ಕಲ್ಲೋಳಿ ಕೃಷಿ ಪತ್ತಿನ ಸಂಘಕ್ಕೆ ₹58.34 ಲಕ್ಷ ಲಾಭ

| Published : Sep 14 2025, 01:06 AM IST

ಕಲ್ಲೋಳಿ ಕೃಷಿ ಪತ್ತಿನ ಸಂಘಕ್ಕೆ ₹58.34 ಲಕ್ಷ ಲಾಭ
Share this Article
  • FB
  • TW
  • Linkdin
  • Email

ಸಾರಾಂಶ

ಕಲ್ಲೋಳಿ ಪಟ್ಟಣದ ಶತಮಾನ ಪೂರೈಸಿದ ಪ್ರತಿಷ್ಠಿತ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ 112 ನೇ ವಾರ್ಷಿಕ ಸರ್ವ ಸಾಧಾರಣ ಸಭೆ

ಕನ್ನಡಪ್ರಭ ವಾರ್ತೆ ಮೂಡಲಗಿ

ಕಲ್ಲೋಳಿ ಪಟ್ಟಣದ ಪ್ರಾಥಮಿಕ ಕೃಷಿ ಪತ್ತಿನ ಸಂಘದ ಸದಸ್ಯರ ಮಕ್ಕಳ ಎಸ್ಎಸ್ಎಲ್‌ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ತೇರ್ಗಡೆಯಾದ ತಲಾ ಮೂವರಿಗೆ ಪ್ರೋತ್ಸಾಹ ಧನವನ್ನು ಮತ್ತು ಸಂಘದ ಸದಸ್ಯರ ಕಲ್ಯಾಣ ಕಾರ್ಯಕ್ರಮಗಳಿಗೆ ಮೂಲಸೌಕರ್ಯ ಒದಗಿಸುವುದು ಹಾಗೂ ಸಂಘದ ಸದಸ್ಯರುಗಳಿಗೆ ಮರಣೋತ್ತರ ನಿಧಿಯಿಂದ ಸಾಲಗಾರ ಸದಸ್ಯರಿಗೆ ಹತ್ತು ಸಾವಿರ ಧನಸಹಾಯ ನೀಡಲಾಗುವುದು ಎಂದು ಸಂಘ ಅಧ್ಯಕ್ಷ ನೀಲಕಂಠ ಬಸಪ್ಪ ಕಪಲಗುದ್ದಿ ಹೇಳಿದರು.

ತಾಲೂಕಿನ ಕಲ್ಲೋಳಿ ಪಟ್ಟಣದ ಶತಮಾನ ಪೂರೈಸಿದ ಪ್ರತಿಷ್ಠಿತ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ 112 ನೇ ವಾರ್ಷಿಕ ಸರ್ವ ಸಾಧಾರಣ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, 112 ವರ್ಷಗಳಿಂದ ಸಹಕಾರ ಕ್ಷೇತ್ರದಲ್ಲಿ ಪ್ರಗತಿ ಸಾಧಿಸುತ್ತ ಬಂದಿರುವ ಸಂಘವು ಕಳೆದ ಮಾರ್ಚ್‌ ಅಂತ್ಯಕ್ಕೆ 2,848 ಸಾಮಾನ್ಯ ಸದಸ್ಯರಿಂದ ₹2.69 ಕೋಟಿ ಶೇರು ಬಂಡವಾಳ, ₹5.90 ಕೋಟಿ ನಿಧಿಗಳು, ಬಿಡಿಸಿಸಿ ಬ್ಯಾಂಕನಲ್ಲಿ ಆರ್‌ಎಫ್‌ಡಿ ಸಹಿತ ₹7,34 ಕೋಟಿ ಗುಂತಾವಣೆ ಹೊಂದಿ ₹58.34 ಲಕ್ಷ ಲಾಭ ಗಳಿಸಿ ಮತ್ತು ಶೇರುದಾರರಿಗೆ ಶೇ.5ರಷ್ಟು ಲಾಭಾಂಶ ವಿತರಿಸಿ ಸಂಘವು ಪ್ರಗತಿ ಪತಥದಲ್ಲಿ ನಡೆದಿದೆ ಎಂದರು.

1,438 ಸದಸ್ಯರುಗಳಿಗೆ ₹15,84 ಕೋಟಿ ಬೆಳೆಸಾಲ ಹಾಗೂ 5 ಸದಸ್ಯರಿಗೆ ₹27,16 ಲಕ್ಷ ಟ್ರ್ಯಾಕ್ಟರ್‌ ಸಾಲ, 14 ಸದಸ್ಯರಿಗೆ ₹97 ಸಾವಿರ ಹೈನುಗಾರಿಕೆ ಸಾಲ ಬಿಡಿಸಿಸಿ ಬ್ಯಾಂಕಿನಿಂದ ವಿತರಿಸಿದೆ ಹಾಗೂ ಸ್ವಂತ ಬಂಡವಾಳದಲ್ಲಿ ₹9,71 ಲಕ್ಷ ಬೆಳೆಸಾಲ ನೀಡಲಾಗಿದೆ ಎಂದರು.

2022-23ನೇ ಸಾಲಿಗಾಗಿ ಹೊಸ ಪತ್ತ ಮಂಜೂರಿ ಪಡೆದು ಪ್ರತಿ ಎಕರೆಗೆ ₹40 ಸಾವಿರನಂತೆ ₹16,40 ಕೋಟಿ ಮಂಜೂರಾಗಿದ್ದು, ಅದರಲ್ಲಿ ₹16 ಕೋಟಿ ಡಿಸಿಸಿ ಬ್ಯಾಂಕನಿಂದ ಹಾಗೂ ₹28,83 ಲಕ್ಷ ಸ್ವಂತ ಬಂಡವಾಳದಲ್ಲಿ ಸಾಲ ವಿತರಿಸಲಾಗಿದೆ. ಆಡಳಿತ ಮಂಡಳಿಯ ಮತ್ತು ಸಿಬ್ಬಂದಿ ವರ್ಗದವರ ಶ್ರಮದಿಂದ ಶೇ. 100 ರಷ್ಟು ವಸೂಲಾತಿ ಸಾಧಿಸಲು ಸಾದ್ಯವಾಗಿದೆ ಎಂದರು.

ಸಭೆಯಲ್ಲಿ ಉಪಾಧ್ಯಕ್ಷರಾದ ಭೀಮಪ್ಪ ವ್ಯಾಪಾರಿ ನಿರ್ದೇಶಕರಾದ ಬಸವರಾಜ ಬೆಳಕೂಡ, ಮಲ್ಲಪ್ಪ ಕಡಾಡಿ, ಆನಂದ ಹೆಬ್ಬಾಳ, ಶಂಕರ ಗೋರೋಶಿ, ಬಸಪ್ಪ ಬಿ.ಪಾಟೀಲ, ಧರೀಶ ಖಾನಗೌಡ್ರ, ಮಹಾದೇವಿ ಖಾನಾಪೂರ, ಕೆಂಪವ್ವ ಗೋರೋಶಿ, ಮಲ್ಲಪ್ಪ ಪೂಜೇರಿ, ಧರ್ಮಣ್ಣ ನಂದಿ, ಬ್ಯಾಂಕ್‌ ನಿರೀಕ್ಷಕ ಹಾಗೂ ಶೇರುದಾರರು, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಸಂಘದ ಮುಖ್ಯ ಕಾರ್ಯನಿರ್ವಾಹಕ ಮಲ್ಲಪ್ಪ ಹೆಬ್ಬಾಳ ವಾರ್ಷಿಕ ವರದಿ ಮಂಡಿಸಿದರು, ಮಾನಿಂಗ ಮೇತ್ರಿ ವಂದಿಸಿದರು.