ಕಂಬಿಬಾಣೆ: ನೂತನ ಸ್ವಚ್ಛ ಸಂಕೀರ್ಣ ಘಟಕ ಉದ್ಘಾಟನೆ

| Published : Jul 12 2024, 01:32 AM IST

ಸಾರಾಂಶ

ಕಂಬಿಬಾಣೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನೂತನವಾಗಿ ರು.9.50 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗಿರುವ ಸ್ವಚ್ಚ ಸಂಕೀರ್ಣ ಘಟಕವನ್ನು ಮಡಿಕೇರಿ ಶಾಸಕ ಡಾ.ಮಂತರ್‌ಗೌಡ ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ

ಕಂಬಿಬಾಣೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನೂತನವಾಗಿ ರು.9.50 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗಿರುವ ಸ್ವಚ್ಚ ಸಂಕೀರ್ಣ ಘಟಕವನ್ನು ಮಡಿಕೇರಿ ಶಾಸಕ ಡಾ.ಮಂತರ್‌ಗೌಡ ಉದ್ಘಾಟಿಸಿದರು.

ಕಂಬಿಬಾಣೆಯಲ್ಲಿ ವ್ಯಾಪ್ತಿಯಲ್ಲಿ ತೋಟಗಳಲ್ಲಿ ಬೀಡುಬಿಡುತ್ತಿದ್ದ ಕಾಡಾನೆಗಳು ಬೆಳಗ್ಗಿನ ಜಾವ 4 ಗಂಟೆಯ ವೇಳೆ ಜನವಸತಿ ಪ್ರದೇಶದಲ್ಲಿಯೇ ರಸ್ತೆಯಲ್ಲಿ ಸಂಚರಿಸುತ್ತಿರುವುದು ಗ್ರಾಮದ ಜನರಲ್ಲಿ ಆತಂಕ ಮೂಡಿಸಿದೆ. ಮುಂದಿನ ದಿನಗಳಲ್ಲಿ ಕಾಡಾನೆಗಳಿಂದ ಜೀವ ಅಪಾಯಗಳು ಸಂಭವಿಸುವ ಮುನ್ನ ಕಾಡಾನೆಗಳನ್ನು ಕಾಡಿಗೆ ಅಟ್ಟುವ ಮೂಲಕ ಕಾಡಾನೆಗಳ ನಿಯಂತ್ರಿಸಬೇಕು. ರೈಲ್ವೇ ಬ್ಯಾರಿಕೇಡ್‌ ಕಾಮಗಾರಿ ಅಳವಡಿಕೆ ಕಾಮಗಾರಿ ಆರಂಭಿಸುವ ಮೂಲಕ ಕಾಡಾನೆಗಳ ಹಾವಳಿ ತಡೆಗಟ್ಟುವಂತೆ ಶಾಸಕರ ಬಳಿ ಗ್ರಾಮ ಪಂಚಾಯಿತಿ ಸದಸ್ಯರು ನೋವು ತೊಡಿಕೊಂಡರು.

ಗ್ರಾಮದ ರಸ್ತೆಗಳ ಅಭಿವೃದ್ಧಿಗಾಗಿ ಈಗಾಗಲೇ ಸರ್ಕಾರದಿಂದ ಅಂದಾಜು 51 ಲಕ್ಷ ರು. ವೆಚ್ಚದ ಕಾಮಗಾರಿ ನಿರ್ವಹಿಸಲು ಅನುದಾನ ಬಿಡುಗಡೆಗೊಂಡಿದೆ. ಅತ್ತೂರು ನಲ್ಲೂರು ಸರ್ಕಾರಿ ಪ್ರಾಥಮಿಕ ಶಾಲೆಯ ಮೇಲ್ಛಾವಣಿ ದುರಸ್ತಿಗಾಗಿ ರು. 1.80 ಲಕ್ಷ ಮೊತ್ತ ಬಿಡುಗಡೆಗೊಂಡಿದೆ ಎಂದು ಜಿಲ್ಲಾ ಪಂಚಾಯತ್ ರಾಜ್ ಅಭಿಯಂತರ ಫಯಾಜ್ ಆಹ್ಮದ್ ತಿಳಿಸಿದರು.

ಮುಂದಿನ ದಿನಗಳಲ್ಲಿ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದು ಶಾಸಕ ಮಂತರ್‌ಗೌಡ ತಿಳಿಸಿದರು.

ತಾ.ಪಂ.ನಿರ್ವಾಹಣಾಧಿಕಾರಿ ವೀರಣ್ಣ , ಅಧ್ಯಕ್ಷೆ ರಾಧ, ಉಪಾಧ್ಯಕ್ಷ ಶಂಕರ, ಸದಸ್ಯರಾದ ಆರ್.ಆರ್.ಮೋಹನ, ಕೆ.ಬಿ.ಕೃಷ್ಣ, ಆಶ್ವಿನಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕೆ.ಎಲ್.ಮಧುಮತಿ, ಗ್ರಾ.ಪಂ.ಮಾಜಿ ಅಧ್ಯಕ್ಷ ಚಂದ್ರಹಾಸ ರೈ, ಮಾಜಿ ಸದಸ್ಯರಾದ ಎ.ಪಿ.ಹ್ಯಾರಿ, ಸಿಬಿ.ಚಂಗಪ್ಪ, ಶಾಲಾಭಿವೃದ್ಧಿ ಸಮಿತಿ ಗೌರವಾಧ್ಯಕ್ಷ ಮುಸ್ತಾಫ, 7ನೇ ಹೊಸಕೋಟೆ ಗ್ರಾ.ಪಂ. ಸದಸ್ಯ ಮುಸ್ತಾಫ, ಮಾಜಿ ಸದಸ್ಯ ಅವಲಕುಟ್ಟಿ, ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಪಿ.ಶಶಿಧರ್, ಸುಂಟಿಕೊಪ್ಪ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕೆ.ಎಸ್.ಮಂಜುನಾಥ್ ಮತ್ತಿತರರಿದ್ದರು.