ಹೈಕೋರ್ಟ್ ನ್ಯಾಯಾಧೀಶರಿಂದ ಅಯೋಧ್ಯೆಯಲ್ಲಿ ಕಲಶ ಸೇವೆ

| Published : Mar 10 2024, 01:46 AM IST

ಹೈಕೋರ್ಟ್ ನ್ಯಾಯಾಧೀಶರಿಂದ ಅಯೋಧ್ಯೆಯಲ್ಲಿ ಕಲಶ ಸೇವೆ
Share this Article
  • FB
  • TW
  • Linkdin
  • Email

ಸಾರಾಂಶ

ನಂತರ ಬಾಲರಾಮನಿಗೆ ಮಂಡಲೋತ್ಸವದಲ್ಲಿ ರಜತ ಕಲಶಾಭಿಷೇಕ ಸೇವೆಯನ್ನು ನೀಡಿದ ನ್ಯಾಯಾಧೀಶರು, ಪೇಜಾವರ ಶ್ರೀಗಳ ಮೂಲಕ ರಾಮದೇವರಿಗೆ ಕಲಶಾರಾಧನೆ, ಕಲಶಾಭಿಷೇಕ ಸಹಿತ ಪೂಜೆಯನ್ನು ಅರ್ಪಿಸಿದರು.

ಕನ್ನಡಪ್ರಭ ವಾರ್ತೆ ಉಡುಪಿರಾಜ್ಯ ಉಚ್ಚನ್ಯಾಯಾಲಯದ ನ್ಯಾಯಾಧೀಶ ನ್ಯಾ. ದೇವದಾಸ್ ಅವರು ಪತ್ನಿ, ಕುಟುಂಬಸ್ಥರೊಡನೆ ಅಯೋಧ್ಯೆ ರಾಮ ಮಂದಿರಕ್ಕೆ ಭೇಟಿ ನೀಡಿ ಬಾಲರಾಮನ ದರ್ಶನ ಪಡೆದರು.

ನಂತರ ಬಾಲರಾಮನಿಗೆ ಮಂಡಲೋತ್ಸವದಲ್ಲಿ ರಜತ ಕಲಶಾಭಿಷೇಕ ಸೇವೆಯನ್ನು ನೀಡಿದ ನ್ಯಾಯಾಧೀಶರು, ಪೇಜಾವರ ಶ್ರೀಗಳ ಮೂಲಕ ರಾಮದೇವರಿಗೆ ಕಲಶಾರಾಧನೆ, ಕಲಶಾಭಿಷೇಕ ಸಹಿತ ಪೂಜೆಯನ್ನು ಅರ್ಪಿಸಿದರು. ಶ್ರೀಗಳಿಂದ ರಜತಕಲಶ ಪ್ರಸಾದ ಸ್ವೀಕರಿಸಿ ಆಶೀರ್ವಾದ ಪಡೆದರು.ಈ ಸಂದರ್ಭ ಮಾತನಾಡಿದ ನ್ಯಾಯಮೂರ್ತಿ, ರಾಮನ ದರ್ಶನದಿಂದ ಅತೀವ ಸಂತಸವಾಗಿದೆ. ರಾಮರಾಜ್ಯ ನಿರ್ಮಾಣ ಮಾಡಬೇಕೆಂಬ ಕಲ್ಪನೆಯಲ್ಲಿ ಸಾಮಾಜಿಕ ಕಾರ್ಯ ನಡೆಸಿದವರಿಗೆ ರಾಮ‌ನ ಸೇವೆಗೆ ಅವಕಾಶ ಮಾಡಿಕೊಡುವ ಶ್ರೀಗಳ ಚಿಂತನೆ ಅತ್ಯಂತ ಶ್ಲಾಘನೀಯವಾಗಿದೆ. ಸಮಾಜದ ಒಳಿತಿಗೆ ತಮ್ಮ ಸಂಪತ್ತನ್ನು ಧಾರೆಯೆರೆಯಲು ಶಕ್ತರಿರುವ ಎಲ್ಲರೂ ಈ ಸತ್ಕಾರ್ಯದಲ್ಲಿ ಭಾಗವಹಿಸಿ ರಾಮರಾಜ್ಯ ಅಭಿಯಾನಕ್ಕೆ ಕೈಜೋಡಿಸಬೇಕೆಂದರು. ಬಳಿಕ ಶ್ರೀಗಳ ಪಾದಪೂಜೆ ನೆರವೇರಿಸಿ ಗುರುಕಾಣಿಕೆ ಅರ್ಪಿಸಿ ಗೌರವಿಸಿದರು.ಹೈಕೋರ್ಟ್ ನಿವೃತ್ತ ಮುಖ್ಯ ನ್ಯಾಯಮೂರ್ತಿ ದಿನೇಶ್ ಕುಮಾರ್ ದಂಪತಿ ಕೂಡ ಭಾಗವಹಿಸಿದ್ದರು. ಶ್ರೀಗಳ ಸಹಾಯಕರಾದ ವಾಸುದೇವ ಭಟ್ ಪೆರಂಪಳ್ಳಿ, ವಿಷ್ಣುಮೂರ್ತಿ ಆಚಾರ್ಯ, ಶ್ರೀನಿವಾಸ ಪ್ರಸಾದ್ ಮೈಸೂರು, ವೇದಮೂರ್ತಿ ಶಶಾಂಕ ಭಟ್, ಲಕ್ಷ್ಮೀನಾರಾಯಣ ಭಟ್ ಮೊದಲಾದವರು ಉಪಸ್ಥಿತರಿದ್ದರು.