ಸಾರಾಂಶ
ಕನ್ನಡಪ್ರಭ ವಾರ್ತೆ ಬೆಳ್ತಂಗಡಿ
ಕಳಿಯ-ನ್ಯಾಯತರ್ಪು ಹಿಂದೂ ರುದ್ರಭೂಮಿ ಸೇವಾ ಸಮಿತಿ ಹಾಗೂ ಕಳಿಯ ಗ್ರಾಮ ಪಂಚಾಯಿತಿ ಸಹಯೋಗದಲ್ಲಿ ಹಿಂದೂ ರುದ್ರಭೂಮಿ ಲೋಕಾರ್ಪಣೆ ಹಾಗೂ ಸಭಾ ಕಾರ್ಯಕ್ರಮ ಬುಧವಾರ ಗೇರುಕಟ್ಟೆಯಲ್ಲಿ ನಡೆಯಿತು.ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಿದ ಶಾಸಕ ಹರೀಶ್ ಪೂಂಜ ಮಾತನಾಡಿ, ಮೋಕ್ಷಧಾಮ ಹಿಂದೂ ಸಮಾಜದ ಪವಿತ್ರ ಸ್ಥಳ. ದೇವಸ್ಥಾನಗಳಿಗೆ ಶಕ್ತಿ ತುಂಬುವಂತೆ ಮೋಕ್ಷಧಾಮಗಳಿಗೂ ಶಕ್ತಿ ತುಂಬುವ ಅಗತ್ಯವಿದೆ. ಪ್ರತಿ ಗ್ರಾಮಕ್ಕೂ ಮೋಕ್ಷಧಾಮ ಅಗತ್ಯವಾಗಿದ್ದು ಇದಕ್ಕೆ ಗ್ರಾಮಸ್ಥರು ಕೈಜೋಡಿಸಬೇಕು. ಕಳಿಯದಲ್ಲಿ ರಾಜ್ಯಕ್ಕೆ ಮಾದರಿಯಾಗಿರುವ ಮೋಕ್ಷಧಾಮ ಲೋಕಾರ್ಪಣೆಗೊಂಡಿದೆ ಎಂದರು.ವಿಧಾನಪರಿಷತ್ ಸದಸ್ಯ ಕಿಶೋರ್ ಕುಮಾರ್ ಬೊಟ್ಯಾಡಿ ಮಾತನಾಡಿ, ಹಿಂದೂ ಸಮಾಜದ ಒಗ್ಗಟ್ಟು ಇನ್ನಷ್ಟು ಹೆಚ್ಚಬೇಕಿದೆ. ಮೋಕ್ಷಧಾಮ ಅತ್ಯಂತ ಪವಿತ್ರ ಸ್ಥಳವಾಗಿದೆ. ಇಲ್ಲಿನ ಮೋಕ್ಷಧಾಮದ ಪರಿಸರದಲ್ಲಿ ಇಂಟರ್ಲಾಕ್ ಅಳವಡಿಸಲು ಶಾಸಕರ ನಿಧಿಯಿಂದ 5 ಲಕ್ಷ ರು. ನೀಡಲಾಗುವುದು ಎಂದರುಕಳಿಯ ಗ್ರಾ.ಪಂ. ಅಧ್ಯಕ್ಷ ದಿವಾಕರ ಎಂ. ಅಧ್ಯಕ್ಷತೆ ವಹಿಸಿದ್ದರು. ಕಳಿಯ ಪ್ಯಾಕ್ಸ್ ಅಧ್ಯಕ್ಷ ವಸಂತ ಮಜಲು, ಉದ್ಯಮಿ ಕಿರಣ್‌ಚಂದ್ರ ಡಿ.ಪುಷ್ಪಗಿರಿ, ನಾಳ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಹರೀಶ್, ಉದ್ಯಮಿ ಜಾನ್ ಸುರೇಶ್, ಎಸ್ ಕೆ ಡಿ ಆರ್ ಡಿ ಪಿ ಯೋಜನಾಧಿಕಾರಿ ಯಶೋಧರ,ಪಿಡಿಒ ಸಂತೋಷ್ ಪಾಟೀಲ್ ಮೊದಲಾದವರು ಉಪಸ್ಥಿತರಿದ್ದರು.
ರುದ್ರಭೂಮಿ ಸಮಿತಿ ಅಧ್ಯಕ್ಷ ಕೇಶವ ಬಂಗೇರ ಪ್ರಾಸ್ತಾವಿಕವಾಗಿ ಮಾತನಾಡಿದರು........................೫೫ ಸೆಂಟ್ಸ್ ಜಾಗದಲ್ಲಿ ಸುಮಾರು ೨೫ ಲಕ್ಷ ರೂ.ವೆಚ್ಚದಲ್ಲಿ ಹಿಂದೂ ರುದ್ರ ಭೂಮಿಯ ರಚನೆಯಾಗಿದೆ. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಶವ ಸುಡುವ ಸ್ಟೀಮರ್ ಶವಾಗಾರಕ್ಕೆ ನೀಡಲಾಗಿದೆ. ಕಳಿಯ ಗ್ರಾಮ ಪಂಚಾಯಿತಿ ನರೇಗಾ ಯೋಜನೆಯಡಿ ಕಟ್ಟಡ ರಚನೆ, ಎರಡು ಕೊಠಡಿ, ೪ ಲಕ್ಷ ರೂ. ಅನುದಾನ ಶಾಸಕರ ನಿಧಿ,ಸ್ಮಶಾನದ ಹೆಬ್ಬಾಗಿಲನ್ನು ಕಳಿಯ ಪ್ಯಾಕ್ಸ್ ಮತ್ತು ದಾನಿ ಸಹಕಾರದಿಂದ ನಿರ್ಮಿಸಲಾಗಿದೆ.