ನಾಡಿನ ಯುವ ಸಮೂಹಕ್ಕೆ ಇತಿಹಾಸ ತಿಳಿಸುವ ನಿಟ್ಟಿನಲ್ಲಿ ಇಂಥ ಕಾರ್ಯಕ್ರಮಗಳಿಂದ ಪ್ರೇರಣೆ ಸಿಗಬೇಕು ಎನ್ನುವ ದೃಷ್ಟಿಯಿಂದ ಎಲ್ಲೆಡೆ ನಡೆಯುತ್ತಿದೆ. ಸುತ್ತೂರು ಮಠಕ್ಕೆ ತನ್ನದೇ ಆದ ಇತಿಹಾಸ ಪರಂಪರೆ ಇದೆ. ಶ್ರೀಗಳು ಸಮಾಜಕ್ಕಾಗಿ ಮಾಡಿರುವುದು ಸೇವೆ ಅನನ್ಯ, ನೊಂದ ಬೆಂದು ಬಂದಿದ್ದ ಅನೇಕರಿಗೆ ದಾರಿ ದೀಪವಾಗಿದೆ.
ಕನ್ನಡಪ್ರಭ ವಾರ್ತೆ ಮಳವಳ್ಳಿ
ಕಲ್ಯಾಣ ಕರ್ನಾಟಕದ ಅನೇಕ ಬಡ ವಿದ್ಯಾರ್ಥಿಗಳಿಗೆ ಊಟದೊಂದಿಗೆ ಶಿಕ್ಷಣ ನೀಡಿ ಅವರು ದೊಡ್ಡ ದೊಡ್ಡ ಉನ್ನತ ಹುದ್ದೆಗೇರಿಸಲು ಮಠಮಾನ್ಯಗಳ ಕೊಡುಗೆ ಅಪಾರವಾಗಿದೆ ಎಂದು ಅರಣ್ಯ ಸಚಿವ ಈಶ್ವರ್ ಬಿ.ಖಂಡ್ರೆ ಶ್ಲಾಘಿಸಿದರು.ಪಟ್ಟಣದಲ್ಲಿ ಸುತ್ತೂರು ಶಿವರಾತ್ರೀಶ್ವರ ಶಿವಯೋಗಿಗಳ 1066 ನೇ ಜಯಂತ್ಯುತ್ಸವದ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿ, ಮಠಗಳು ಹಾಗೂ ಸ್ವಾಮೀಜಿಗಳಿಂದ ಸಮಾಜ ಸುಸಂಸ್ಕೃತವಾಗಿದೆ. ನವ ಕರ್ನಾಟಕ ನಿರ್ಮಾಣದ ಕಾರ್ಯದಲ್ಲಿ ತನ್ನದೇ ಆದ ಶ್ರಮ ನೀಡುತ್ತಿದ್ದಾರೆ ಎಂದರು.ಕಳೆದ 33 ವರ್ಷಗಳಿಂದ ಬೇರೆ ಬೇರೆ ಕಡೆಗಳಲ್ಲಿ ಜಯಂತ್ಯುತ್ಸವ ನಡೆಯುತ್ತಿದೆ. ಜಗತ್ತಿಗೆ ಮೊದಲು ಬೆಳಕು ನೀಡಿದ ಮಳವಳ್ಳಿ ಕ್ಷೇತ್ರದಲ್ಲಿ ಇದೊಂದು ಅದ್ಭುತ ಕಾರ್ಯಕ್ರಮವಾಗಿ ರೂಪುಗೊಂಡಿದೆ ಎಂದರು.
ನಾಡಿನ ಯುವ ಸಮೂಹಕ್ಕೆ ಇತಿಹಾಸ ತಿಳಿಸುವ ನಿಟ್ಟಿನಲ್ಲಿ ಇಂಥ ಕಾರ್ಯಕ್ರಮಗಳಿಂದ ಪ್ರೇರಣೆ ಸಿಗಬೇಕು ಎನ್ನುವ ದೃಷ್ಟಿಯಿಂದ ಎಲ್ಲೆಡೆ ನಡೆಯುತ್ತಿದೆ. ಸುತ್ತೂರು ಮಠಕ್ಕೆ ತನ್ನದೇ ಆದ ಇತಿಹಾಸ ಪರಂಪರೆ ಇದೆ. ಶ್ರೀಗಳು ಸಮಾಜಕ್ಕಾಗಿ ಮಾಡಿರುವುದು ಸೇವೆ ಅನನ್ಯ, ನೊಂದ ಬೆಂದು ಬಂದಿದ್ದ ಅನೇಕರಿಗೆ ದಾರಿ ದೀಪವಾಗಿದೆ ಎಂದರು.ಸಮಾಜಕ್ಕೆ ಅಪಾರ ಕೊಡುಗೆ ನೀಡಿದ್ದ ಶ್ರೇಯಸ್ಸು ಸುತ್ತೂರಿಗೆ ಸಲ್ಲುತ್ತದೆ. ವಿಶೇಷವಾಗಿ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರು ಬೀದರನಿಂದ ಚಾಮರಾಜನಗರದವರೆಗೆ ಸುತ್ತಾಡಿ, ಅನ್ನ, ಅಕ್ಷರದೊಂದಿಗೆ ಜನರಿಗೆ ಜ್ಞಾನ ತುಂಬುವ ಕೆಲಸ ಮಾಡುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಆಧುನಿಕತೆಯಿಂದ ಎಲ್ಲವೂ ಮುಂದೆ ಸಾಗುತ್ತಿದೆ. ಅನೇಕ ಕಡೆ ಯುದ್ಧ ನಡೆಯುತ್ತಾ ಪ್ರೀತಿ, ವಿಶ್ವಾಸ, ನಂಬಿಕೆ ಕಡಿಮೆಯಾಗುತ್ತಿದೆ. ಹಣವಿದ್ದರೆ ಎಲ್ಲವೂ ಸಿಗುವುದಿಲ್ಲ. ಯುವಸಮೂಹ ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣ, ಶೇ.30ರಷ್ಟು ಮಾದಕ ವ್ಯಸನಿಗಳಾಗುತ್ತಿದ್ದಾರೆ. ಇಂಥವರನ್ನು ಸರಿ ದಾರಿಗೆ ತರುವ ಕೆಲಸ ಮಾಡಬೇಕು ಎಂದರು.ಇತ್ತೀಚಿನ ದಿನಗಳಲ್ಲಿ ತಂದೆ ತಾಯಂದಿರನ್ನು ವೃದ್ಧಾಶ್ರಮಕ್ಕೆ ಕಳಿಸುವ ಜನರನ್ನು ಬದಲಾಯಿಸಬೇಕಿದೆ. ಯುವಕರನ್ನು ತರಬೇತಿ ನೀಡುವ ಯೋಜನೆ ರೂಪಿಸಿದ್ದೇವೆ. ಬಸವಕಲ್ಯಾಣದಲ್ಲಿ ಅನುಭವ ಮಂಟಪ ನಿರ್ಮಾಣ ಮಾಡಿ ಅಲ್ಲಿನ ಕಂಬಗಳಲ್ಲಿ ಶರಣರ ಸಾಧನೆ ಕೆತ್ತಿ ಸಮಾಜದಲ್ಲಿ ಜನರಿಗೆ ಮಾರ್ಗವಾಗಬೇಕು ಎನ್ನುವ ಪರಿಕಲ್ಪನೆ ಹೊಂದಲಾಗಿದೆ. ಯುವಕರಿಗೆ ಇಷ್ಟಲಿಂಗ ಪೂಜೆ ಮೂಲಕ ಅವರನ್ನು ಸಮಾಜದಲ್ಲಿ ಉತ್ತಮ ಪಡಿಸಲು ನಿರ್ಧರಿಸಿದ್ದೇವೆ ಎಂದರು.
650 ಕೋಟಿ ರು. ವೆಚ್ಚದಲ್ಲಿ ಅನುಭವ ಮಂಟಪ ನಿರ್ಮಣಕ್ಕೆ ಯೋಜನೆ ರೂಪಿಸಿದ್ದವು. ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ಅವಧಿಯಲ್ಲಿ 250 ಕೋಟಿ ನೀಡಿದ್ದರು. ನಂತರ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಸಿಎಂ ಸಿದ್ದರಾಮಯ್ಯ ಅವರು 200 ಕೋಟಿ ರು. ಅನುದಾನ ನೀಡಿದ್ದು, ಮುಂದಿನ ಡಿಸೆಂಬರ್ ಒಳಗಡೆ ಅನುಭವ ಉದ್ಘಾಟನೆಗೊಳ್ಳಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.