ನಮ್ಮ ಸಂಸ್ಥೆ ಕಳೆದ ಆರ್ಥಿಕ ವರ್ಷದಲ್ಲಿ ₹೬೦.೫ ಲಕ್ಷ ನಿವ್ವಳ ಲಾಭ ಗಳಿಸಿದ್ದು, ನಿರಂತರ ಆಡಿಟ್ ಬ ವರ್ಗೀಕರಣದಲ್ಲಿ ಮುನ್ನಡೆದಿದ್ದು, ಕಳಚೆಯಲ್ಲಿ ಕೇಂದ್ರ ಹೊಂದಿದ್ದ ಸಂಸ್ಥೆ, ಈರಾಪುರ ಮತ್ತು ಯಲ್ಲಾಪುರ ಪಟ್ಟಣದಲ್ಲಿ ಶಾಖೆ ಹೊಂದಿದೆ.
ಪತ್ರಿಕಾಗೋಷ್ಠಿಯಲ್ಲಿ ಸಂಘದ ಅಧ್ಯಕ್ಷ ಹೇಳಿಕೆ
ಕನ್ನಡಪ್ರಭ ವಾರ್ತೆ ಯಲ್ಲಾಪುರನಮ್ಮ ಸಂಸ್ಥೆ ಕಳೆದ ಆರ್ಥಿಕ ವರ್ಷದಲ್ಲಿ ₹೬೦.೫ ಲಕ್ಷ ನಿವ್ವಳ ಲಾಭ ಗಳಿಸಿದ್ದು, ನಿರಂತರ ಆಡಿಟ್ ಬ ವರ್ಗೀಕರಣದಲ್ಲಿ ಮುನ್ನಡೆದಿದ್ದು, ಕಳಚೆಯಲ್ಲಿ ಕೇಂದ್ರ ಹೊಂದಿದ್ದ ಸಂಸ್ಥೆ, ಈರಾಪುರ ಮತ್ತು ಯಲ್ಲಾಪುರ ಪಟ್ಟಣದಲ್ಲಿ ಶಾಖೆ ಹೊಂದಿದೆ. ಎಪಿಎಂಸಿಯಲ್ಲಿ ಅಡಿಕೆಯ ದಲಾಲಿ ಕೇಂದ್ರ ಸ್ಥಾಪಿಸಿ, ಉತ್ತಮ ಪ್ರಗತಿ ಸಾಧಿಸುತ್ತ ಬಂದಿದೆ ಎಂದು ಸಹ್ಯಾದ್ರಿ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘದ ಅಧ್ಯಕ್ಷ ಉಮೇಶ ಭಾಗ್ವತ ಹೇಳಿದರು.
ಎಪಿಎಂಸಿಯ ತಮ್ಮ ವ್ಯಾಪಾರಿ ಕೇಂದ್ರದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು.ನಮ್ಮ ಸಂಸ್ಥೆಯ ವಾರ್ಷಿಕ ಸರ್ವಸಾಧಾರಣ ಸಭೆಗೆ ನಮ್ಮ ಸಂಸ್ಥೆಯಲ್ಲಿ ವ್ಯವಹರಿಸುವ ಎಲ್ಲರಿಗೂ ಬರಲು ಸಾಧ್ಯವಾಗದ ಹಿನ್ನೆಲೆ ಈ ಸಭೆಯನ್ನು ನಮ್ಮೆಲ್ಲ ಸದಸ್ಯರು, ಗ್ರಾಹಕರಿಗೆ ಅವಕಾಶ ನೀಡಲು ನಡೆಸುತ್ತಿದ್ದೇವೆ. ಹೆಬ್ಬಾರಕುಂಬ್ರಿಯಲ್ಲಿದ್ದ ಶಾಖೆಯನ್ನು ಈರಾಪುರಕ್ಕೆ ವರ್ಗಾಯಿಸಿದ್ದೇವೆ. ಎಪಿಎಂಸಿಯಲ್ಲಿ ಕಳೆದ ೫ ವರ್ಷದಿಂದ ವ್ಯಾಪಾರಿ ಕೇಂದ್ರವನ್ನು ಪ್ರಾರಂಭಿಸಿ, ರೈತರಿಗೆ ಅನುಕೂಲ ಕಲ್ಪಿಸಿದ್ದೇವೆ. ಅಲ್ಲದೇ ಪ್ರಸಕ್ತ ಸಾಲಿನಲ್ಲಿ ಜೊಯಿಡಾದಲ್ಲಿ ಒಂದು ಕೇಂದ್ರವನ್ನು ಸ್ಥಾಪಿಸಿ, ಆ ಪ್ರದೇಶದ ಸಣ್ಣ ರೈತರಿಗೆ ಅಡಿಕೆಗೆ ನ್ಯಾಯವಾದ ಬೆಲೆ ಸಿಗುವಂತೆ ಮಾಡುತ್ತಿದ್ದೇವೆ. ರೈತರಿಗೆ ಬೇಕಾದ ಉಪಕರಣಗಳ ಮಾರಾಟ ವಿನಿಮಯ ಮಾಡಲಾಗುತ್ತಿದೆ. ಅಲ್ಲಿ ನೇರವಾಗಿ ಅಡಿಕೆ ಖರೀದಿ ಮಾಡುವ ವ್ಯಾಪಾರಸ್ಥರನ್ನು ಬೆಳೆಸಬೇಕಾಗಿದೆ ಎಂದರು.ನಮ್ಮ ಸಂಸ್ಥೆ ₹೮ ಕೋಟಿ ನಿಧಿ ಇದ್ದು, ₹೨.೮೦ ಕೋಟಿ ಶೇರು ಬಂಡವಾಳ ಹೊಂದಿದ್ದು, ₹೭೨.೫ ಕೋಟಿ ಠೇವನ್ನು ಹೊಂದಿದೆ. ₹೮.೮೪ ಕೋಟಿ ಸಾಲ ಪಡೆದಿದ್ದು, ₹೯೦.೮೪ ಕೋಟಿ ದುಡಿಯುವ ಬಂಡವಾಳವನ್ನು ಹೊಂದಿದ್ದು, ₹೭೩.೫ ಕೋಟಿ ಸಾಲ ನೀಡಿದ್ದು, ನಮ್ಮ ಸಂಸ್ಥೆಯ ಪ್ರಗತಿಗೆ ಕಾರಣವಾಗಿದೆ ಎಂದು ವಿವರಿಸಿದರು.