ಸಾರಾಂಶ
ದೇವಾಲಯದ ಮುಖ್ಯ ದ್ವಾರದಿಂದ ನಾಗನಕಟ್ಟೆ ವರೆಗೆ 12 ಲಕ್ಷ ರು. ವೆಚ್ಚದಲ್ಲಿ ಏರುಗತಿಯ ಹಾದಿಗೆ ಬಿಸಿಲು ಮಳೆಯಿಂದ ಭಕ್ತಾದಿಗಳಿಗೆ ರಕ್ಷಣೆಗಾಗಿ ಹಾದಿಯುದ್ದಕ್ಕೂ ಅಲ್ಯೂಮಿನಿಯಂ ಫ್ಯಾಬ್ರಿಕೇಷನ್ ಮತ್ತು ಹಂಚಿನ ಮೇಲ್ಛಾವಣಿ ಕೆಲಸಕ್ಕೆ ವಿಧ್ಯುಕ್ತ ಚಾಲನೆ ನೀಡಲಾಯಿತು.
ಕನ್ನಡ್ರಭ ವಾರ್ತೆ ನಾಪೋಕ್ಲು
ಕಕ್ಕಬ್ಬೆ ಪಾಡಿ ಶ್ರೀ ಇಗ್ಗುತಪ್ಪ ದೇವರ ಸನ್ನಿಧಿಯಲ್ಲಿ ಭಕ್ತ ಜನ ಸಂಘ ವತಿಯಿಂದ ಮೇಲ್ಛಾವಣಿ ಕಾಮಗಾರಿಗೆ ಬುಧವಾರ ಚಾಲನೆ ನೀಡಲಾಯಿತು.ದೇವಾಲಯದ ಮುಖ್ಯ ದ್ವಾರದಿಂದ ನಾಗನಕಟ್ಟೆ ವರೆಗೆ 12 ಲಕ್ಷ ರು. ವೆಚ್ಚದಲ್ಲಿ ಏರುಗತಿಯ ಹಾದಿಗೆ ಬಿಸಿಲು ಮಳೆಯಿಂದ ಭಕ್ತಾದಿಗಳಿಗೆ ರಕ್ಷಣೆಗಾಗಿ ಹಾದಿಯುದ್ದಕ್ಕೂ ಅಲ್ಯೂಮಿನಿಯಂ ಫ್ಯಾಬ್ರಿಕೇಷನ್ ಮತ್ತು ಹಂಚಿನ ಮೇಲ್ಛಾವಣಿ ಕೆಲಸಕ್ಕೆ ವಿಧ್ಯುಕ್ತ ಚಾಲನೆ ನೀಡಲಾಯಿತು.
ಸನ್ನಿಧಿಯ ಮುಖ್ಯ ದ್ವಾರದಿಂದ ನಾಗನಕಟ್ಟೆಯ ವರೆಗಿನ ಪ್ರದೇಶಕ್ಕೆ ಮಳೆಗಾಲದಲ್ಲಿ ಏರುಗತಿಯ ದಾರಿಯಲ್ಲಿ ಪಾಚಿಗಟ್ಟಿ ಜಾರುವ ದಾರಿಯಿಂದಾಗಿ ಭಕ್ತರು ನಡೆದಾಡಲು ಕಷ್ಟ ಪಡುತ್ತಿದ್ದರು. ಇದನ್ನು ಮನಗಂಡ ಭಕ್ತ ಜನ ಸಂಘದ ಪದಾಧಿಕಾರಿಗಳು ಯೋಜನೆ ರೂಪಿಸಿದ್ದು ಮೇಲ್ಛಾವಣಿ ನಿರ್ಮಿಸಲು ನಿರ್ಧರಿಸಲಾಗಿತ್ತು.ಭಕ್ತ ಜನ ಸಂಘದ ಅಧ್ಯಕ್ಷ, ಅಖಿಲ ಕೊಡವ ಸಮಾಜ ಅಧ್ಯಕ್ಷರೂ ಆಗಿರುವ ಪರದಂಡ ಸುಬ್ರಮಣಿ ಕಾವೇರಪ್ಪ ಪ್ರಾರ್ಥನೆ ಸಲ್ಲಿಸಿ ಕಾಮಗಾರಿಗೆ ಚಾಲನೆ ನೀಡಿದರು. ಅರ್ಚಕ ಜಗದೀಶ್ ಪ್ರಸಾದ್ ಪೂಜಾ ವಿಧಿ ವಿಧಾನ ನೆರವೇರಿಸಿದರು.
ಭಕ್ತ ಜನಸಂಘದ ಉಪಾಧ್ಯಕ್ಷ ಕಲ್ಯಾಟಂಡ ರಾಜ ಅಪ್ಪಣ್ಣ, ಕಾರ್ಯದರ್ಶಿ ಬಟ್ಟೀರ ಚೊಂದಮ್ಮ ಮೇದಪ್ಪ, ಖಜಾಂಚಿ ಅಂಜಪರವಂಡ ಕುಶಾಲಪ್ಪ, ನಿರ್ದೇಶಕರಾದ ಪರದಂಡ ಸದಾ ನಾಣಯ್ಯ, ಕುಲೇಟೀರ ಅರುಣ್ ಬೇಬ, ಕುಲೇಟೀರ ರಂಜನ್, ಕಂಬೆಯ೦ಡ ಬೊಳ್ಳಪ್ಪ, ಕಂಬೆಯ೦ಡ ಗಣೇಶ್ ಮತ್ತಿತರರಿದ್ದರು.