ಸಾರಾಂಶ
ಮನಸ್ಸಿನ ಆರೋಗ್ಯಕ್ಕೆ ಸಂಗೀತವೇ ಮದ್ದು, ಸಂಗೀತದಿಂದ ಆರೋಗ್ಯ ವೃದ್ಧಿ ಆಗುತ್ತದೆ
ಕನ್ನಡಪ್ರಭ ವಾರ್ತೆ ಮೈಸೂರು
ಇಂದಿನ ಒತ್ತಡ ಮತ್ತು ಕಲುಷಿತ ವಾತಾವರಣದ ಜೀವನದಲ್ಲಿ ಸಂಗೀತ ಮನಸ್ಸಿನ ಆರೋಗ್ಯವನ್ನು ಕಾಪಾಡುತ್ತದೆ. ಸಂಗೀತ ಮನಸ್ಸಿನ ಆರೋಗ್ಯಕ್ಕೆ ಒಳ್ಳೆಯದು ಎಂದು ಶಾಸಕ ಟಿ.ಎಸ್. ಶ್ರೀವತ್ಸ ತಿಳಿಸಿದರು.ಕಲಾಭೂಮಿ ವತಿಯಿಂದ ಅ.20ರ ಬೆಳಗ್ಗೆ 9 ರಿಂದ ರಾತ್ರಿ 9 ರವರಿಗೂ ಹೂಟಗಳ್ಳಿ ಬಿ.ಎನ್. ರಾವ್ ಸಭಾಂಗಣದಲ್ಲಿ ಸ್ವರ ಸಂಭ್ರಮ ರಾಜ್ಯ ಮಟ್ಟದ ಕರೋಕೆ ಗಾಯನ ಕಾರ್ಯಕ್ರಮದ ಪೋಸ್ಟರ್ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಮನಸ್ಸಿನ ಆರೋಗ್ಯಕ್ಕೆ ಸಂಗೀತವೇ ಮದ್ದು, ಸಂಗೀತದಿಂದ ಆರೋಗ್ಯ ವೃದ್ಧಿ ಆಗುತ್ತದೆ. ಸಂಗೀತಕ್ಕೆ ಅಗಾಧ ಶಕ್ತಿಯಿದ್ದು, ಎಂಥವರನ್ನೂ ತಲೆದೂಗುವಂತೆ ಮಾಡುತ್ತದೆ. ಹೀಗಾಗಿ, ಜುಗುಪ್ಸೆ ಎನಿಸಿದಾಗ ಸಂಗೀತ ಆಲಿಸುವ ಮೂಲಕ ಆರೋಗ್ಯ ಹೆಚ್ಚಿಸಿಕೊಳ್ಳಿ ಹೇಳಿದರು.ಚಿತ್ರ ನಿರ್ದೇಶಕ, ನಿರ್ಮಾಪಕ ಆಸ್ಕರ್ ಕೃಷ್ಣ ಮಾತನಾಡಿ, ಸ್ವರ ಸಂಭ್ರಮ ಕಾರ್ಯಕ್ರಮವು ಉದಯೋನ್ಮುಖ ಹಾಗೂ ಪರಿಣಿತ ಗಾಯಕ, ಗಾಯಕಿಯರಿಗೆ ಕನ್ನಡ ಚಿತ್ರರಂಗದ ಸಾಧಕರು, ಕಲಾವಿದರು ಹಾಗೂ ತಂತ್ರಜ್ಞರ ಸಮ್ಮುಖದಲ್ಲಿ ಹಾಡುವ ಅವಕಾಶ ಒದಗಿಸಿದ್ದು, ಹಾಡು ಹೇಳಲು ಇಚ್ಛಿಸುವವರು ಮೊ. 92066 94999, 86600 73484 ಸಂಪರ್ಕಿಸಿ ಹೆಸರು ನೊಂದಾಯಿಸಿಕೊಳ್ಳಬಹುದು ಎಂದರು.ಆಯೋಜಕ ಬಿ. ನಿಂಗರಾಜ್, ಬಿಜೆಪಿ ನಗರ ಉಪಾಧ್ಯಕ್ಷ ಜೋಗಿ ಮಂಜು, ಪ್ರದೀಪ್ ಕುಮಾರ್, ಎಸ್.ಎನ್. ರಾಜೇಶ್, ಕಿಶೋರ್, ಕೀರ್ತಿ ಇದ್ದರು.