ಸಾರಾಂಶ
ಪ್ರೌಢಶಾಲೆಗಳ ದಕ್ಷಿಣವಲಯ ಮಟ್ಟದ ಕ್ರೀಡಾಕೂಟದಲ್ಲಿ ೩೦ ಶಾಲೆಗಳು ಭಾಗವಹಿಸಿದ್ದು, ಸರ್ಕಾರಿ ಪ್ರೌಢಶಾಲೆ ಕಲ್ಲಹಳ್ಳಿ ಶಾಲೆಯು ಬಾಲಕಿಯರ ವಿಭಾಗದಲ್ಲಿ ೩೨ ಅಂಕ ಗಳಿಸುವುದರೊಂದಿಗೆ ಪ್ರಥಮ ತಂಡವಾಗಿ ಸಮಗ್ರ ಪ್ರಶಸ್ತಿ ಪಡೆದು ಅತ್ಯುತ್ತಮ ಸಾಧನೆ ಮಾಡಿದೆ. ಅತ್ಯುತ್ತಮ ಸಾಧನೆ ಮಾಡಿದ ಕ್ರೀಡಾಪಟುಗಳಿಗೆ ತರಬೇತಿ ನೀಡಿದ ದೈಹಿಕ ಶಿಕ್ಷಣ ಶಿಕ್ಷಕರಾದ ಕೆ ಸಿ ರಘು ಹಾಗೂ ಮುಖ್ಯೋಪಾಧ್ಯಾಯರಾದ ಎ ಎಸ್ ಉಮಾಮಣಿ ಮತ್ತು ಶಿಕ್ಷಕ ವೃಂದ ಹಾಗೂ ಎಸ್ ಡಿ ಎಂ ಸಿ ಸದಸ್ಯರು ಸಂತಸ ವ್ಯಕ್ತಪಡಿಸಿ, ಅಭಿನಂದಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಹಾಸನ
ತಾಲೂಕಿನ ಪ್ರೌಢಶಾಲೆಗಳ ದಕ್ಷಿಣವಲಯ ಮಟ್ಟದ ಕ್ರೀಡಾಕೂಟದಲ್ಲಿ ೩೦ ಶಾಲೆಗಳು ಭಾಗವಹಿಸಿದ್ದು, ಸರ್ಕಾರಿ ಪ್ರೌಢಶಾಲೆ ಕಲ್ಲಹಳ್ಳಿ ಶಾಲೆಯು ಬಾಲಕಿಯರ ವಿಭಾಗದಲ್ಲಿ ೩೨ ಅಂಕ ಗಳಿಸುವುದರೊಂದಿಗೆ ಪ್ರಥಮ ತಂಡವಾಗಿ ಸಮಗ್ರ ಪ್ರಶಸ್ತಿ ಪಡೆದು ಅತ್ಯುತ್ತಮ ಸಾಧನೆ ಮಾಡಿದೆ. ದಕ್ಷಿಣ ವಲಯ ಮಟ್ಟದ ಕ್ರೀಡಾಕೂಟದಲ್ಲಿ ೩೦೦೦ಮೀ ಓಟ ನಂದಿನಿ ದ್ವೀತಿಯ, ಉದ್ದ ಜಿಗಿತ ತನುಶ್ರೀ ದ್ವೀತಿಯ ಮತ್ತು ವಾಣಿಶ್ರೀ ತೃತೀಯ, ಎತ್ತರ ಜಿಗಿತ ಮಾನಸ ತೃತೀಯ, ತ್ರಿವಿಧ ಜಿಗಿತ ವಾಣಿಶ್ರೀ ಪ್ರಥಮ & ತನುಶ್ರೀ ದ್ವಿತೀಯ, ಭರ್ಜಿ ಎಸೆತ ಮಾನಸ ದ್ವೀತಿಯ ಮತ್ತು ಚೈತ್ರ ತೃತೀಯ, ೪೧೦೦ ಮೀ ರಿಲೆ ಓಟ ಶಶಿಕಲಾ,ಗಾನವಿ, ಮಾನ್ವಿ, ಮಾನಸ ತಂಡ ದ್ವಿತೀಯ, ೪೪೦೦ ಮೀ ರಿಲೆ ಓಟದಲ್ಲಿ ಶಶಿಕಲಾ, ಗಾನವಿ, ಮಾನ್ವಿ, ರಮ್ಯ ತಂಡ ಪ್ರಥಮ ಸ್ಥಾನಗಳನ್ನು ಗಳಿಸಿದ್ದಾರೆ. ಬಾಲಕರ ವಿಭಾಗದಲ್ಲಿ ೪೧ ಅಂಕ ಪಡೆಯುವುದರೊಂದಿಗೆ ಕೇವಲ ೦೧ ಅಂಕದಿಂದ ಪ್ರಥಮ ಸ್ಥಾನ ಕೈತಪ್ಪಿ ೨ನೇ ಸಮಗ್ರ ಪ್ರಶಸ್ತಿ ಪಡೆದ ಶಾಲೆಯಾಗಿ ಹೊರಹೊಮ್ಮಿದೆ. ೪೦೦ & ೮೦೦ ಮೀ ಓಟ ಧನುಷ್ ತೃತೀಯ, ೩೦೦೦ ಮೀ ಓಟ ಪವನ್ ಪ್ರಥಮ & ನವೀನ್ ತೃತಿಯ, ತ್ರಿವಿಧ ಜಿಗಿತ ಪವನ್ ತೃತೀಯ, ಗುಂಡು ಎಸೆತ ಗಗನ್ ಪ್ರಥಮ, ಭರ್ಜಿ ಎಸೆತ ದೀಕ್ಷಿತ್ ಪ್ರಥಮ ಹಾಗೂ ಅಶೋಕ್ ದ್ವೀತಿಯ, ಉದ್ದ ಜಿಗಿತ ದೀಕ್ಷಿತ್ ದ್ವಿತೀಯ, ಎತ್ತರ ಜಿಗಿತ ದೀಕ್ಷಿತ್ ಪ್ರಥಮ, ಹ್ಯಾಮರ್ ಎಸೆತ ಗುಣಶೇಖರ್ ತೃತೀಯ, ೪೧೦೦ ಮೀ ರಿಲೆ ಓಟ ದೀಕ್ಷಿತ್, ಪವನ್, ಗಗನ್, ಅಶೋಕ್ ತಂಡ ಪ್ರಥಮ, ೪೪೦೦ ಮೀ ರಿಲೆ ಓಟ ಗಗನ್, ಧನುಷ್, ಯುವರಾಜ್, ಪವನ್ ತಂಡ ತೃತೀಯ ಸ್ಥಾನ ಪಡೆದ್ದಿದ್ದಾರೆ. ವಿಶೇಷವಾಗಿ ಕ್ರೀಡಾಕೂಟದಲ್ಲಿ ದೀಕ್ಷಿತ್ ವೈಯಕ್ತಿಕ ಚಾಂಪಿಯನ್ ಹಾಗಿ ಅದ್ಭುತ ಸಾಧನೆ ಮಾಡಿದ್ದಾರೆ. ಅತ್ಯುತ್ತಮ ಸಾಧನೆ ಮಾಡಿದ ಕ್ರೀಡಾಪಟುಗಳಿಗೆ ತರಬೇತಿ ನೀಡಿದ ದೈಹಿಕ ಶಿಕ್ಷಣ ಶಿಕ್ಷಕರಾದ ಕೆ ಸಿ ರಘು ಹಾಗೂ ಮುಖ್ಯೋಪಾಧ್ಯಾಯರಾದ ಎ ಎಸ್ ಉಮಾಮಣಿ ಮತ್ತು ಶಿಕ್ಷಕ ವೃಂದ ಹಾಗೂ ಎಸ್ ಡಿ ಎಂ ಸಿ ಸದಸ್ಯರು ಸಂತಸ ವ್ಯಕ್ತಪಡಿಸಿ, ಅಭಿನಂದಿಸಿ, ರಾಜ್ಯಮಟ್ಟದವರೆಗೂ ಆಯ್ಕೆಯಾಗಿ ಪ್ರಜ್ವಲಿಸಲಿ ಎಂದು ಶುಭಕೋರಿದ್ದಾರೆ.