ಸಾರಾಂಶ
ಸಾಹಿತಿ ಕಮಲಾ ಹಂಪನಾ ಅವರು ಯಾವುದೇ ಒಂದು ಜಾತಿ, ಧರ್ಮಕ್ಕೆ ಸೇರಿದವರಾಗಿರಲಿಲ್ಲ, ಅವರು ಎಲ್ಲರನ್ನು ಒಳಗೊಳ್ಳುವವರಾಗಿದ್ದರು ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್.ಎನ್. ಮುಕುಂದರಾಜ್ ಹೇಳಿದರು.
ಬೆಂಗಳೂರು : ಸಾಹಿತಿ ಕಮಲಾ ಹಂಪನಾ ಅವರು ಯಾವುದೇ ಒಂದು ಜಾತಿ, ಧರ್ಮಕ್ಕೆ ಸೇರಿದವರಾಗಿರಲಿಲ್ಲ, ಅವರು ಎಲ್ಲರನ್ನು ಒಳಗೊಳ್ಳುವವರಾಗಿದ್ದರು ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್.ಎನ್. ಮುಕುಂದರಾಜ್ ಹೇಳಿದರು.
ಗುರುವಾರ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಸಾಹಿತಿ ಡಾ. ಕಮಲಾ ಹಂಪನಾ, ಡಾ.ಖಲೀಲ್ ಉರ್ ರೆಹಮಾನ್ ಮತ್ತು ಲಕ್ಕೂರು ಆನಂದ ಅವರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಆಯೋಜಿಸಿದ್ದ ‘ನುಡಿ ನಮನ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹಿಂದುಳಿದ ವರ್ಗದವರು ತಮಗೆ ದೊರೆತ ಅವಕಾಶಗಳಿಂದ ವಂಚಿತರಾಗುತ್ತಾರಲ್ಲ ಎನ್ನುವ ನೋವು ಕಮಲಾ ಅವರಿಗೆ ಕಾಡುತ್ತಿತ್ತು ಎಂದರು.
ಸಾಹಿತಿ ಬಿ.ಟಿ.ಲಲಿತಾ ನಾಯಕ್ ಮಾತನಾಡಿ, ಮುಸ್ಲಿಂ ಸಾಹಿತಿಗಳು ಉರ್ದು ಸಾಹಿತ್ಯವನ್ನು ಕನ್ನಡಕ್ಕೆ ಅನುವಾದಿಸುವ ಮೂಲಕ ಅನೇಕ ಕೊಡುಗೆಗಳನ್ನು ನೀಡಿದ್ದಾರೆ. ಡಾ.ಖಲೀಲ್ ಉರ್ ರೆಹಮಾನ್ ಅವರು ಇಂತಹ ಅನೇಕ ಕೆಲಸವನ್ನು ಮಾಡಿದ್ದಾರೆ ಎಂದು ಸ್ಮರಿಸಿದರು. ಪತ್ರಕರ್ತ ಜಿ.ಎನ್.ಮೋಹನ್, ಮೊಹಮ್ಮದ್ ಆಜಂ ಶಾಹೀದ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.