ಸಾರಾಂಶ
ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿದ್ಯಾಲಯ ೨೦೨೪ನೇ ಸಾಲಿನಲ್ಲಿ ಆಯೋಜಿಸಿದ ಅಂತಿಮ ಎಂ.ಬಿ.ಬಿ.ಎಸ್ (ಜನರಲ್ ಮೆಡಿಸಿನ್) ಪದವಿ ಪರೀಕ್ಷೆಯಲ್ಲಿ ನಾಟೆಕಲ್ ಪ್ರದೇಶದಲ್ಲಿ ಕಾರ್ಯಾಚರಿಸುತ್ತಿರುವ ಕಣಚೂರು ವೈದ್ಯಕೀಯ ಶಿಕ್ಷಣ ಕಾಲೇಜಿನ ವೈದ್ಯಕೀಯ ಶಿಕ್ಷಣ ವಿದ್ಯಾರ್ಥಿಗಳು ೧೨ ಪದವಿ ರ್‍ಯಾಂಕ್‌ಗಳನ್ನು ಪಡೆದಿದ್ದಾರೆ.
ಕನ್ನಡಪ್ರಭ ವಾರ್ತೆ ಮಂಗಳೂರು
ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿದ್ಯಾಲಯ ೨೦೨೪ನೇ ಸಾಲಿನಲ್ಲಿ ಆಯೋಜಿಸಿದ ಅಂತಿಮ ಎಂ.ಬಿ.ಬಿ.ಎಸ್ (ಜನರಲ್ ಮೆಡಿಸಿನ್) ಪದವಿ ಪರೀಕ್ಷೆಯಲ್ಲಿ ನಾಟೆಕಲ್ ಪ್ರದೇಶದಲ್ಲಿ ಕಾರ್ಯಾಚರಿಸುತ್ತಿರುವ ಕಣಚೂರು ವೈದ್ಯಕೀಯ ಶಿಕ್ಷಣ ಕಾಲೇಜಿನ ವೈದ್ಯಕೀಯ ಶಿಕ್ಷಣ ವಿದ್ಯಾರ್ಥಿಗಳು ೧೨ ಪದವಿ ರ್‍ಯಾಂಕ್‌ಗಳನ್ನು ಪಡೆದಿದ್ದಾರೆ.ಅಲಿಮತ್ ಶಿರಿನಾ ಕೆ.ಪಿ (೩ನೇ ರ್‍ಯಾಂಕ್) ಪ್ರಮೋದ್ ಕೆ.ಆರ್ (೩ನೇ ರ್‍ಯಾಂಕ್) ದೇವಂಶು ನಾಗ್ಡ (೪ನೇ ರ್‍ಯಾಂಕ್), ರೀಟಾ ಗ್ಲೋರಿ ಕೆ.ವಿ (೫ನೇ ರ್‍ಯಾಂಕ್) ನಜೀಬ್ ಯುರ್ ರೆಹಮಾನ್ ಖಾನ್ (೬ನೇ ರ್‍ಯಾಂಕ್), ಸುಮೈ ಶಹಿದ ಮಸೂದ್ (೬ನೇ ರ್‍ಯಾಂಕ್), ಆಸಿಫ್ ಮಕ್ಬುಲ್ ಹುಸೈನ್ ಅಕ್ಬರ್ (೭ನೇ ರ್‍ಯಾಂಕ್), ಮೊಹಮ್ಮದ್ ಒವಿಸ್ ಕಲ್ಮನಿ (೮ನೇ ರ್‍ಯಾಂಕ್) ಶ್ರಾವ್ಯ (೮ನೇ ರ್‍ಯಾಂಕ್) ಆಯಿಶಾ ತಸ್‌ಮಿನ್ (೧೦ನೇ ರ್‍ಯಾಂಕ್) ನಸೀಮಾ ಪರ್ವಿನ್ (೧೦ನೇ ರ್‍ಯಾಂಕ್ ) ಸೃಜನ್ ರಾಜ್ ಶೆಟ್ಟಿ (೧೦ನೇ ರ್‍ಯಾಂಕ್) ಹಾಗೂ ಸ್ನಾತಕ್ಕೋತ್ತರ ಎಂ.ಡಿ (ಜನರಲ್ ಮೆಡಿಸಿನ್) ಪರೀಕ್ಷೆಯಲ್ಲಿ ೫ ವಿದ್ಯಾರ್ಥಿಗಳು ಹಾಜರಾಗಿದ್ದು ಎಲ್ಲರೂ ಉತ್ತೀರ್ಣರಾಗಿ ಶೇ. ೧೦೦ ಫಲಿತಾಂಶ ದಾಖಲಿಸಿದ್ದಾರೆ.
ಡಾ.ಮಹಮ್ಮದ್ ಬಿಲಾಲ್ ಹುಸೈನ್, ಡಾ. ಅತಿಬ್ ಅಹಮ್ಮದ್ ಕೆ.ಎ., ಡಾ. ಸ್ನೇಹಲ್ ರಾಜ್‌ಕುಮಾರ್ ಕೂಟ್, ಡಾ. ವೈ. ಪ್ರಣೀತ್ ಚರಣ್ ರೆಡ್ಡಿ, ಡಾ. ಹನುಮಂತಕಾರಿ ಪ್ರದುವಿಜಾರಣಾ ವಿದ್ಯಾರ್ಥಿಗಳು ಅಪೂರ್ವ ಶೈಕ್ಷಣಿಕ ಸಾಧನೆ ಮಾಡಿದ್ದಾರೆ.ವಿಭಾಗೀಯ ಮುಖ್ಯಸ್ಥರಾದ ಡಾ. ದೇವದಾಸ ರೈ, ಕಣಚೂರು ವೈದ್ಯಕೀಯ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಹಾಜಿ ಯು.ಕೆ. ಮೋನು, ಕಾರ್ಯನಿರ್ವಾಹಕ ನಿರ್ದೇಶಕ ಅಬ್ದುಲ್ ರಹಮಾನ್ ಅವರು ವಿದ್ಯಾರ್ಥಿಗಳ ಅಮೋಘ ಸಾಧನೆಯನ್ನು ಅಭಿನಂದಿಸಿದ್ದಾರೆ.