ಸಾರಾಂಶ
ಕನ್ನಡಪ್ರಭ ವಾರ್ತೆ ಕಲಬುರಗಿ
ಕಲಬುರಗಿಯಲ್ಲಿ ಸುಮಾರ 183 ಕೋಟಿ ವೆಚ್ಚದ ಅನುದಾನದಡಿ ನಿರ್ಮಿಸಲಾಗುತ್ತಿರುವ ಜಯದೇವ ಹೃದ್ರೋಗ ಮತ್ತು ಸಂಶೋಧನಾ ಆಸ್ಪತ್ರೆ ಬಹುತೇಕ ಕಾಮಗಾರಿ ಪೂರ್ಣಗೊಂಡಿದ್ದು ಅಳಿದುಳಿದದ್ದನ್ನೆಲ್ಲ ಜುಲೈ ಅಂತ್ಯದೊಳಗೆ ಪೂರ್ಣಗಳಿಸಿ ಬರುವ ಸೆಪ್ಟೆಂಬರ್‌ನಲ್ಲಿ ಆಸ್ಪತ್ರೆ ಜನಾಪ್ರಣೆ ಮಾಡಲಾಗುವುದು ಎಂದು ರಾಜ್ಯದ ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಖಾತೆ ಸಚಿವ ಡಾ. ಶರಣಪ್ರಕಾಶ ಪಾಟೀಲ ಹೇಳಿದ್ದಾರೆ.ಇಲ್ಲಿನ ಮುಖ್ಯ ರಸ್ತೆಯಲ್ಲಿ ನಿರ್ಮಾಣದ ಹಂತದಲ್ಲಿರುವ ಜಯದೇವ ಹೃದ್ರೋಗ ಆಸ್ಪತ್ರೆಗೆ ಭೇಟಿ ನೀಡಿ ಮಾತನಾಡಿ, ಈಗಾಗಲೇ 183 ಕೋಟಿ ಅನುದಾನದಲ್ಲಿ ಕಾಮಗಾರಿಗಳ ಪೂರ್ಣಗೊಂಡಿದ್ದು, ಇನ್ನೂ 60 ಕೋಟಿ ಅನುದಾನ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ. ಇಲ್ಲಿ ಕೆಕೆಆರ್‌ಡಿಬಿ ಅನುದೂನವನ್ನೇ ಸಂಪೂರ್ಣ ಬಳಸಲಾಗುತ್ತಿದೆ ಎಂದರು.
ಮೂಲಭೂತ ಸೌರ‍್ಯಗಳ ಬಗ್ಗೆ ಇನ್ನೂ ಉಳಿದಂತೆ ಕೆಲಸ ಕಾರ್ಯಗಳ ಬಗ್ಗೆ ಪ್ರಗತಿ ಪರಿಶೀಲನೆ ನಡೆಸಿದರು. ೩೭೧ ಜೆ ಜಾರಿ ದಶಮಾನೋತ್ಸವದ ಕೊಡುಗೆಯ ಈ ಆಸ್ಪತ್ರೆ ಸೆಪ್ಟೆಂಬರ್ ಎರಡು ಮೂರು ವಾರಗಳಲ್ಲಿ ಕಲ್ಯಾಣ ಕರ್ನಾಟಕ ಭಾಗದ ಜನರಿಗೆ ನಮ್ಮ ಸರ್ಕಾರ ಸಮರ್ಪಸಲಿದೆ ಎಂದರು.೧೧ ಕೆ.ವಿ ವಿದ್ಯುತ್ ಸಮಸ್ಯೆಗಳು ಇವೆ ಎಲ್ಲ ವಿದ್ಯುತ್ತಿನ ಸಮಸ್ಯೆಗಳು ಇನ್ನೂ ೧೫ ದಿನಗಳು ಬೇಕಾಗುತ್ತವೆ. ಎಂ.ಆರ್.ಐ. ಸ್ಕ್ಯಾನ್ , ವಿದ್ಯುತ್‌ಚ್ಪಕ್ತಿ ಬೇಕಾಗುತ್ತದೆ ಹಾಗೂ ಕುಡಿಯವ ನೀರಿನ ಸಮಸ್ಯೆಗಳು ಇವೆ ಎಂದರು.
ಎಲ್ಲಾ ಕಾಮಗಾರಿಗಳು ಹಾಗೂ ಪಿಠೋಪಕರಣ ಕಾಮಗಾರಿ ಆಗಸ್ಟ್ ಅಂತ್ಯದವರೆಗೆ ಮುಗಿಯುವ ಹಂತದಲ್ಲಿ ಇವೆ ಎಂದರು. ಕ್ಯಾನ್ಸರ್ ಆಸ್ಪತ್ರೆಗೆ ೧೫೦ ಬೆಡಗಳು ಹಾಗೂ ಐ.ಟಿ.ಯ. ಕಾಲೇಜ್ ೨೦ ಕೋಟಿ ಪ್ರಸ್ತಾವನೆಯನ್ನು ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ ಹೊಸ ಐ.ಟಿ.ಐ ಕಾಲೇಜ್ ನಿರ್ಮಿಸಲಾಗುವುದು ಎಂದರು.ಸೂಪರ ಸ್ಪೆಷಾಲಿಟಿ ಆಸ್ಪತ್ರೆಗೆ ಕಾಮಗಾರಿ ಸಹ ಅಂತಿಮ ಹಂತದಲ್ಲಿದ್ದು, ಸಂಪುಟ ಸಭೆಯ ನಂತರ ಕಲಬುರಗಿಯಲ್ಲಿ ಜನಸ್ಪಂಧನಾ ಕಾರ್ಯಕ್ರಮವನ್ನು ಕಲಬುರಗಿಯಲ್ಲಿ ಆಯೋಜಿಸಲಾಗುವುದು ಸರ್ಕಾರದಿಂದ ಯುವನಿಧಿ ಸಿಗುವಂತ ಸೌಲಭ್ಯಗಳನ್ನು ನೀಡಲಾಗುತ್ತದೆ ಎಂದರು.
ರಾಜ್ಯದಲ್ಲಿ ಎಂಸಿಐ ಈ ಬಾರಿ ಖಾಸಗಿ ವಲಯದಲ್ಲಿಪಿಎಸ್, ಬಿಜಿಎಸ್ ಹಾಗೂ ಬಾಗಲಕೋಟೆ ಸಂಸ್ಥೆಗಳಿಗೆ ಮೆಡಿಕಲ್ ಕಾಲೇಜ್‌ಗಳಿಗೆ ಎಂಸಿಐ ಪರವಾನಗಿ ನೀಡಿದೆ. ರಾಮ ಮಗನ, ಕನಕಪೂರದಲ್ಲಿ ಸರಕಾರಿ ವೈದ್ಯ ಕಾಲಜುಗಳ ಪ್ರಸ್ತಾವನೆ ಇತ್ತಾದರೂ ಅನುಮತಿ ದೊರಕಿಲ್ಲ ಎಂದರು. ಯುವನಿಧಿ ಮಕ್ಕಳಿಗೆ ಕೌಶಲ್ಯ ತರಬೇತಿ ನೀಡಬೇಕು ಕಲಬುರಗಿಯಲ್ಲಿ ಒಂದು ಜನಸ್ಪಂಧನ ಮೇಳ ವಿಭಾಗಮಟ್ಟದಲ್ಲಿ ಉದ್ಯೋಗ ಮೇಳ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.ಎಸ್.ಎಸ್.ಎಲ್.ಸಿ. ಪಾಸಾದ ವಿದ್ಯಾರ್ಥಿಗಳು ಜಿ.ಟಿ.ಟಿ.ಸಿ ಡಿಪ್ಲೋಮಾ ಮೂರು ವರ್ಷ ಇರುತ್ತದೆ ಒಂದು ವರ್ಷ ಟ್ರೇನಿಂಗ್ ತರಬೇತಿ ನೀಡಲಾಗುತ್ತದೆ ಎಂದರು ಇದರಿಂದ ಮುಂದಿನ ದಿನಗಳಲ್ಲಿ ಉದ್ಯೋಗಗಳ ಅವಕಾಶ ಕಲ್ಪಿಸಲಾಗುತ್ತದೆ ಎಂದರು.
ಪ್ರಸ್ತುತ ಜಯದೇವ ಆಸ್ಪತ್ರೆಗೆ ಸಿಬ್ಬಂದಿಗಳಿದ್ದು ನೂತನ ಕಟ್ಟಡ ನಿರ್ಮಾಣ ನಂತರ ಹಾಸಿಗೆ ಸಾಮಾರ್ಥ್ಯ ಹೆಚ್ಚಳ ಹಿನ್ನಲೆಯಲ್ಲಿ ಅವಶ್ಯಕತೆ ಅನುಗುಣವಾಗುವಂತೆ ಸಿಬ್ಬಂದಿ ಭರ್ತಿ ಮಾಡಿಕೊಳ್ಳಲಾಗುವುದು ಎಂದು ಸಿಬ್ಬಂದಿ ನೇಮಕಾತಿ ಬಗ್ಗೆ ಸಚಿವ ಡಾ. ಶರಣಪ್ರಕಾ ಪಾಟೀಲ ಹೇಳಿದರು. ಜಯದೇವ ಆಸ್ಪತ್ರೆಯ ಸಮನ್ವಯಾಧಿಕಾರಿ ಸಂತೋಷ ಪ್ರೊಜೆಕ್ಟ್ ಮ್ಯಾನೇಜರ್ ಪ್ರಸಾದ, ಸಂತೋಷ ಇದ್ದರು.