ಸಾಹಿತ್ಯ ಪರಂಪರೆಗೆ ಕನಕರ ಕೊಡುಗೆ ಅಪಾರ: ಕಾಳಗಿ

| Published : Nov 09 2025, 03:00 AM IST

ಸಾರಾಂಶ

ಕನಕದಾಸರು ದಾಸ ಸಾಹಿತ್ಯದ ಕಾಲಘಟ್ಟದಲ್ಲಿ ಜಾತಿ ವ್ಯವಸ್ಥೆಯ ವಿರುದ್ಧ ತಮ್ಮ ಕೀರ್ತನೆಗಳ ಮೂಲಕ ಸಮರ ಸಾರಿದ ಭಕ್ತ

ಕುಷ್ಟಗಿ: ಕನಕದಾಸರು ಕೀರ್ತನಕಾರರಾಗಿ,ತತ್ತ್ವಜ್ಞಾನಿಯಾಗಿ, ಸಂತರಾಗಿ, ದಾರ್ಶನಿಕರಾಗಿ ಕನ್ನಡ ನಾಡಿನ ಸಾಂಸ್ಕೃತಿಕ ಪರಂಪರೆಗೆ ಅನನ್ಯ ಕೊಡುಗೆ ನೀಡಿದ್ದಾರೆ ಎಂದು ಗ್ರಾಪಂ ಅದ್ಯಕ್ಷ ಮಹೇಶ ಕಾಳಗಿ ಹೇಳಿದರು.

ತಾಲೂಕಿನ ದೋಟಿಹಾಳ ಗ್ರಾಪಂನಲ್ಲಿ 538ನೇಯ ಕನಕದಾಸರ ಜಯಂತಿಯ ಅಂಗವಾಗಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದ ಅವರ, ಕನಕದಾಸರು ಜನಪ್ರಿಯವಾದ ಭಕ್ತಿ ಪಂಥದ ಮುಖ್ಯ ಹರಿದಾಸರಲ್ಲಿ ಒಬ್ಬರಾಗಿದ್ದರು. ಕನಕದಾಸರು ದಾಸ ಸಾಹಿತ್ಯದ ಕಾಲಘಟ್ಟದಲ್ಲಿ ಜಾತಿ ವ್ಯವಸ್ಥೆಯ ವಿರುದ್ಧ ತಮ್ಮ ಕೀರ್ತನೆಗಳ ಮೂಲಕ ಸಮರ ಸಾರಿದ ಭಕ್ತ ಕನಕದಾಸರು ದಾಸ ಸಾಹಿತ್ಯಕ್ಕೆ ಗಣನೀಯ ಕೊಡುಗೆ ನೀಡಿದ ಅವರು, ಕನ್ನಡ ಭಾಷೆಯ ಕೀರ್ತನೆಕಾರರಾಗಿ ಕರ್ನಾಟಕ ಸಂಗೀತಕ್ಕೆ ಅಪಾರ ಕೊಡುಗೆ ನೀಡಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಗ್ರಾಪಂ ಸದಸ್ಯ ಶಿವನಗೌಡ ಪಾಟೀಲ, ಗೌಸುಸಾಬ್‌ ಕೊಣ್ಣೂರು, ರುಕುಮುದ್ದೀನಸಾಬ್‌ ನೀಲಗಾರ ಸೇರಿದಂತೆ ಗ್ರಾಮಸ್ಥರು, ಹಾಲುಮತ ಸಮಾಜದ ಯುವಕರು ಗ್ರಾಪಂ ಸಿಬ್ಬಂದಿಗಳು ಇದ್ದರು.