಕಲ್, ಪಡುಬಿದ್ರೆ, ಉಡುಪಿ, ಮಣಿಪಾಲ, ಕಾರ್ಕಳ ಕುಂದಾಪುರ, ಬೆಳ್ತಂಗಡಿ, ಸುಳ್ಯ, ಮುಡಿಪು ಮೊದಲಾದ ಕಡೆಗಳಲ್ಲಿ ತೆರೆಕಂಡಿದೆ. ‘ಕಜ್ಜ’ ಅಂದರೆ ತುಳುವಿನಲ್ಲಿ ಕಾರ್ಯ ಎಂದರ್ಥ. ಒಂದೊಳ್ಳೆಯ ಕಾರ್ಯವನ್ನು ಮಾಡಲು ನಾವೆಲ್ಲ ಒಂದಾಗಿದ್ದೇವೆ. ಹಿಂದಿನ ಸಿನಿಮಾ ‘ತುಡರ್’ ಸಿನಿಮಾಕ್ಕೆ ಕೊಟ್ಟಷ್ಟೇ ಪ್ರೋತ್ಸಾಹ ಪ್ರೀತಿಯನ್ನು ಈ ಬಾರಿಯೂ ‘ಕಜ್ಜ’ ಸಿನಿಮಾಕ್ಕೂ ನೀಡಿ ಎಂದು ನಟ ಸಿದ್ದಾಥ್೯ ಶೆಟ್ಟಿ ತಿಳಿಸಿದರು.ಕಜ್ಜ ಸಿನಿಮಾದಲ್ಲಿ ಸಿದ್ದಾಥ್೯ ಶೆಟ್ಟಿ, ಅರವಿಂದ ಬೋಳಾರ್, ಉದಯ ಪೂಜಾರಿ, ಉಮೇಶ್ ಮಿಜಾರ್, ಜಯಶ್ರೀ, ಶ್ವೇತಾ ಕೋಟ್ಯಾನ್, ಸಹನಾ ಸುಧಾಕರ್, ವೆನ್ಸಿಟಾ ಡಯಾಸ್, ಮೋಹನ್ ರಾಜ್, ಗೌತಮ್ ಬಂಗೇರ, ಸುವರ್ಣ ಪೂಜಾರಿ, ಸವಿತಾ ಅಂಚನ್, ಶಾಹಿನ್ ಶೇಖ್, ಸನ್ನಿಧಿ ಶೆಟ್ಟಿ ಅಭಿನಯಿಸಿದ್ದಾರೆ.