ಸಾರಾಂಶ
ಅಫಜಲಪುರ ತಾಲೂಕಿನ ಕರಜಗಿ ಗ್ರಾಮದ ರೈತ ನಬಿಲಾಲ ಚೌಧರಿ (70) ಹೊಲದಲ್ಲಿ ಕೆಲಸ ಮಾಡುತ್ತಿರುವಾಗ ಸಿಡಿಲು ಬಡಿದು ಮೃತಪಟ್ಟಿದ್ದಾರೆ
ಕನ್ನಡಪ್ರಭ ವಾರ್ತೆ ಕಲಬುರಗಿ
ಮುಂಗಾರು ಪೂರ್ವ ಹಾಗೂ ಅಕಾಲಿಕ ಮಳೆ ಅಪಜಲ್ಪುರ, ಕರಜಗಿ ಹೋಬಳಿಯಲ್ಲಿ ಮಂಗಳವಾರ ಅಬ್ಬರಿಸಿದೆ.ಮಳೆಯ ಜೊತೆಗೆ ಗುಡುಗು, ಸಿಡಿಲು ಕೂಡ ಜೋರಾಗಿದ್ದು,. ಮಳೆಯ ಅಬ್ಬರಕ್ಕೆ ಅಫಜಲಪುರ ತಾಲೂಕಿನ ಕರಜಗಿ ಗ್ರಾಮದ ರೈತ ನಬಿಲಾಲ ಚೌಧರಿ (70) ಹೊಲದಲ್ಲಿ ಕೆಲಸ ಮಾಡುತ್ತಿರುವಾಗ ಸಿಡಿಲು ಬಡಿದು ಮೃತಪಟ್ಟಿದ್ದಾರೆ. ಹೊಲದಲ್ಲಿ ಕೆಲಸ ಮಾಡುತ್ತಿದ್ದಾಗ ಶುರುವಾದ ಭಾರೀ ಗುಡುಗು ಸಿಡಿಲಬ್ಬರದ ಮಳೆಗೆ ಆಸರೆಯಾಗಿ ರೈತ ಮರದ ಕೆಳಗೆ ಆಶ್ರಯ ಪಡೆಡಿದ್ದಾನೆ. ಈ ವೇಳೆ ಸಿಡಿಲು ಬಡಿದು ಸ್ಥಳದಲ್ಲೇ ನಬಿಲಾಲ್ ಸಾವಿಗೀಡಾಗಿದ್ದಾನೆ. ಘಟನೆಗೆ ಸಂಬಂಧಿಸಿದಂತೆ ಅಫಜಲಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ
ದಾಖಲಾಗಿದೆ. ಜಿಲ್ಲೆಯಲ್ಲಿ ಏಕಾಏಕಿ ಮದ್ಯಾಹ್ನ ಶುರುವಾದ ಮಳೆ, ಗುಡುಗು ಅಬ್ಬರದಿಂದ ಕೂಡಿತ್ತು. ಶೇಷಗಿರಿ ವಾಡಿ, ಮಣ್ಣೂರ್, ಹೊಸೂರ್, ರಾಮ್ ನಗರ, ಕರಜಗಿ, ಶಿರವಳ, ಸಿವೂರ್ ಸೇರಿದಂತೆ ಹಲವು ಗ್ರಾಮಗಳಲ್ಲಿ ಬಿರುಸಿನ ಮಳೆ ಸುರಿದಿದೆ. ಹೊಲಗದ್ದೆಯಲ್ಲಿ 2 ಅಡಿವರೆಗೂ ಮಳೆ ನೀರು ಸಂಗ್ರಹಗೊಂಡಿದೆ. ಅನೇಕ ಕಡೆ ಮರದ ರೆಂಬೆಗಳು ಮುರಿದು ಬಿದ್ದಿವೆ. ಮೋಡ ಕವಿದ ವಾತಾವರಣ ಆಪಜಲ್ಪುರ ತಾಲೂಕಿನ ಎಲ್ಲೆಡೆ ಕವಿದಿದೆ.