The Kalyana Karnataka Road Transport Corporation (KKRTC) has established 24x7 helpline centers in the control rooms of its head office and all divisional offices. The Corporation's Managing Director has stated that students and the general public should contact the designated mobile numbers regarding transport facility requirements and complaints for villages within the KKRTC's jurisdiction.
ಕಲಬುರಗಿ: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದಿಂದ ಕೇಂದ್ರ ಕಚೇರಿ ಹಾಗೂ ಎಲ್ಲ ವಿಭಾಗೀಯ ಕಚೇರಿಗಳ ನಿಯಂತ್ರಣ ಕೊಠಡಿಗಳಲ್ಲಿ 24x7 ಸಹಾಯವಾಣಿ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಕ.ಕ.ರ.ಸಾ.ನಿಗಮದ ವ್ಯಾಪ್ತಿಯ ಗ್ರಾಮಗಳ ಸಾರಿಗೆ ಸೌಲಭ್ಯದ ಬೇಡಿಕೆ ಹಾಗೂ ದೂರುಗಳಿಗೆ ನಿಗದಿಪಡಿಸಿದ ಮೊಬೈಲ್ ಸಂಖ್ಯೆಗಳನ್ನು ಸಂಪರ್ಕಿಸಬೇಕು ಎಂದು ನಿಗಮದ ವ್ಯವಸ್ಥಾಪಕ ನಿರ್ದೇಶಕ ತಿಳಿಸಿದ್ದಾರೆ. ಕೇಂದ್ರ ಕಚೇರಿ ಮೊಬೈಲ್ ಸಂಖ್ಯೆ-6366423878, ಕಲಬುರಗಿ ವಿಭಾಗ-1 -6366423879, ಕಲಬುರಗಿ ವಿಭಾಗ-2 -6366423880, ಯಾದಗಿರ-6366423882, ಬೀದರ-6366423881, ರಾಯಚೂರು-6366423883, ಕೊಪ್ಪಳ-6366423884, ಬಳ್ಳಾರಿ-6366423885, ವಿಜಯನಗರ-6366423886 ಹಾಗೂ ವಿಜಯಪುರ-6366423887 ಸಂಖ್ಯೆ ಸಂಪರ್ಕಿಸಬಹುದು.
