ಕುಶಾಲನಗರ ಕೊಡವ ಸಮಾಜದಲ್ಲಿ ‘ಕಕ್ಕಡ ನಮ್ಮೆ’

| Published : Aug 05 2024, 12:41 AM IST

ಸಾರಾಂಶ

ಕುಶಾಲನಗರದಲ್ಲಿ ಕಕ್ಕಡ ನಮ್ಮೆ ಕಾರ್ಯಕ್ರಮ ನಡೆಯಿತು. ಸಮಾಜದ ಅಧ್ಯಕ್ಷ ಮಂಡೆಪಂಡ ಬೋಸ್‌ ಮೊಣ್ಣಪ್ಪ ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ಕುಶಾಲನಗರ

ಕುಶಾಲನಗರ ಕೊಡವ ಸಮಾಜ ಮತ್ತು ಪೊಮ್ಮಕ್ಕಡ ಕೂಟದ ಆಶ್ರಯದಲ್ಲಿ ಕುಶಾಲನಗರದಲ್ಲಿ ಕಕ್ಕಡ ನಮ್ಮೆ ಕಾರ್ಯಕ್ರಮ ನಡೆಯಿತು.

ಕೊಡವ ಸಮಾಜ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮವನ್ನು ಸಮಾಜದ ಅಧ್ಯಕ್ಷ ಮಂಡೆಪಂಡ ಬೋಸ್ ಮೊಣ್ಣಪ್ಪ ಉದ್ಘಾಟಿಸಿ ಮಾತನಾಡಿ, ಕುಶಾಲನಗರ ಕೊಡವ ಸಮಾಜ ಆರಂಭಗೊಂಡು ನಾಲ್ಕು ದಶಕಗಳು ಕಳೆದಿದ್ದು ಇದೀಗ ಪ್ರಥಮ ಬಾರಿಗೆ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಯುವ ಪೀಳಿಗೆಗೆ ಹಿಂದಿನ ಪರಂಪರೆ ಸಂಸ್ಕೃತಿ ಆಚಾರ ವಿಚಾರಗಳು ಹಾಗೂ ಔಷಧೀಯ ಆಹಾರಗಳ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳು ಅಗತ್ಯವಾಗಿದೆ ಎಂದು ಹೇಳಿದರು.

ವಿಶೇಷ ತಿಂಡಿ ತಿನಿಸುಗಳ ಪ್ರದರ್ಶನ ಮಾರಾಟ ವ್ಯವಸ್ಥೆಯನ್ನು ಪೊಮ್ಮಕ್ಕಡ ಕೂಟದ ಸದಸ್ಯರು ಹಮ್ಮಿಕೊಂಡಿದ್ದರು. ಕಕ್ಕಡ 18 ವಿಶೇಷ ಖಾದ್ಯಗಳಾದ ಮದ್ದುಪಾಯಸ, ಮದ್ದುಪುಟ್ಟ್ ಮತ್ತಿತರ ತಿಂಡಿ ತಿನಿಸುಗಳನ್ನು ಪ್ರದರ್ಶನಕ್ಕೆ ಇಡಲಾಗಿತ್ತು

ಕೂಟದ ಅಧ್ಯಕ್ಷೆ ಕೊಕ್ಕಲೆರ ಧರಣಿ ಸೋಮಣ್ಣ, ಕೊಡವ ಸಮಾಜದ ಕಾರ್ಯದರ್ಶಿ ವಾಂಚೀರ ಮನು ನಂಜುಂಡ ಖಜಾಂಚಿ ಬಲ್ಲ್ಯಾಟಂಡ ಚಿಂಗಪ್ಪ, ಪೊಮ್ಮಕ್ಕಡ ಕೂಟದ ಪಚ್ಚಾರಂಡ ಸಪ್ನ,ಚೌರಿರ ಲಲಿತ, ಸಮಾಜದ ನಿರ್ದೇಶಕರು ಸದಸ್ಯರು ಇದ್ದರು.