ಕಲ್ಲಬೆಟ್ಟು ಸೇವಾ ಸಹಕಾರಿ ಸಂಘ ವಾರ್ಷಿಕ ಮಹಾಸಭೆ

| Published : Sep 24 2024, 01:53 AM IST

ಕಲ್ಲಬೆಟ್ಟು ಸೇವಾ ಸಹಕಾರಿ ಸಂಘ ವಾರ್ಷಿಕ ಮಹಾಸಭೆ
Share this Article
  • FB
  • TW
  • Linkdin
  • Email

ಸಾರಾಂಶ

ಕಲ್ಲಬೆಟ್ಟು ಸೇವಾ ಸಹಕಾರಿ ಸಂಘದ 2023-24ನೇ ಸಾಲಿನ ವಾರ್ಷಿಕ ಮಹಾಸಭೆ ಸಂಘದ ಅಧ್ಯಕ್ಷ ಸುರೇಶ್ ಕೋಟ್ಯಾನ್ ಅಧ್ಯಕ್ಷತೆಯಲ್ಲಿ ಸಂಘದ ಅಕ್ಷಯಧಾಮ ಸಭಾಭವನದಲ್ಲಿ ಜರಗಿತು. ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಅನಿತಾ ಆರ್.ಶೆಟ್ಟಿ ವಾರ್ಷಿಕ ವರದಿ ಮತ್ತು ಲೆಕ್ಕಪತ್ರ ಮಂಡಿಸಿದರು.

ಕನ್ನಡಪ್ರಭ ವಾರ್ತೆ ಮೂಡುಬಿದಿರೆ

ಕಲ್ಲಬೆಟ್ಟು ಸೇವಾ ಸಹಕಾರಿ ಸಂಘದ 2023-24ನೇ ಸಾಲಿನ ವಾರ್ಷಿಕ ಮಹಾಸಭೆ ಸಂಘದ ಅಧ್ಯಕ್ಷ ಸುರೇಶ್ ಕೋಟ್ಯಾನ್ ಅಧ್ಯಕ್ಷತೆಯಲ್ಲಿ ಸಂಘದ ಅಕ್ಷಯಧಾಮ ಸಭಾಭವನದಲ್ಲಿ ಜರಗಿತು.

ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಅನಿತಾ ಆರ್.ಶೆಟ್ಟಿ ವಾರ್ಷಿಕ ವರದಿ ಮತ್ತು ಲೆಕ್ಕಪತ್ರ ಮಂಡಿಸಿ ಮಾತನಾಡಿ, 2023- 24ನೇ ವರ್ಷದ ಜುಮ್ಲಾ ಆದಾಯ ರು. 1,80,05,339-59 ಮತ್ತು ವೆಚ್ಚ ರು 1,62,02,380-41 ಆಗಿದ್ದು, ರು. 18,02,959-18 ನಿವ್ವಳ ಲಾಭ ಆಗಿರುತ್ತದೆ ಎಂದು ತಿಳಿಸಿದರು.

ಸದಸ್ಯರ ಪಾಲು ಬಂಡವಾಳ: 2024 ಮಾಚ್ 9ಕ್ಕೆ 31ರ ಅಂತ್ಯಕ್ಕೆ 3223 ‘ಅ’ ತರಗತಿಯ ಸದಸ್ಯರಿದ್ದು ಸದಸ್ಯರ ಪಾಲು ಬಂಡವಾಳ ರು.83,72,100 ಇದ್ದು ಕಳೆದ ಸಾಲಿಗಿಂತ ರು 7,84,250 ಪಾಲು ಬಂಡವಾಳ ವೃದ್ಧಿಯಾಗಿರುತ್ತದೆ.

ಠೇವಣಾತಿಗಳು: ಪ್ರಸಕ್ತ ಸಾಲಿನಲ್ಲಿ ಸಂಘವು 18,90,41,227.05 ಠೇವಣಿ, 13,39,92,880.00ಸಾಲ ಮತ್ತು ಮುಂಗಡ ಹೊಂದಿದ್ದು, ಕಳೆದ ಸಾಲಿಗಿಂತ ರು. 71,58,931-14 ಠೇವಣಿ ಹೆಚ್ಚಳವಾಗಿದೆ. ಅಲ್ಲದೆ ಹಿರಿಯ ನಾಗರಿಕರಿಗೆ ವಾಯಿದೆ ಠೇವಣಿಗಳಿಗೆ 0.5% ಅಧಿಕ ಬಡ್ಡಿ ನೀಡಲಾಗುವುದೆಂದು ತಿಳಿಸಿದರು. ಶೇ. 93ಸಾಲ ವಸೂಲಾತಿ ಆಗಿರುವುದಾಗಿ ತಿಳಿಸಿದರು.

ಸುಕೇಶ್ ಶೆಟ್ಟಿ ಮತ್ತು ಚಂದ್ರ ಕೆ.ಎಚ್. ಅವರು ಚರ್ಚೆಯಲ್ಲಿ ಪಾಲ್ಗೊಂಡಿದ್ದರು.

ಸನ್ಮಾನ : ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿಯನ್ನು ಪಡೆದಿರುವ ಎಡಪದವು ವಿವೇಕಾನಂದ ಪ.ಪೂ.ಕಾಲೇಜಿನ ಪ್ರೌಢಶಾಲಾ ವಿಭಾಗದ ಮುಖ್ಯ ಶಿಕ್ಷಕ, ಕಲ್ಲಬೆಟ್ಟು ಸೇ.ಸ.ಸಂಘದ ಸದಸ್ಯ ಸುಬ್ರಹ್ಮಣ್ಯ ಮೊಗೆರಾಯ ಅವರನ್ನು ಸನ್ಮಾನಿಸಲಾಯಿತು.

ನಿರ್ದೇಶಕರಾದ ಕೆ.ಕೃಷ್ಣರಾಜ ಹೆಗ್ಡೆ, ಎಸ್.ಪ್ರವೀಣ್ ಕುಮಾರ್, ಆಲ್ವೀನ್ ಮಿನೇಜಸ್, ರಾಘವ ಪಿ.ಸುವರ್ಣ, ನಳಿನಿ ಆರ್. ಹೆಗ್ಡೆ, ಶಶಿಕುಮಾರ್ ಶೆಟ್ಟಿ, ಬಾಲಕೃಷ್ಣ ಸಾಲ್ಯಾನ್, ಬಿನಾಕ ವಿ.ಕೋಟ್ಯಾನ್, ಸುದೀಪ್, ಪ್ರಕಾಶ್ ನಾಯ್ಕ್ ಇದ್ದರು.

ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನಿತಾ ಆರ್.ಶೆಟ್ಟಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಸಂಘದ ನಿರ್ದೇಶಕ ಆಲ್ವಿನ್ ಎಸ್.ಮಿನೇಜಸ್ ವಂದಿಸಿದರು.