ಕಲಬುರಗಿ: ಇಂದು ಬಿಜೆಪಿ ಕಚೇರಿ ಮುಂದೆ ನಿಲ್ಲಲಿದೆ ಕಲ್ಯಾಣ ಪ್ರಗತಿ ರಥ

| Published : Feb 12 2024, 01:31 AM IST

ಕಲಬುರಗಿ: ಇಂದು ಬಿಜೆಪಿ ಕಚೇರಿ ಮುಂದೆ ನಿಲ್ಲಲಿದೆ ಕಲ್ಯಾಣ ಪ್ರಗತಿ ರಥ
Share this Article
  • FB
  • TW
  • Linkdin
  • Email

ಸಾರಾಂಶ

ಬಿಜೆಪಿಗರಿಗೆ ಕಣ್ಣಿಲ್ಲ, ಯಾಕಂದ್ರೆ ಇ‍ರಿಗೆ ಕಾಂಗ್ರೆಸ್‌ ಪಕ್ಷದ ಜನಪರ ಕೆಲಸಗಳೇ ಕಣುತ್ತಿಲ್ಲ. ಪಂಚ ಗ್ಯಾರಂಟಿ ಜಾರಿಗೊಳಿಸಿರುವುದು ನಮ್ಮ ಮಹತ್ವದ ಸಾಧನೆ. ಮೂಲ ಸವಲತತಿಗಾಗಿಯೂ ಸಾಕಷ್ಟು ಕೆಲಸಗಳು ಸಾಗಿವೆ.

ಕನ್ನಡಪ್ರಭ ವಾರ್ತೆ ಕಲಬುರಗಿ

ನವ ಮಾಸದಲ್ಲಿ ನಿಮ್ಮ ಸಧನೆ ಶೂನ್ಯ. ಏನೂ ಮಾಡಿಲ್ಲ, ನಿಮ್ಮ ಕೆಲಸಗಳನ್ನು ಮತದಾರರಿಗೆ ತೋರಿಸಿರಿ ಎಂಬ ಬಿಜೆಪಿ ಅಭಿಯಾನಕ್ಕೆ ಪ್ರತ್ಯುತ್ತರ ನೀಡಲು ಮುಂದಾಗಿರುವ ಜಿಲ್ಲಾ ಕಾಂಗ್ರೆಸ್‌ ಕಮಿಟಿ ಇದಕ್ಕಾಗಿಯೇ ಕಲ್ಯಾಣ ಪ್ರಗತಿ ರಥ ಎಂಬ ರಥವನ್ನೇ ಸಿದ್ಧಪಡಿಸಿದ್ದು ಇದರಲ್ಲಿ ಕಾಂಗ್ರೆಸ್‌ನ ಕೇವಲ 9 ತಿಂಗಳ ಆಡಳಿತದಲ್ಲಷ್ಟೇ ಅಲ್ಲದೆ, ಕಾಂಗ್ರೆಸ್‌ ಅಧಿಕಾರದಲ್ಲಿದ್ದಾಗೆಲ್ಲಾ ಕಲಬುರಗಿ ಸೇರಿದಂತೆ ಕಲ್ಯಾಣ ನಾಡಿಗೆ ಏನೆಲ್ಲಾ ಕೊಡುಗೆ ನೀಡಿದೆ ಎಂಬುದರ ಕುರಿತು ಮಾಹಿತಿ ಕಲೆಹಾಕಿ ಬಿಜೆಪಿ ಮುಖಂಡರಿಗೆ ಪರಿಚಯಿಸಲು ಹೊರಟಿದೆ.

ಇಂದಿಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಜಗದೇವ ಗುತ್ತೇದಾರ್‌, ಶಾಸಕರಾದ ಅಲ್ಲಂಪ್ರಭು ಪಾಟೀಲ್‌, ತಿಪ್ಮಣ್ಣ ಕಮಕನೂರ್‌ ಹಾಗೂ ಮುಖಂಡರು ಬಿಜೆಪಿಗರಿಗೆ ಕಣ್ಣಿಲ್ಲ, ಯಾಕಂದ್ರೆ ಇ‍ರಿಗೆ ಕಾಂಗ್ರೆಸ್‌ ಪಕ್ಷದ ಜನಪರ ಕೆಲಸಗಳೇ ಕಣುತ್ತಿಲ್ಲ. ಪಂಚ ಗ್ಯಾರಂಟಿ ಜಾರಿಗೊಳಿಸಿರುವುದು ನಮ್ಮ ಮಹತ್ವದ ಸಾಧನೆ. ಮೂಲ ಸವಲತತಿಗಾಗಿಯೂ ಸಾಕಷ್ಟು ಕೆಲಸಗಳು ಸಾಗಿವೆ. ಇ‍ನ್ನೆಲ್ಲ ನೋಡಲಿ ಎಂದೇ ನಾವು ಪ್ರಗತಿ ರಥವನ್ನೇ ಮಾಡಿಸಿ ಅವರ ಕಚೇರಿ ಮುಂದೆ ಬೆಳಗಿನ 10 ಗಂಟೆಯಿಂದ 3 ಗಂಟೆಗಳ ಕಾಲ ನಿಲ್ಲಿಸಲಿದಿದೇವೆ, ಬಿಜೆಪಿ ಜಿಲ್ಲಾ ಕಚೇರಿ ಮುಂದೆ ಈ ಪ್ರಗತಿ ರಥ ನಿಲ್ಲಲಿದೆ, ಬಿಜೆಪಿಯವರು ಎಲ್ಲರೂ ಬಂದು ಈ ರಥದಲ್ಲಿನ ಫೋಟೋ, ವಿಷಯಗಳನ್ನ ನೋಡಿ ಅರಿಯಲಿ ಎಂದರು.

ಹಿಂದೆ ಕಲಬುರಗಿಯಲ್ಲಿ ಬಿಜೆಪಿಯ 5 ಶಾಸಕರಿದ್ದರೂ ಒಬ್ಬರಿಗೂ ಸಚಿವ ಸ್ಥಾನ ಸಿಗಲಿಲ್ಲ. 5 ವರ್ಷಗಳಲ್ಲಿ ಇಲ್ಲಿನ ರೇಲ್ವೆ ಡಿವಿಜನ್‌ ಕಚೇರಿಗೆ ಸಿಕ್ಕಿದ್ದು 1 ಸಾವರ ರುಪಾಯಿ ಮಾತ್ರ, ಇವೆ ತಾನೆ ನಿಮ್ಮ ಸಾಧನೆ? ಕಾಂಗ್ರೆಸ್‌ನದ್ದು ಸಾಧನೆಗಳ ಬೆಟ್ಟವೇ ಇದೆ. ಅದಕ್ಕೇ ನಿಮಗೆ ನೋಡಲು ಸಿದ್ಧ ಮಾಡಲಾಗಿದೆ ಎಂದು ಜಗದೇವ ಗುತ್ತೇದಾರ್‌ ಹೇಳಿದರು.

ಕಾಂಗ್ರೆಸ್‌ ಪಕ್ಷ ಆಡಳಿತಕ್ಕೆ ಬಂದು 9 ತಿಂಗಳಾಯ್ತು, ಸಾಕಷ್ಟು ಪ್ರಗತಿ ಕೆಲಸಗಲಾಗುತ್ತಿವೆ. ಎಲ್ಲದಕ್ಕೂ ಮೊದಲಿಗೆ ಪಂಚ ಗ್ಯಾರಂಟಿ ಯೋಜನೆಯಂತೆ ರಾಜ್ಯ, ಜಿಲ್ಲೆ, ಹೋಬಳಿಗಳಲ್ಲಿ ಜನ ಅನೇಕ ಸವಲತ್ತು ಪಡೆಯುತ್ತಿದ್ದಾರೆ. ಇದರಿಂದ ಸಾಮಾನ್ಯ ಜನರ ಮನೆಗಳಿಗೆ ಮಾಸಿಕ 8 ರಿಂದ 10 ಸಾವಿರ ರುಪಾಯಿ ಸೇರುತ್ತಿದೆ. ಇದು ಸಾಮಾನ್ಯ ಜನರಿಗೆ ಕಾಂಗ್ರೆಸ್‌ ಪಕ್ಷದ ಅಧಿಕಾರದಲ್ಲಿ ನೆಮ್ಮದಿ ದೊರೆತಂತೆ ಆಗಿದೆ ಎಂದರು.

ಕಳೆದ 9 ತಿಂಗಳ ಹಿಂದೆ, ಬಿಜೆಪಿ ಆಡಳಿತದಲ್ಲಿ ತಬ್ಬಲಿಯಾಗಿದ್ದ ಕಲಬುರಗಿ ಜಿಲ್ಲಾಡಳಿತ ಇದೀಗ ಚುರುಕಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್‌ ಪ್ರಿಯಾಂಕ್‌ ಖರ್ಗೆ ಅವರ ಸಮರ್ಥ ಸೂಚನೆಯೊದಿಗೆ, ನಮ್ಮ ಸಮರ್ಥ ಸಿಇಓ, ಡಿಸಿ ಸೇರಿದಂತೆ ಕ್ರಿಯಾಶೀಲ ಅಧಿಕಾರಿಗಳು ಬಂದಿದ್ದು ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಜಿಲ್ಲೆ ಸುತ್ತಾಡುತ್ತಿದ್ದಾರೆ. ಹೀಗಾಗಿ ಆಡಳಿತ ಯಂತ್ರ ಚುರುಕಾಗಿದೆ ಎಂಬುದರಲ್ಲಿ ಎರಡು ಮಾತಿಲ್ಲ.

ಇತಿಹಾಸದಲ್ಲೇ ಮೊದಲ ಬಾರಿಗೆ ಬೆಳೆ ನಷ್ಟದಿಂದ ಬಳಲುತ್ತಿರುವ 1.45 ಲಕ್ಷ ರೈತರಿಗೆ ಪರಿಹಾರ ಒದಗಿಸಲು 124 ಕೋಟಿ ರು. ಬಿಡುಗಡೆ, ರೈತರ ಖಾತೆಗೂ ಹಣ ಜಮೆಯಾಗಿದೆ, ವಾಜಪೇಯಿ ಬಡಾವಣೆಯಲ್ಲಿ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರ 10 ಕೋಟಿ ರು. ಅನುದಾನ ಇದಕ್ಕಿಡಲಾಗಿದೆ. 39 ಅಂಗನವಾಡಿಗಳಿಗೆ 18 ಲಕ್ಷ ರು., ವಿಶೇಷ ಸವಲತ್ತು ಜಿಲ್ಲೆಯಲ್ಲಿ 7,610 ಕೋಟಿ ರು. ಬಂಡವಾಳ ಹೂಡಿಕೆ 2, 060 ಕ್ಕೂ ಹೆಚ್ಚು ಉದ್ಯೋಗ ಸೃಷ್ಟಿ, ಗ್ರಾಮೀಣ ನೀರು ಪೂರೈಕೆಗೆ ಜಿಲ್ಲೆಯಲ್ಲಿ ಜಲ್‌ ಜೀವನ್‌ ಮಿಶನ್‌ ಅಡಿ 227 ಕೋಟಿ ರು. ಅನುದಾನ, ಕೆಕೆಆರ್‌ಡಿಬಿಗೆ 5 ಸಾವಿರ ಕೋಟಿ ರು. ಮೀಸಲಿಟ್ಟಿದ್ದು ಕಾಂಗ್ರೆಸ್‌ ಸರ್ಕಾರವೆಂದು ಅಂಕಿ ಸಂಖ್ಯೆ ಸಮೇತ ಮಾಹಿತಿ ನೀಡಿದರು. ಮುಖಂಡರಾದ ಸುಭಾಸ ರಾಠೋಡ, ಶಿವಾನಂದ ಪಾಟೀಲ್‌ ಮರತೂರ್‌, ಲಾಲ್‌ ಅಹ್ಮದ್‌ ಸೇಠ್‌, ಈರಣ್ಣ ಝಳಕಿ, ಹೊನಗುಂಟಿ ಇದ್ದರು.