ಹತ್ತಿ ಮಿಶ್ರತಳಿ ಬೀಜ ಅಭಿವೃದ್ಧಿಪಡಿಸಿ ಶ್ವೇತ ಕ್ರಾಂತಿ ಮಾಡಿದ್ದ ಕಲಬುರಗಿ ಕೃಷಿ ವಿಜ್ಞಾನಿ!

| Published : Jul 16 2024, 12:41 AM IST

ಹತ್ತಿ ಮಿಶ್ರತಳಿ ಬೀಜ ಅಭಿವೃದ್ಧಿಪಡಿಸಿ ಶ್ವೇತ ಕ್ರಾಂತಿ ಮಾಡಿದ್ದ ಕಲಬುರಗಿ ಕೃಷಿ ವಿಜ್ಞಾನಿ!
Share this Article
  • FB
  • TW
  • Linkdin
  • Email

ಸಾರಾಂಶ

ಭಾರತೀಯ ಕೃಷಿ ವಿಜ್ಞಾನ ಅನುಸಂಧಾನ ಪರಿಷತ್ತಿನ ನಿರ್ದೇಶಕರು, ಧಾರವಾಡದ ಕೃಷಿ ವಿವಿಗೆ ಎರಡೆರಡು ಬಾರಿ ಕುಲಪತಿಗಳಾಗಿದ್ದ ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಹಿರೇ ಬಿರಾಳ ಗ್ರಾಮದ ಶರಣಗೌಡ ಅಯ್ಯನಗೌಡ ಪಾಟೀಲ್‌ (ಎಸ್‌ ಎ ಪಾಟೀಲ್‌) ಕೃಷಿ ವಿಜ್ಞಾನಿಯಾಗಿ (ತಳಿಶಾಸ್ತ್ರ) ಹತ್ತಿ ಬೇಸಾಯದಲ್ಲಿ ವರಲಕ್ಷ್ಮೀ, ಜಯಲಕ್ಷ್ಮೀ ಎಂಬ ಅಂತರ್‌ ನಿರ್ದಿಷ್ಟ ಮಿಶ್ರತಳಿ ಬೀಜ ಅಭಿವೃದ್ಧಿಸಿ ದೇಶಾದ್ಯಂತ ಶ್ವೇತ ಕ್ರಾಂತಿ ಮಾಡಿದ ಅಪರೂಪದ ಸಾಧಕ.

ಶೇಷಮೂರ್ತಿ ಅವಧಾನಿ

ಕನ್ನಡಪ್ರಭ ವಾರ್ತೆ ಕಲಬುರಗಿ

ಭಾರತೀಯ ಕೃಷಿ ವಿಜ್ಞಾನ ಅನುಸಂಧಾನ ಪರಿಷತ್ತಿನ ನಿರ್ದೇಶಕರು, ಧಾರವಾಡದ ಕೃಷಿ ವಿವಿಗೆ ಎರಡೆರಡು ಬಾರಿ ಕುಲಪತಿಗಳಾಗಿದ್ದ ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಹಿರೇ ಬಿರಾಳ ಗ್ರಾಮದ ಶರಣಗೌಡ ಅಯ್ಯನಗೌಡ ಪಾಟೀಲ್‌ (ಎಸ್‌ ಎ ಪಾಟೀಲ್‌) ಕೃಷಿ ವಿಜ್ಞಾನಿಯಾಗಿ (ತಳಿಶಾಸ್ತ್ರ) ಹತ್ತಿ ಬೇಸಾಯದಲ್ಲಿ ವರಲಕ್ಷ್ಮೀ, ಜಯಲಕ್ಷ್ಮೀ ಎಂಬ ಅಂತರ್‌ ನಿರ್ದಿಷ್ಟ ಮಿಶ್ರತಳಿ ಬೀಜ ಅಭಿವೃದ್ಧಿಸಿ ದೇಶಾದ್ಯಂತ ಶ್ವೇತ ಕ್ರಾಂತಿ ಮಾಡಿದ ಅಪರೂಪದ ಸಾಧಕ.

1070-80 ರ ದಶಕದಲ್ಲಿ ಈ ವಿಜ್ಞಾನಿ ತಾನು ಮಾಡಿದ ಈ ಅತ್ಯಂತ ಅಪರೂಪದ ಸಾಧನೆಗೆ ಎಂದಿಗೂ ಪ್ರಚಾರ ಬಯಸಲಿಲ್ಲ. ಬದಲಾಗಿ ಈ ಅಪರೂಪದ ತಳಿಗಳೇ ದೇಶದುದ್ದಗಲಕ್ಕೂ ಪರಿಚಯವಾಗಿ ರೈತರ ಕೈ ಸೇರಿದ್ದಲ್ಲದೆ ರೈತರು ಇವುಗಳನ್ನು ಬೆಳೆದು ತಮ್ಮ ಆರ್ಥಿಕತೆಯನ್ನು ಸುಧಾರಿಸಿಕೊಂಡರು.

ಇದರೊಂದಿಗೆ ದೇಶದ ಆರ್ಥಿಕ ಮಟ್ಟವೂ ಸುದಾರಣೆ ಕಂಡಿತು, ವಿದೇಶಿ ಆಮದು ಸುಂಕ ಪಾವತಿಸೋದು ನಿಂತಿತು. ಭಾರತ ಹತ್ತಿ ರಫ್ತು ರಾಷ್ಟ್ರವಾಗಿದ್ದು ಪಾಟೀಲರ ಸಂಶೋಧನೆಯಿಂದ ಎಂದರೆ ಅತಿಶಯೋಕ್ತಿ ಯಾಗಲಾರದು.

ತಳಿಶಾಸ್ತ್ರ ವಿಜ್ಞಾನಿ ಕಲಬುರಗಿ ಮೂಲದ ಎಸ್‌ ಎ ಪಾಟೀಲರ ಮಿಶ್ರತಳಿ ವರಲಕ್ಷ್ಮೀ (ಡಿಸಿಎಚ್‌- 3), ಜಯಲಕ್ಷ್ಮೀ (ಡಿಸಿಚ್‌- 32) ಬೀಜದ ಸಾಧನೆ ಅಂತರಾಷ್ಟ್ರೀಯ ಮಟ್ಟದಲ್ಲೂ ಸದ್ದು ಮಾಡಿದ್ದು ಪಾಟೀಲರ ಕತೃತ್ವ ಶಕ್ತಿಗೆ ಹಿಡಿದ ಕನ್ನಡಿ.

ಇವರು ಕಂಡು ಹಿಡಿದ ವರಲಕ್ಷ್ಮೀ ಹಾಗೂ ಜಯಸಕ್ಷ್ಮೀ ತಳಿಗಳನ್ನು ರೈತರು ಇಂದಿಗೂ ಬೆಳೆಯುತ್ತಿದ್ದಾರೆ. ಈ ತಳಿಗಳು ದೇಶದುದ್ದಲಕ್ಕೂ ಹತ್ತಿ ಬೇಸಾಯದಲ್ಲಿ ಮಾಡಿದ ಶ್ವೇತ ಕ3ಾಂತಿಯ ಪರಿಣಾಮವಾಗಿ ಕಳೆದ 4 ದಶಕದಿಂದ ಹತ್ತಿ ಆಮದು ಮಾಡಿಕೊಳ್ಳೋದನ್ನು ಭಾರತ ನಿಲ್ಲಿಸಿದೆಯಲ್ಲದೆ ಇಂದಿಗೂ ಮಿಶ್ರತಳಿ ಬೀಜದಲ್ಲಿ ಇವೆರೂ ತಳಿಗಳ ಸ್ಥಾನ ಬೇರಾವ ತಳಿಗಳು ಸಮರ್ಥವಾಗಿ ತುಂಬಿಲ್ಲ.

1970 ರಿಂದ 1990 ರ ದಶಕದಲ್ಲಿ 5 ಸಾವಿರ ಕೋಟಿ ರು ನಷ್ಟು ಹತ್ತಿ ಆಮದು ಮಾಡೋದನ್ನ ಬಾರತ ನಿಲ್ಲಿಸಿತಲ್ಲದೆ, ಮುಂದೆ ಬಾರತವೇ ವಿವಿಧ ದೇಶಗಳಿಗೆ ಹತ್ತಿ ರಫ್ತು ದೇಶವಾಗಿ ಹೊರಹೊಮ್ಮಿದ್ದು ಪಾಟೀಲರ ಶೋಧನೆಯಿಂದ ಎಂಬುದು ಗಮನಾಹ್ರ ಸಂಗತಿ.

ವರಲಕ್ಷ್ಮೀ ಹಾಗೂ ಜಯಲಕ್ಷ್ಮೀ ಹತ್ತಿ ಮಿಶ್ರತಳಿಗಳನ್ನು ಭಾರತದ ದಕ್ಷಿಣ, ಉತ್ತರದಾದ್ಯಂತ ಹೇರಳವಾಗಿ ಬೆಳೆಯಲಾಗುತ್ತಿದೆ. ಕೃಷಿಯಲ್ಲಿನ ಗೋಧಿ, ಭತ್ತದ ಇಳುವರಿ ಹೆಚ್ಚಿಸಿ ನಡೆದಂತಹ ಹಸಿರು ಕ3ಾಂತಿಗೆ ಹೋಲಿಕೆ ಮಾಡಿದಲ್ಲಿ ಕಲಬುರಗಿ ಮೂಲದ ವಿಜ್ಞಾನಿ ಎಸ್‌ ಎ ಪಾಟೀಲರು ಮಾಡಿದ ಶ್ವೇತ ಕ್ರಾಂತಿ ಅತ್ಯಂತ ಮಹತ್ವದ್ದಾಗಿ ದೇಶದ ಕೃಷಿ, ಆರ್ಥಿಕತೆಗೆ ಕೊಡುಗೆ ನೀಡಿತ್ತು ಎಂದು ಕೃಷಿ ಪರಿಣಿತರು ಇಂದಿಗೂ ಹೇಳೋಜನ್ನ ಕೇಳಿದರೆ ಜೇವರ್ಗಿಯ ಕುಗ್ರಾಮ ಬಿರಾಳದ ವಿಜ್ಞಾನಿ ತಮ್ಮ ಜೀವಿತಾವಧಿಯಲ್ಲಿ ಮಾಡಿರುವ ರೈತ ಸ್ನೇಹಿ ಶೋಧಗಳು ಸದಾಕಾಲ ಹಸಿರು ಎನ್ನಬಹುದು.

ಇವರ ವರಲಕ್ಷ್ಮೀ ಹಾಗೂ ಜಯಲಕ್ಷ್ಮೀ ಹತ್ತಿ ತಳಿಗಳು ಭಾರತ ಸರಕಾರ ಆಮದಿಗಾಗಿ ಪಾವತಿಸಬೇಕಿದ್ದ ವಿದೇಶಿ ವಿನಮಯದ ಬಹುಕೋಟಿ ಹಣ ದೇಶದಲ್ಲೇ ಉಳಿಯುವಂತೆ ಆಯ್ತು. ರೈತರು ಇಂದಿಗೂ ಈ ತಳಿಗಳೊಂದಿಗೆ ಭರ್ಜರಿ ಹತ್ತಿ ಫಸಲು ಹೊಂದುವಂತಾಗಿದೆ.

ಹುಟ್ಟಿದ್ದು ಜೇವರ್ಗಿ ತಾಲೂಕಿನ ಕುಗ್ರಾಮದಲ್ಲಿ: 1946 ರ ಆ. 5 ರಂದು ಜಿಲ್ಲೆಯ ಜೇವರ್ಗಿ ತಾಲೂಕಿನ ಕುಗ್ರಾಮ ಬಿರಾಳದಲ್ಲಿ ಹುಟ್ಟಿದ್ದ ಶರಣಗೌಡರು ತಮ್ಮ ಹೈಸ್ಕೂಲ್‌ ಶಿಕ್ಷಣ ಜೇವರ್ಗಿಯಲ್ಲೇ ಪೂರೈಸಿದವರು. ನಂತರ ಬಿಎಸ್ಸಿ ಕೃಷಿ ಪದವೀಧರರಾಗಿ, ಮುಂದೆ ಎಂಎಸ್‌ಸಿ ಕೃಷಿಯಲ್ಲಿ ಸ್ನಾತಕ ಪದವಿ ಧರರಾದರು. ತಳಿಶಾಸತ್ರ ಹಾಗೂ ಪ್ಲಾಂಟ್‌ ಬ್ರೀಡಿಂಗ್‌ ವಿಷಯದಲ್ಲಿ ತಮ್ಮ ಸಂಶೋಧನೆ ಪ್ರಬಂಧ ಮಂಡಿಸಿ ಪಿಎಚ್‌ಡಿ ಪಗವಿ ಪಡೆದ ಬಿರಾಳದ ಶರಣಗೌಡರು ಹಿಂದಿರುಗಿ ನೋಡಿದವರಲ್ಲ.

ಹೆಬ್ಬಾಳದ ಕೃಷಿ ಸಂಶೋಧನಾ ಕೇಂದ್ರ, ರಾಯಚೂರಿನ ಪ್ರಾದೇಶಿಕ ಕೃಷಿ ಸಂಶೋಧನಾ ಕೇಂದ್ರಗಳಲ್ಲಿದ್ದಾಗಲೇ ಅಪರೂಪದ ಮಿಶ್ರತಲಿ ಹತ್ತಿ ಸಂಶೋಧನೆ ಮಾಡಿದ್ದ ಪಟೀಲರು ತಾವು ಕೆಲಸ ಮಾಡುತ್ತಿದ್ದ ಸ್ಥಳ, ರಾಜ್ಯ, ದೇಶದ ಕೀರ್ತಿಯನ್ನು ಅಂತರಾಷ್ಟ್ರೀಯವಾಗಿ ಮಾಡಿದ್ದರು.

1993ರಿಂದ 2006ರ ವರೆಗೂ ಧಾರವಾಡ ಕೃಷಿ ವಿವಿಯಲ್ಲಿ 2 ಬಾರಿ ಕುಲಪತಿಗಳಾಗಿದ್ದಲ್ಲದೆ ಅನೇಕ ಮುಖ್ಯ ಹುದ್ದೆಗಳಲ್ಲಿದ್ದು ಕೊಡುಗೆ ಕೊಟ್ಟವರು. ಇ‍ರಿಲ್ಲಿದದಾಗಲೇ ಕೃಷಿ ವಿವಿ ಮೂಲ ಸವಲತ್ತಿನೊಂದಿಗೆ ರಾಜ್ಯದುದ್ದಗಲಕ್ಕೂ, ಅದರಲ್ಲೂ ಉತ್ತರ ಕರ್ನಾಚಕದ ಅನೇಕ ಕಡೆ ಕೇಂದ್ರಗಳನ್ನು ಹೊಂದಿ ಹೆಮ್ಮರವಾಗಿತ್ತು.

ಸದಾಕಾಲ ರೈತಸ್ನೇಹಿ, ರೈತರಿಗೆ ಲಾಭವಗುವಂತಹ ದೂರದೃಷ್ಟಿ ಚಿಂತನೆಗಳಂದಿಗೆ ಯೋಜನೆಗಳನ್ನು ರೂಪಿಸುವಲ್ಲಿ ಪಾಟೀಲರದ್ದು ಎತ್ತಿದ ಕೈ, ಇದಕ್ಕೆ ಮೂಲ ಕಾರಣ ಅವರು ಕೃಷಿ ಕಾಯಕದ ಹಿನ್ನೆಲೆಯ ಅವಿಭಕ್ತ ಕುಟುಂಬದಿಂದ ಬಂದವರು.ಪಾಟೀಲರು ಹೊಂದಿದ್ದ ಹುದ್ದೆಗಳು

1) ಸಂಶೋಧನಾ ಸಹಾಯಕ- ಧಾರವಾಡ

2) ಪ್ಲಾಂಟ್‌ ಸೈಂಟಿಸ್ಟ್‌- ರಾಯಚೂರು ಸಂಶೋಧನಾ ಕೇಂದ್ರ

3) ಸಶೋಧನಾ ಸಹಾಯಕ ನಿರ್ದಶಕರು ಹುದ್ದೆ- ರಾಯಚೂರು

4) ಡೈರೆಕ್ಟರ್‌ ಫಾರ್‌ ಇನ್ಸ್ಟ್ರಕ್ಷನ್‌ ಧಾರವಾಡ

5) ಸಂಶೋಧನೆ ನಿರ್ದೇಶಕರು- ಧಾರವಾಡ ವಿವಿ

6) ನಿರ್ದೇಶಕರು- ಐಎಆರ್‌ಐ- ನ್ಯೂ ದೆಹಲಿ

----------

ಕೃಷಿ ರಂಗದಲ್ಲಿ ಮಹತ್ವದ ಕೊಡುಗೆಗಳು

1) ಹತ್ತಿ ಬೆಳೆ ಮತ್ತು ಎಣ್ಣೆ ಬೆಳೆಗಳಾದ ಶೇಂಗಾ, ಸೂರ್ಯಕಾಂತಿ, ಔಡಲ, ಗಳಲ್ಲಿ ಹೆಚ್ಚು ಇಳುವರಿಯ 16 ಮಿಶ್ರ ತಳಿಗಳನ್ನು ಅಭಿವೃದ್ಧಿ ಪಡಿಸಿದ ಕೀರ್ತಿ

2) ಹತ್ತಿಯಲ್ಲಿ ವರಲಕ್ಷ್ಮೀ, ಜಯಲಕ್ಷ್ಮೀ ಮಿಶ್ರತಲಿಗಳನ್ನು ಅಭಿವೃದ್ಧಿ ಪಡಿಸಿದವರು, ಜಗತ್ತಿನ ಗಮನ ಸೆಳೆದ ತಳಿಗಳಿವು ಎಂಬುವುದು ಹೆಮ್ಮೆ

3) ಹತ್ತಿಯಲ್ಲಿ ವರಲಕ್ಷ್ಮೀ, ಜಯಲಕ್ಷ್ಮೀ, ಹೆಚ್ಚು ಇಳುವರಿಯ ಶಾರದಾ, ಸೌಭಾಗ್ಯ, ರೇಣುಕಾ, ಶ್ವೇತಾ, ಹಿಮಾ, ಶೇಂಗಾದಲ್ಲಿ ಭಾರತಿ, ಅಪೂರ್ವಾ, ಸೂರ್ಯಕಾಂತಿಯಲ್ಲಿ ಢ್ರಾಫ್‌ ಮಾರ್ನ್‌ ಮತ್ತು ಔಡಲದಲ್ಲಿ ಡಿಸಿಎಚ್‌, ಸ್‌ಚ್‌ ಎಂಬ ತಲಿಗಳನ್ನು ಅಭಿವೃದ್ಧಿ ಪಡಿಸಿ ರೈತರಿಗೆ ಅನುಕೂಲ ಮಾಡಿದವರು.

-----------

ಇವರಿಗೆ ಸಂದ ಅಂತಾರಾಷ್ಟ್ರೀಯ ಗೌರವಗಳು

1) 1998 ರಲ್ಲಿ ಇಂಗ್ಲೆಂಡ್‌ ದೇಶದವರು ಪ್ಲಾಂಡ್‌ ಬ್ರೀಡಿಂಗ್‌ನಲ್ಲಿ ನೀಡುವ ಅತ್ಯುನ್ನತ ಡಿಕ್ರೀ ಆಫ್‌ ಮೆರಿಟ್‌ ಪುರಸ್ಕಾರ,

2) ಕೃಷಿ ಸಶೋಧನೆ, ಕೀಟನಾಶಕ ಕುರಿತಾದ ಸಾಧನೆ, ರೈತರಿಗೆ ವರಮಾನ ಹೆಚ್ಚಿಸುವ ತಲಿಗಳ ಶೋಧನೆಗಾಗಿ ಅಂತಾರಾಷ್ಟ್ರೀಯ ಜೀವಮಾನ ಸಾಧನೆ ಗೌರವ ಪುರಸ್ಕಾರ

-----------

ಬಿರಾಳ ಗೌಡ್ರ ಸಾಧನೆ ಯುವಕರಿಗ ಮಾದರಿ

ಭಾರತ ಸರಕಾರದ, ಕರ್ನಾಟಕ ಸರಕಾರದ ಅನೇಕ ಪುರಸ್ಕಾರಗಳು ಇವರ ಕೃಷಿ ಸಾಧನೆ ಮೆಚ್ಚಿಕೊಂಡು ಅರಸಿಕೊಂಡು ಬಂದು ಪಾಟೀಲ ಮುಡಿಗೇರಿವೆ. ನೂರಾರು ವಿದ್ಯಾರ್ಥಿಗಳಿಗೆ ಪಿಎಚ್‌ಡಿ ಮಾರ್ಗರ್ಶಕರಾಗಿಯೂ ಪಾಟೀಲರು ಕೆಲಸ ಮಾಡಿದ್ದರು. ಎಸ್‌.ಎ. ಪಾಟೀಲರು ಶೈಕ್ಷಣಿಕವಾಗಿ ಅತ್ಯಂತ ಹಿಂದುಳಿದ ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಕುಗ್ರಾಮ ಹಿರೇ ಬಿರಾಳದಲ್ಲಿ ಹುಟ್ಟಿದವರಾದರೂ ಇವರು ದೇಶದ ಕೃಷಿ ರಂಗದಲ್ಲಿ ಮಾಡಿದ ಶೋಧನೆ- ಸಾಧನೆಗಳೇ ಇವರನ್ನು ಹಳ್ಳಿಯಂದ ದಿಲ್ಲಿಯವರೆಗೂ, ಅಲ್ಲಿಂದ ಜಗದಲ- ಮುಗಿಲಗಲ ಇವರ ಕೀರ್ತಿ ಪತಾಕೆ ಹಾರುವಂತಾಗಿದ್ದು, ಸದ್ದಿಲ್ಲದೆ ಇವರು ಬದುಕಿನುದ್ದಕ್ಕೂ ಮಾಡಿದ ಸಾಧನೆಗಳು, ಅವರ ಬದುಕೇ ಜಿಲ್ಲೆಯ ಯುವಕರಿಗೆ ಬಹು ದೊಡ್ಡ ಮಾದರಿ ಎನ್ನಬಹುದಾಗಿದೆ.