ಸಾರಾಂಶ
ಕಲಬುರಗಿ: ನಗರಾಭಿವೃದ್ದಿ ಇಲಾಖೆ ಎಡವಟ್ಟು: ಮೃತ ಎಂಜಿನಿಯರ್‌ಗೂ ವರ್ಗಾವಣೆ
ಕನ್ನಡಪ್ರಭ ವಾರ್ತೆ ಚಿತ್ತಾಪುರ
ಆರು ತಿಂಗಳ ಹಿಂದೆಯೇ ಮೃತಪಟ್ಟಿದ್ದ ಸೇಡಂ ಪುರಸಭೆಯ ಎಂಜಿನಿಯರ್ ವಿರಾಜಪೇಟೆ ಪುರಸಭೆ ಕಿರಿಯ ಇಂಜಿನಿಯರ್ ಹುದ್ದೇಗೆ ವರ್ಗಾವಣೆ ಮಾಡಿ ಸರ್ಕಾರ ಆದೇಶಿಸಿದೆ.ನಗರಾಭಿವೃದ್ದಿ ಇಲಾಖೆಯ ಕಿರಿಯ ಇಂಜಿನಿಯರ್ ಅಶೋಕ ಪುಟ್ಟಪಾಕ್ ಅವರು ಆರು ತಿಂಗಳ ಹಿಂದೇಯೇ ಮೃತಪಟ್ಟಿದ್ದರೂ ರಾಜ್ಯ ಸರ್ಕಾರ ಅವರನ್ನು ಕೊಡಗು ಜಿಲ್ಲೆಯ ವಿರಾಜಪೇಟೇಗೆ ವರ್ಗಾವಾಣಿ ಮಾಡಿ ಜುಲೈ ೯ರಂದು ಆದೇಶ ಹೊರಡಿಸಿದೆ.
ನಗರಾಭಿವೃದ್ದಿ ಇಲಾಖೆಯ ಕಿರಿಯ ಇಂಜಿನಿಯರ್ ಅಶೋಕ ಪುಟಪಾಕ್ ಅವರನ್ನು ಸೇಡಂ ಪುರಸಭೆಯಿಂದ ಕೊಡಗು ಜಿಲ್ಲೆಯ ಮಡಿಕೇರಿ ನಗರಸಭೆಯ ಕಿರಿಯ ಇಂಜಿನಿಯರ್ ಹುದ್ದೇಗೆ ವರ್ಗಾವಣೆ ಮಾಡಲಾಗಿದ್ದು, ವೈದ್ಯಕೀಯ ಶಿಕ್ಷಣ ಸಚಿವರಾದ ಡಾ, ಶರಣಪ್ರಕಾಶ ಪಾಟೀಲ್ ಅವರ ವಿಧಾನಸಭೆ ಕ್ಷೇತ್ರದಲ್ಲಿ ಈ ಎಡವಟ್ಟು ನಡೆದಿದೆ.ಚಿತ್ತಾಪುರ ತಾಲೂಕಿನ ದಿಗ್ಗಾಂವ ಗ್ರಾಮದ ಅಶೋಕ ಪುಟ್ಟಪಾಕ್ ವಾಡಿ ಪುರಸಭೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದು ಡೆಪುಟೇಶನ್ ಮೇಲೆ ಅವರನ್ನು ಸೇಡಂ ಪುರಸಭೆಯಲ್ಲಿ ಕಿರಿಯ ಇಂಜಿನಿಯರ್ ಹುದ್ದೇಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು, ತೀವ್ರ ಅನಾರೊಗ್ಯದ ಕಾರಣ ಅವರು ಸೇಡಂ ನಲ್ಲಿ ಜನವರಿ ೧೨ ರಂದು ಮೃತಪಟ್ಟಿದ್ದರು, ಜ ೧೩ ರಂದು ದಿಗ್ಗಾಂವ ಗ್ರಾಮದಲ್ಲಿ ಅವರ ಅತ್ಯಕ್ರೀಯೇ ನಡೆದಿತ್ತು. ಅದರಲ್ಲಿ ಸೇಡಂ,ವಾಡಿ ಚಿತ್ತಾಪುರ ಪುರಸಭೆಯ ಅಧಿಕಾರಿಗಳು ಸಿಬ್ಬಂದಿಗಳು ಪಾಲ್ಗೊಂಡಿದ್ದರು.
ಕಿರಿಯ ಇಂಜಿನಿಯರ್ ಮೃತಪಟ್ಟಿದ್ದಕ್ಕಾಗಿ ವಾಡಿ ಪುರಸಭೆ ವತಿಯಿಂದ ಮೃತರ ಅಂತ್ಯಕ್ರೀಯೇಗಾಗಿ ಹದಿನೈದು ಸಾವಿರ ಮತ್ತು ಮೃತರ ಕುಟುಂಬಕ್ಕೆ ಸಿಗಬೇಕಾದ ಎಲ್ಲಾ ಸೌಲಭ್ಯಗಳನ್ನು ಒದಗಿಸಿದ್ದಾರೆ. ಆದರೂ ಕೂಡಾ ಇಲಾಖೆಯ ನೌಕರರೊಬ್ಬರು ಮೃತಪಟ್ಟಿರುವ ಬಗ್ಗೆ ಪೌರಾಡಳಿತ ವಿಭಾಗಕ್ಕೆ ಮಾಹಿತಿ ಇರಲಿಲ್ಲವೇ? ಒಂದು ವೇಳೆ ಮೃತಪಡುವ ಮುಂಚೆ ಅಶೋಕ ಅವರು ವರ್ಗಾವಣೆ ಕೊರಿದ್ದರೆ ಅವರ ಮರಣದ ನಂತರ ವರ್ಗಾವಣೆ ಕಡತ ಮರು ಪರಿಶೀಲನೆ ಮಾಡದೇ ವರ್ಗಾವಣೆ ಮಾಡಲಾಗಿದೆಯೇ ಎಂಬ ಚರ್ಚೆ ನಡೆಯುತ್ತಿರುವಾಗಲೇ ಸರ್ಕಾರ ಎಡವಟ್ಟು ಗೊತ್ತಾಗಿ ವರ್ಗಾವಣೆ ಆದೇಶ ಹಿಂಪಡೆದಿದೆ ಎನ್ನುವದು ಗೊತ್ತಾಗಿದೆ.