ದಾಬಸ್‍ಪೇಟೆ: ತ್ಯಾಮಗೊಂಡ್ಲು ಹೋಬಳಿಯ ಕಳಲುಘಟ್ಟದಲ್ಲಿ ಒತ್ತುವರಿಯಾಗಿದ್ದ ಸರ್ಕಾರಿ ಜಾಗವನ್ನು ಗ್ರಾಮದ ಯುವಕರು ಒಗ್ಗೂಡಿ ಒಂದೂವರೆ ವರ್ಷಗಳ ನಿರಂತರ ಹೋರಾಟ ನಡೆಸಿದ ಫಲವಾಗಿ ತಹಸೀಲ್ದಾರ್ ಆದೇಶದ ಮೇರೆಗೆ ಸರ್ಕಾರಿ ಅಧಿಕಾರಿಗಳು ಹಾಗೂ ಯುವಕರು ಒತ್ತುವರಿ ತೆರವುಗೊಳಿಸಿದರು
ದಾಬಸ್‍ಪೇಟೆ: ತ್ಯಾಮಗೊಂಡ್ಲು ಹೋಬಳಿಯ ಕಳಲುಘಟ್ಟದಲ್ಲಿ ಒತ್ತುವರಿಯಾಗಿದ್ದ ಸರ್ಕಾರಿ ಜಾಗವನ್ನು ಗ್ರಾಮದ ಯುವಕರು ಒಗ್ಗೂಡಿ ಒಂದೂವರೆ ವರ್ಷಗಳ ನಿರಂತರ ಹೋರಾಟ ನಡೆಸಿದ ಫಲವಾಗಿ ತಹಸೀಲ್ದಾರ್ ಆದೇಶದ ಮೇರೆಗೆ ಸರ್ಕಾರಿ ಅಧಿಕಾರಿಗಳು ಹಾಗೂ ಯುವಕರು ಒತ್ತುವರಿ ತೆರವುಗೊಳಿಸಿದರು.
ಕಳಲುಘಟ್ಟ ಗ್ರಾಪಂ ಕಚೇರಿ ಮುಂದೆ ಇರುವ ಸರ್ಕಾರಿ ಸ್ವತ್ತನ್ನು ಪಕ್ಕದ ಜಮೀನಿನ ಮಾಲೀಕ ಯಾವುದೇ ದಾಖಲೆಗಳಿಲ್ಲದೆ ಸರ್ಕಾರಿ ಜಾಗವನ್ನು ತನ್ನದೇ ಎಂದು ಹೇಳಿಕೊಂಡು ಒತ್ತುವರಿ ಮಾಡಿ ಕಾಂಪೌಂಡ್ ನಿರ್ಮಿಸಿದ್ದ ಇದರಿಂದ ಸಾರ್ವಜನಿಕ ಬಳಕೆಗೆ ಮೀಸಲಾಗಿದ್ದ ಜಾಗ ಕಳೆದುಹೋಗುವ ಆತಂಕ ಗ್ರಾಮಸ್ಥರಲ್ಲಿ ಮೂಡಿತ್ತು. ಆರಂಭದಲ್ಲಿ ಗ್ರಾಮದ ಯುವಕರು ಪಂಚಾಯಿತಿ ಮಟ್ಟದಲ್ಲಿ ಸಮಸ್ಯೆ ಬಗೆಹರಿಸಲು ಪ್ರಯತ್ನಿಸಿದರೂ, ಫಲ ಸಿಕ್ಕಿರಲಿಲ್ಲ. ನಂತರ ತಾಲೂಕು ದಂಡಾಧಿಕಾರಿಗೆ ದೂರು ಸಲ್ಲಿಸಿ ಕಾನೂನಾತ್ಮಕ ಹೋರಾಟ ನಡೆಸಿದ ಫಲವಾಗಿ ಒತ್ತುವರಿ ತೆರವುಗೊಳಿಸಲಾಗಿದೆ.ಹೋರಾಟಕ್ಕೆ ಸಂದ ಜಯ:
ಗ್ರಾಮದ ಯುವ ಮುಖಂಡ ಕೃಷ್ಣಮೂರ್ತಿ ನೇತೃತ್ವದಲ್ಲಿ ಕಳೆದ ಒಂದೂವರೆ ವರ್ಷದಿಂದ ಗ್ರಾಮಕ್ಕೆ ಹೊಂದಿಕೊಂಡಿದ್ದ 10 ಗುಂಟೆ ಪ್ರದೇಶವನ್ನು ಗ್ರಾಮದ ಪ್ರಭಾವಿ ವ್ಯಕ್ತಿ ಒತ್ತುವರಿ ಮಾಡಿಕೊಂಡಿದ್ದರು. ಪ್ರಶ್ನಿಸಿದರೆ ದಾಖಲೆಗಳನ್ನು ನೀಡುವಲ್ಲಿ ಹಿಂದೇಟು ಹಾಕುತ್ತಿದ್ದರು. ಇದರ ವಿರುದ್ಧ ಗ್ರಾಮದ ಯುವಕರು ಒಗ್ಗಟ್ಟಿನಿಂದ ಸಾಕ್ಷಾಧಾರಗಳನ್ನು ಸಂಗ್ರಹಿಸಿ, ಸಂಬಂಧಿತ ಅಧಿಕಾರಿಗಳಿಗೆ ಕೊಟ್ಟು, ಸಮಸ್ಯೆ ಬಗೆಹರಿಸಿದ ಕಾರಣ ತಹಸೀಲ್ದಾರ್ ಕೋರ್ಟ್‍ನಲ್ಲಿ ದೂರು ದಾಖಲಿಸಿ ಒತ್ತುವರಿ ಜಾಗ ತೆರವುಗೊಳಿಸಿ ಸರ್ಕಾರಿ ಆಸ್ತಿ ಉಳಿಸಿದ್ದಾರೆ.ನೆಲಮಂಗಲ ತಹಸೀಲ್ದಾರ್ ಆದೇಶದಂತೆ ಒತ್ತುವರಿದಾರರಿಗೆ ತೆರವುಗೊಳಿಸಲು ಸೂಚಿಸಿದರು. ತೆರವುಗೊಳಿಸದ ಕಾರಣ ತ್ಯಾಮಗೊಂಡ್ಲು ರಾಜಸ್ವ ನಿರೀಕ್ಷಕ ಮಹೇಶ್ ಕುಮಾರ್, ಕಳಲುಘಟ್ಟ ಗ್ರಾಪಂ ಪಿಡಿಒ ವೆಂಕಟೇಶ್ ಸ್ಥಳದಲ್ಲೇ ನಿಂತು ಯುವಕರ ಸಹಕಾರದಿಂದ ಕಾಂಪೌಂಡ್ ಉರುಳಿಸಿ ಸಾರ್ವಜನಿಕರ ಬಳಕೆಗೆ ಅನುಕೂಲ ಮಾಡಿಕೊಟ್ಟರು.
ಹೋರಾಟದಲ್ಲಿ ಗ್ರಾಮದ ಯುವಕರಾದ ಕೃಷ್ಣಮೂರ್ತಿ, ರಂಜಿತ್, ಸಿದ್ದರಾಜು, ಚಿರಂತ್, ಅಜಯ್, ಶಶಿಕುಮಾರ್, ತೇಜಸ್, ದೇವರಾಜ್, ನಾಗರಾಜ್, ಅಕ್ಷಯ್, ರಮೇಶ್, ನಾಗೇಶ್, ಸಿದ್ದ ಗಂಗಮ್ಮ ಗಂಗರಾಜಮ್ಮ, ಕೆಂಪಮ್ಮ ಮತ್ತು ಭಾಗ್ಯಮ್ಮ ಇತರರಿದ್ದರು. ಇವರ ಒಗ್ಗಟ್ಟು ಮತ್ತು ದೃಢಸಂಕಲ್ಪವೇ ಈ ಹೋರಾಟದ ಯಶಸ್ಸಿಗೆ ಕಾರಣ ಎಂದು ಗ್ರಾಮಸ್ಥರು ಅಭಿನಂದಿಸಿದರು.ಕೋಟ್ ...............
ಕಳಲುಘಟ್ಟ ಕಾಲೋನಿಗೆ ಹೊಂದಿಕೊಂಡಿರುವ ಜಮೀನಿನ ಮಾಲೀಕರು ಸರ್ಕಾರಿ ಜಾಗ ಒತ್ತುವರಿ ಮಾಡಿಕೊಂಡು ಬಳಸುತ್ತಿದ್ದರು. ಈ ಕುರಿತು ಅರ್ಜಿ, ದೂರು ಸಲ್ಲಿಸಿದರೂ ಪ್ರಯೋಜನವಾಗಲಿಲ್ಲ. ಬಳಿಕ ಗ್ರಾಮದ ಯುವಕರೆಲ್ಲ ಸೇರಿ ದಾಖಲೆಗಳನ್ನು ಸಂಗ್ರಹಿಸಿ, ನೆಲಮಂಗಲ ತಹಸೀಲ್ದಾರ್‌ಗೆ ದೂರು ಸಲ್ಲಿಸಿ ಕಾನೂನಾತ್ಮಕ ಹೋರಾಟ ಮಾಡಿ ಸರ್ಕಾರಿ ಆಸ್ತಿ ಉಳಿಸಿದ್ದೇವೆ.-ಕೃಷ್ಣಮೂರ್ತಿ, ಯುವ ಮುಖಂಡ, ಕಳಲುಘಟ್ಟ
ಪೋಟೋ 6 :ತ್ಯಾಮಗೊಂಡ್ಲು ಹೋಬಳಿಯ ಕಳಲುಘಟ್ಟದಲ್ಲಿ ಸರ್ಕಾರಿ ಗ್ರಾಮ ಠಾಣಾ ಜಾಗ ಒತ್ತುವರಿಯನ್ನು ಗ್ರಾಮದ ಯುವಕರೇ ತೆರವುಗೊಳಿಸಿ ಸಾರ್ವಜನಿಕರ ಬಳಕೆಗೆ ಅನುವು ಮಾಡಿಕೊಟ್ಟರು.