8ರಿಂದ 30ರವರೆಗೆ ಕಲ್ಯಾಣ ಪರ್ವ ಕಾರ್ಯಕ್ರಮ, ವಿವಿಧ ಗೋಷ್ಠಿ ಆಯೋಜನೆ

| Published : Oct 10 2023, 01:00 AM IST

ಸಾರಾಂಶ

3 ದಿನದ ಕಾರ್ಯಕ್ರಮದಲ್ಲಿ ಧರ್ಮ ಚಿಂತನ, ಮಹಿಳಾ ಗೋಷ್ಠಿ, ವಿವಿಧ ಕಾರ್ಯಕ್ರಮ: ಸಿದ್ರಾಮೇಶ್ವರ ಸ್ವಾಮೀಜಿ
ಕನ್ನಡಪ್ರಭ ವಾರ್ತೆ ಬಸವಕಲ್ಯಾಣ ಅ.28, 29 ಹಾಗೂ 30ರಂದು ಮೂರು ದಿನಗಳು ಜರುಗಲಿರುವ 22ನೇ ಕಲ್ಯಾಣ ಪರ್ವ ಕಾರ್ಯಕ್ರಮ ನಿಮಿತ್ತ ಮೂರು ದಿನಗಳವರೆಗೆ ಧರ್ಮ ಚಿಂತನ ಗೋಷ್ಠಿ, ಮಹಿಳಾ ಗೋಷ್ಠಿ ಸೇರಿದಂತೆ ವಿವಿಧ ಕಾರ್ಯಕ್ರಮಗಳು ಆಯೋಜಿಸುವ ಮೂಲಕ ಅದ್ಧೂರಿ ಹಾಗೂ ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ. ಈ ಕಾರ್ಯಕ್ರಮಕ್ಕೆ ವಿವಿಧ ರಾಜ್ಯಗಳಿಂದ ಸಾವಿರಾರು ಸಂಖ್ಯೆಯಲ್ಲಿ ಬಸವ ಭಕ್ತರು ಪಾಲ್ಗೊಳ್ಳಲಿದ್ದಾರೆ ಎಂದು ಜಗದ್ಗುರು ಸಿದ್ರಾಮೇಶ್ವರ ಸ್ವಾಮೀಜಿ ತಿಳಿಸಿದರು. ಈ ಸಂಬಂಧ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಕಲ್ಯಾಣದ ನೆಲದಿಂದ ಜಗತ್ತಿಗೆ ನೀಡಿದ ವಚನ ಸಾಹಿತ್ಯ ಶ್ರೇಷ್ಠ ಸಾಹಿತ್ಯವಾಗಿದೆ. ಲಿಂ. ಡಾ. ಮಾತೆ ಮಹಾದೇವಿಯವರ ಸಂಕಲ್ಪದಂತೆ ಜಗದ್ಗುರು ಮಾತೆ ಗಂಗಾದೇವಿ ನೇತೃತ್ವದಲ್ಲಿ ಮೂರು ದಿನಗಳ ಕಾಲ ನಡೆಯಲಿರುವ 22ನೇ ಕಲ್ಯಾಣ ಪರ್ವದಲ್ಲಿ ಇದಕ್ಕೆ ರಾಷ್ಟ್ರೀಯ ಬಸವ ದಳ, ವಿವಿಧ ಬಸವ ಪರ ಸಂಘಟನೆಗಳು ಈಗಿನಿಂದಲೇ ತಯಾರಿ ನಡೆಸುವ ಮೂಲಕ ಕಾರ್ಯಕ್ರಮಕ್ಕೆ ಆಗಮಿಸುವ ಭಕ್ತರಿಗೆ ಮೂಲಭೂತ ಸೌಕರ್ಯಗಳಿಗಾಗಿ ಶ್ರಮಿಸಲಾಗುತ್ತಿದೆ ಎಂದರು. ರಾಷ್ಟ್ರೀಯ ಬಸವ ದಳದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಜೇಂದ್ರಕುಮಾರ ಗಂದಗೆ ಮಾತನಾಡಿದರು. ಇದೇ ವೇಳೆ ರಾಷ್ಟ್ರೀಯ ಬಸವ ದಳದ ಬಸವಕಲ್ಯಾಣ ತಾಲೂಕು ಅಧ್ಯಕ್ಷರಾಗಿ ನಗರಸಭೆ ಮಾಜಿ ಸದಸ್ಯ ರವೀಂದ್ರ ಕೊಳಕೂರ ಹಾಗೂ ಮಹಿಳಾ ಘಟಕದ ತಾಲೂಕು ಅಧ್ಯಕ್ಷರಾಗಿ ಜಯಶ್ರೀ ಪಾಟೀಲ್ ಅವರನ್ನು ನೇಮಕ ಮಾಡಲಾಗಿದೆ ಎಂದು ಬೀದರ್‌ ಜಿಲ್ಲಾಧ್ಯಕ್ಷ ಸೋಮಶೇಖರ ಪಾಟೀಲ್ ಗಾದಗಿ ತಿಳಿಸಿದರು. ಬಸವಪ್ರಕಾಶ ಸ್ವಾಮೀ, ಅಮಿನೇಷಾನಂದ ಸ್ವಾಮೀ, ಬಿಡಿಪಿಸಿ ಅಧ್ಯಕ್ಷ ಬಸವರಾಜ ಕೋರಣೆ ಮಾತನಾಡಿದರು. ಜ್ಞಾನೇಶ್ವರ ಮಾತಾ, ತೆಲಂಗಣಾ ರಾಷ್ಟ್ರೀಯ ಬಸವ ದಳದ ರಾಜ್ಯಾಧ್ಯಕ್ಷ ಶಂಕರೆಪ್ಪ ಪಾಟೀಲ್, ಆರ್.ಜಿ ಶೆಟಗಾರ, ಮಲ್ಲಯ್ಯ ಸ್ವಾಮಿ, ಸುಭಾಷ ಹೊಳಕುಂದ, ಜಗನಾಥ ಖೂಬಾ, ರೇವಣಪ್ಪಾ ರಾಯವಾಡೆ, ಕಾಶೆಪ್ಪಾ ಸಕ್ಕರಭಾವೆ, ಶ್ರೀಕಂತ ಬಡದಾಳೆ ಸೇರಿದಂತೆ ಮತ್ತಿತರಿದ್ದರು. ಇದೇ ಸಂದರ್ಭದಲ್ಲಿ ಬಸವ ಮಹಾಮನೆಯ ಪರಿಸರದಲ್ಲಿ ಅ.28, 29 ಹಾಗೂ 30ರಂದು ಮೂರು ದಿನಗಳು ಜರುಗಲಿರುವ 22ನೇ ಕಲ್ಯಾಣ ಪರ್ವ ಕಾರ್ಯಕ್ರಮದ ಪ್ರಚಾರ ರಥಕ್ಕೆ ಶಾಸಕ ಶರಣು ಸಲಗರ ಚಾಲನೆ ನೀಡಿದರು.