ಹುಬ್ಬಳ್ಳಿ:
ಬ್ಯಾಟರ್ ರೋಹನ್ ಪಾಟೀಲ (62), ಪ್ರವೀಣ ದುಬೆ (39*) ಆಕರ್ಷಕ ಬ್ಯಾಟಿಂಗ್ ನೆರವಿನೊಂದಿಗೆ ಶಿವಮೊಗ್ಗ ಯೋಧಾಸ್ ತಂಡವನ್ನು ಮಣಿಸುವ ಮೂಲಕ ಕಲ್ಯಾಣಿ ಬೆಂಗಳೂರು ಬ್ಲಾಸ್ಟರ್ಸ್ ತಂಡವು ಪಾಯಿಂಟ್ ಪಟ್ಟಿಯಲ್ಲಿ ತನ್ನ ಅಗ್ರಸ್ಥಾನವನ್ನು ಭದ್ರಪಡಿಸಿಕೊಂಡಿತು.ಇಲ್ಲಿನ ರಾಜನಗರದ ಕೆಎಸ್‌ಸಿಎ ಮೈದಾನದಲ್ಲಿ ಶನಿವಾರ ನಡೆದ ಮಹಾರಾಜ ಟ್ರೋಫಿ ಟಿ-20 ಟೂರ್ನಿಯ ಪಂದ್ಯದಲ್ಲಿ ಬ್ಲಾಸ್ಟರ್ಸ್ 7 ವಿಕೆಟ್‌ಗಳ ಭರ್ಜರಿ ಜಯ ದಾಖಲಿಸಿತು. ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಶಿವಮೊಗ್ಗ ಯೋಧಾಸ್ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 173 ರನ್ ಗಳಿಸಿತು. ಗುರಿ ಬೆನ್ನಟ್ಟಿದ ಕೆಬಿಬಿ ತಂಡ, 16 ಓವರ್‌ಗೆ 3 ವಿಕೆಟ್ ನಷ್ಟಕ್ಕೆ 177 ರನ್ ದಾಖಲಿಸಿ ಗೆಲುವಿನ ನಗೆ ಬೀರಿತು.
ಶಿವಮೊಗ್ಗದ ತಂಡದ ಆರಂಭಿಕ ಬ್ಯಾಟರ್ ಲವನೀತ್ ಸಿಸೋಡಿಯಾ(51) ಅವರ ಅರ್ಧಶತಕದ ನೆರವಿನಿಂದ ಸ್ಪರ್ಧಾತ್ಮಕ ಮೊತ್ತ ಕಲೆಹಾಕಿತ್ತು. ಪ್ರವೀಣ ದುಬೆ ಬೌಲಿಂಗ್‌ನಲ್ಲಿ ಬೌಂಡರಿಯಲ್ಲಿ ಶ್ರೀವತ್ಸಗೆ ಕ್ಯಾಚ್ ನೀಡಿ ಔಟಾದರು. ನಂತರದಲ್ಲಿ ಬಂದ ಅನೀಶ ಕೆ.ವಿ. (29), ಆರ್. ಸ್ಮರಣ (36*)ರಂತ ಬ್ಯಾಟರ್‌ಗಳಿಂದ ನಿರೀಕ್ಷಿತ ರನ್ ಹೊಮ್ಮಲಿಲ್ಲ. ಇದರಿಂದ ವಿಕೆಟ್ ಕಾಯ್ದುಕೊಂಡಿದ್ದರೂ, ನಿರೀಕ್ಷಿತ ಮೊತ್ತ ಕಲೆ ಹಾಕುವಲ್ಲಿ ಶಿವಮೊಗ್ಗ ತಂಡ ವಿಫಲಗೊಂಡಿತ್ತು. ಈ ಮಧ್ಯೆ ರೋಹನ ರಾಜು 4 ವಿಕೆಟ್ ಪಡೆದು ಮಿಂಚಿದರು.ಗುರಿ ಬೆನ್ನತ್ತಿದ ಬೆಂಗಳೂರಿನ ಆರಂಭಿಕರಾದ ರೋಹನ್ ಪಾಟೀಲ 2 ಸಿಕ್ಸರ್, 5 ಬೌಂಡರಿ ನೆರವಿನೊಂದಿಗೆ ಅರ್ಧಶತಕ ದಾಖಲಿಸಿ ಅತ್ತುತ್ತಮ ಇನ್ನಿಂಗ್ಸ್ ಕಟ್ಟಿ ಗೆಲುವಿನ ದಾರಿ ಸುಗಮಗೊಳಿಸಿದರು. ರೋಹನ್ ಪಾಟೀಲ ರಿವರ್ಸ್ ಸ್ವೀಪ್ ಪ್ರಯತ್ನದಲ್ಲಿ ಎಲ್‌ಬಿಡಬ್ಲ್ಯು ಆದರು. ಕೊನೆಯಲ್ಲಿ ಪ್ರವೀಣ ದುಬೆ 3 ಸಿಕ್ಸರ್, 3 ಬೌಂಡರಿ (39*) ಹಾಗೂ ನಾಯಕ ಶುಭಾಂಗ ಹೆಗಡೆ (11*) ಅತ್ಯುತ್ ಬ್ಯಾಟಿಂಗ್ ಪ್ರದರ್ಶನದೊಂದಿಗೆ ಒಂದು ಓವರ್ ಬಾಕಿ ಇರುವಾಗಲೇ 7 ವಿಕೆಟ್‌ಗಳ ಗೆಲುವು ದಾಖಲಿಸಿತು.(ಪಂದ್ಯ ಶ್ರೇಷ್ಠ- ರೋಹನ ಪಾಟೀಲ)ಸಂಕ್ಷಿಪ್ತ ಸ್ಕೋರ್:
ಶಿವಮೊಗ್ಗ: 20 ಓವರ್‌ಗಳಲ್ಲಿ 173/6
ಲವನೀತ್ ಸಿಸೋಡಿಯಾ 51, ಸ್ಮರಣ ಆರ್.(36*) ಅನೀಶ ಕೆ.ವಿ.(29)
ಬೌಲಿಂಗ್: ರೋಹನ್ ರಾಜು 3/21ಕೆಬಿಬಿ: 19 ಓವರ್‌ಗಳಲ್ಲಿ 177/3
ರೋಹನ್ ಪಾಟೀಲ 62, ಪ್ರವೀಣ ದುಬೆ 39*, ರೋಹನ್ ರಾಜು 29,ಬೌಲಿಂಗ್: ನವೀನ ಎಂ.ಜಿ, ಯಶವರ್ಧನ, ಶಿರೀಷ್ ತಲಾ 1 ವಿಕೆಟ್.