ಪುತ್ತೂರಿನಲ್ಲಿ ‘ಕಲ್ಜಿಗ’ ಚಲನಚಿತ್ರ ಬಿಡುಗಡೆ

| Published : Sep 14 2024, 01:54 AM IST

ಸಾರಾಂಶ

ಪುತ್ತೂರಿನ ಜಿ.ಎಲ್.ವನ್ ಮಾಲ್‌ನಲ್ಲಿರುವ ಭಾರತ್ ಸಿನಿಮಾಸ್ ಮಲ್ಟಿಪ್ಲೆಕ್ಸ್‌ನಲ್ಲಿ ಸಿನಿಮಾ ಬಿಡುಗಡೆಗೊಂಡಿತು.

ಕನ್ನಡಪ್ರಭ ವಾರ್ತೆ ಪುತ್ತೂರು ಹಿಮಾನಿ ಫಿಲಂಸ್ ಬ್ಯಾನರ್‌ನಡಿಯಲ್ಲಿ ನಿರ್ಮಾಣಗೊಂಡಿರುವ ತುಳುನಾಡಿನ ದೈವಭಕ್ತಿ ಪ್ರಧಾನವಾಗಿರುವ ಕನ್ನಡ ಚಲನಚಿತ್ರ ‘ಕಲ್ಚಿಗ’ ಶುಕ್ರವಾರ ಪುತ್ತೂರಿನ ಜಿ.ಎಲ್.ವನ್ ಮಾಲ್‌ನಲ್ಲಿರುವ ಭಾರತ್ ಸಿನಿಮಾಸ್ ಮಲ್ಟಿಪ್ಲೆಕ್ಸ್‌ನಲ್ಲಿ ಬಿಡುಗಡೆಗೊಂಡಿತು.

ಧಾರ್ಮಿಕ ಮುಂದಾಳು ರಾಧಾಕೃಷ್ಣ ಪುತ್ತೂರಾಯ ಅವರು ದೀಪ ಪ್ರಜ್ವಲನ ಮಾಡುವ ಮೂಲಕ ಚಲನಚಿತ್ರ ಬಿಡುಗಡೆಮಾಡಿದರು. ಬಳಿಕ ಮಾತನಾಡಿದ ಅವರು ನಮ್ಮ ಮಣ್ಣಿನ ದೈವಾರಾಧನೆ ಮತ್ತು ನಂಬಿಕೆಗಳನ್ನು ಧನಾತ್ಮಕ ದೃಷ್ಟಿಕೋನದಲ್ಲಿ ನೋಡುವ ಸಿನಿಮಾ ಇಡೀ ಸಮಾಜದಲ್ಲಿ ಧನಾತ್ಮಕ ಚಿಂತನೆ ಮೂಡಿಸುತ್ತದೆ ಎಂದರು.

ನ್ಯಾಯವಾದಿ ಮಹೇಶ್ ಕಜೆ, ಬಿಜೆಪಿ ಮುಖಂಡ ಸಾಜ ರಾಧಾಕೃಷ್ಣ ಆಳ್ವ, ನಗರಸಭೆ ಸದಸ್ಯೆ ವಿದ್ಯಾ ಗೌರಿ, ಪುರಸಭೆ ಮಾಜಿ ಅಧ್ಯಕ್ಷ ಲೋಕೇಶ್ ಹೆಗ್ಡೆ, ನಿವೃತ್ತ ಶಿಕ್ಷಕ ನಾರಾಯಣ ರೈ ಕುಕ್ಕುವಳ್ಳಿ, ಪ್ರಗತಿಪರ ಕೃಷಿಕ ಬೈಲುಗುತ್ತು ಮಾರಪ್ಪ ಶೆಟ್ಟಿ, ಶ್ರೀ ಕ್ಷೇತ್ರ ಧರ್ಮಸ್ಥಳ ಜನಜಾಗೃತಿ ವೇದಿಕೆಯ ಮಾಜಿ ಅಧ್ಯಕ್ಷ ಮಹಾಬಲ ರೈ ವಳತ್ತಡ್ಕ, ಪ್ರಮುಖರಾದ ಶರತ್ ಆಳ್ವ, ಭಾರತ್ ಸಿನಿಮಾಸ್‌ನ ಮ್ಯಾನೇಜರ್ ಜಯರಾಮ ವಿಟ್ಲ, ಸಿನಿಮಾಕ್ಕೆ ಹಿನ್ನೆಲೆ ಸಂಗೀತ ನೀಡಿರುವ ಪ್ರಸಾದ್ ಶೆಟ್ಟಿ, ಚಿತ್ರದ ವಿತರಕ ಬಾಲಕೃಷ್ಣ ಶೆಟ್ಟಿ ಕುಕ್ಕಾಡಿ ಉಪಸ್ಥಿತರಿದ್ದು ಶುಭ ಹಾರೈಸಿದರು. ಪದ್ಮರಾಜ್ ಚಾರ್ವಾಕ ಕಾರ್ಯಕ್ರಮ ನಿರ್ವಹಿಸಿದರು.