ಮೂಡುಬಿದಿರೆ ಆಳ್ವಾಸ್ ಕಾಲೇಜು: ಕಲಾ ಸಂಘ ಉದ್ಘಾಟನೆ

| Published : Sep 07 2024, 01:39 AM IST

ಮೂಡುಬಿದಿರೆ ಆಳ್ವಾಸ್ ಕಾಲೇಜು: ಕಲಾ ಸಂಘ ಉದ್ಘಾಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಆಳ್ವಾಸ್ ರಂಗ ಅಧ್ಯಯನ ಕೇಂದ್ರದ ನಿರ್ದೇಶಕ ಡಾ. ಜೀವನ್‌ರಾಂ ಸುಳ್ಯ ಮಾತನಾಡಿ, ನಿರಂತರ ದುಡಿಮೆ ಮತ್ತು ಕಾಲದ ಮಹತ್ವವನ್ನು ಅರಿತುಕೊಂಡಾಗ ಯಶಸ್ಸು ನಮ್ಮದಾಗುತ್ತದೆ ಎಂದರು.

ಕನ್ನಡಪ್ರಭ ವಾರ್ತೆ ಮೂಡುಬಿದಿರೆ

ಕಲೆ ಜೀವನದ ಮೆರುಗನ್ನು ಹೆಚ್ಚಿಸಿ ಬದುಕನ್ನು ಶ್ರೀಮಂತಗೊಳಿಸುತ್ತದೆ. ಕಲಾ ವಿಭಾಗದ ವಿದ್ಯಾರ್ಥಿಗಳಿಗೆ ವಿಫುಲವಾದ ಅವಕಾಶಗಳಿದ್ದು ಅದನ್ನು ಬಳಸಿಕೊಂಡು ಯಶಸ್ವಿಯಾಗಬೇಕು ಎಂದು ಆಳ್ವಾಸ್ ಕಾಲೇಜಿನ ಆಡಳಿತಾಧಿಕಾರಿ ಪ್ರೊ. ಬಾಲಕೃಷ್ಣ ಶೆಟ್ಟಿ ಕರೆ ನೀಡಿದರು.

ಆಳ್ವಾಸ್ ಪದವಿ-ಪೂರ್ವ ಕಾಲೇಜಿನ ಕಲಾ ಸಂಘವನ್ನು ಉದ್ಘಾಟಿಸಿ ಮಾತನಾಡಿದರು.ಆಳ್ವಾಸ್ ಪದವಿಪೂರ್ವ ಕಾಲೇಜಿನ ಉಪಪ್ರಾಂಶುಪಾಲೆ ಝಾನ್ಸಿ ಪಿ.ಎನ್. ಮಾತನಾಡಿ, ಕಲಾ ವಿಭಾಗದ ವಿದ್ಯಾರ್ಥಿಗಳಿಗೆ ಹೆಚ್ಚು ಉದ್ಯೋಗವಕಾಶಗಳಿವೆ. ಇಂದು ವಿಜ್ಞಾನ, ವಾಣಿಜ್ಯ ಪದವೀಧರರು ನಿಮ್ಮೊಂದಿಗೆ ಸ್ಪರ್ಧೆಯಲ್ಲಿದ್ದಾರೆ. ಸರ್ಕಾರಿ ಸ್ವಾಮ್ಯದ ಎಲ್ಲಾ ಉದ್ಯೋಗಳಲ್ಲೂ ಕಲಾ ವಿಭಾಗದ ವಿದ್ಯಾರ್ಥಿಗಳಿಗೆ ಹೆಚ್ಚಿನ ಅವಕಾಶವಿದೆ. ವಿಜ್ಞಾನ ಕಲಿತ ವಿದ್ಯಾರ್ಥಿಗಳು ಡಾಕ್ಟರ್‌ಗಳಾಗಬಹುದು, ಇಲ್ಲವೇ ಎಂಜಿನಿಯರ್‌ಗಳಾಗಬಹುದು. ಆದರೆ ಸಮಾಜದಲ್ಲಿ ಹೆಚ್ಚು ಗೌರವಿಸಲ್ಪಡುವವರು ಐಎಎಸ್, ಐಪಿಎಸ್ ಹುದ್ದೆಯಲ್ಲಿರುವವರು. ತಮ್ಮಲ್ಲಿರುವ ಕೀಳರಿಮೆಯನ್ನು ವಿದ್ಯಾರ್ಥಿಗಳು ಹೋಗಲಾಡಿಸಬೇಕು. ನಿರಂತರ ಪ್ರಯತ್ನದಿಂದ ಯಶಸ್ಸನ್ನು ಪಡೆಯಬಹುದು ಎಂದರು.

ಆಳ್ವಾಸ್ ರಂಗ ಅಧ್ಯಯನ ಕೇಂದ್ರದ ನಿರ್ದೇಶಕ ಡಾ. ಜೀವನ್‌ರಾಂ ಸುಳ್ಯ ಮಾತನಾಡಿ, ನಿರಂತರ ದುಡಿಮೆ ಮತ್ತು ಕಾಲದ ಮಹತ್ವವನ್ನು ಅರಿತುಕೊಂಡಾಗ ಯಶಸ್ಸು ನಮ್ಮದಾಗುತ್ತದೆ ಎಂದರು. ಅಧ್ಯಕ್ಷತೆವಹಿಸಿ ಮಾತನಾಡಿದ ಆಳ್ವಾಸ್ ಪದವಿಪೂರ್ವ ಕಾಲೇಜಿನ ಕಲಾ ವಿಭಾಗದ ಡೀನ್ ವೇಣುಗೋಪಾಲ ಶೆಟ್ಟಿ, ಕಲಾ ವಿಭಾಗದ ವಿದ್ಯಾರ್ಥಿಗಳು ತಮ್ಮ ವಿಷಯದ ವಿಶಾಲತೆ ಹಾಗೂ ವೈವಿಧ್ಯತೆಯನ್ನು ಅರಿತುಕೊಳ್ಳಬೇಕು. ವಿದ್ಯಾರ್ಥಿಗಳು ಓದು ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಬದುಕಿನಲ್ಲಿ ಯಶಸ್ಸನ್ನು ಕಾಣಿರಿ ಎಂದು ಶುಭಹಾರೈಸಿದರು.

ಕಲಾ ವಿಭಾಗದ ಸಂಯೋಜಕ ದಾಮೋದರ ಇದ್ದರು. ವಿದ್ಯಾರ್ಥಿನಿ ಬೋರಮ್ಮ ಸ್ವಾಗತಿಸಿದರು. ಸ್ಪೂರ್ತಿ ಅತಿಥಿಗಳನ್ನು ಪರಿಚಯಿಸಿದರು. ರಕ್ಷಿತಾ ಸಂವಿಧಾನ ಪೀಠಿಕೆಯನ್ನು ಬೋಧಿಸಿದರು. ಚಿನ್ಮಯಿ ಕಾರ್ಯಕ್ರಮ ನಿರ್ವಹಿಸಿದರು.