ಸಾರಾಂಶ
ದಾಸ ಶ್ರೇಷ್ಠ ಕನಕದಾಸರು ಸಮಾಜದಲ್ಲಿನ ಮೂಢನಂಬಿಕೆ, ಜಾತಿ ಪದ್ಧತಿ ಸೇರಿದಂತೆ ಅನಿಷ್ಟ ಪದ್ಧತಿಗಳ ವಿರುದ್ದ ಧ್ವನಿ ಎತ್ತಿ, ಸಮಾಜದ ಅಂಕು-ಡೊಂಕುಗಳನ್ನು ತಿದ್ದಿದ ಮಹಾನ್ ದಾರ್ಶನಿಕರು ಎಂದು ಕನಕದಾಸ ಭಕ್ತ ಮಂಡಳಿ ಅಧ್ಯಕ್ಷ ತಿಪ್ಪಣ್ಣ ಹೇಳಿದರು.
ಕನ್ನಡಪ್ರಭ ವಾರ್ತೆ ಸೊರಬ
ದಾಸ ಶ್ರೇಷ್ಠ ಕನಕದಾಸರು ಸಮಾಜದಲ್ಲಿನ ಮೂಢನಂಬಿಕೆ, ಜಾತಿ ಪದ್ಧತಿ ಸೇರಿದಂತೆ ಅನಿಷ್ಟ ಪದ್ಧತಿಗಳ ವಿರುದ್ದ ಧ್ವನಿ ಎತ್ತಿ, ಸಮಾಜದ ಅಂಕು-ಡೊಂಕುಗಳನ್ನು ತಿದ್ದಿದ ಮಹಾನ್ ದಾರ್ಶನಿಕರು ಎಂದು ಕನಕದಾಸ ಭಕ್ತ ಮಂಡಳಿ ಅಧ್ಯಕ್ಷ ತಿಪ್ಪಣ್ಣ ಹೇಳಿದರು.ಶನಿವಾರ ಪಟ್ಟಣದ ದಂಡಾವತಿ ಬ್ಲಾಕ್‌ನಲ್ಲಿ ನಡೆದ ಕನಕದಾಸ ಜಯಂತಿ ಅಂಗವಾಗಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.
ಕನಕದಾಸರು ಒಂದು ವರ್ಗಕ್ಕೆ ಸೀಮಿತವಾಗಿಲ್ಲ. ಅವರು ಕಾವ್ಯ ಹಾಗೂ ಕೀರ್ತನೆಗಳ ಮೂಲಕ ಸಮಾಜದಲ್ಲಿ ಬೇರೂರಿದ್ದ ಕಂದಾಚಾರಗಳನ್ನು ಹೋಗಲಾಡಿಸಲು ಶ್ರಮಿಸಿ ಸಾಹಿತ್ಯಕ್ಕೆ ತನ್ನದೇ ಆದ ಕೊಡುಗೆ ನೀಡಿ, ಎಲ್ಲರನ್ನು ಸಮಾನತೆ ದೃಷ್ಟಿಕೋನದಿಂದ ನೋಡುವಂತೆ ತಿಳಿಸಿ ವಿಶ್ವಮಾನವರಾದರು. ಅವರ ಭಕ್ತಿ ಜ್ಞಾನದಿಂದ ಜಾತಿ ವ್ಯವಸ್ಥೆ ವಿರುದ್ಧವಾಗಿ ಧ್ವನಿ ಎತ್ತಿ ದಾಸ ಶ್ರೇಷ್ಠರಾಗಿದ್ದಾರೆ. ಅವರು ಮೂಲ ಹೆಸರು ತಿಮ್ಮಪ್ಪ ನಾಯ್ಕ, ಅವರು ಭಕ್ತಿ ಮಾರ್ಗವನ್ನು ಆಯ್ಕೆ ಮಾಡಿಕೊಂಡು ಕನಕದಾಸ ಎಂಬ ಹೆಸರನ್ನು ಪಡೆದರು. ಅವರು ಜನರ ನಡುವೆ ಸಮಾನತೆ, ವಿನಯ, ಸತ್ಯ, ಅಹಿಂಸೆ ಎಂಬ ಮೌಲ್ಯಗಳನ್ನು ಸಾರಿದರು ಎಂದರು.ಶಿಕ್ಷಕ ವಿನಯಕುಮಾರ್ ಹೊನ್ನಾಳಿ ಮಾತನಾಡಿ, ಕನಕದಾಸರು ಕನ್ನಡ ಸಾಹಿತ್ಯಕ್ಕೆ ಬಹುದೊಡ್ಡ ಕೊಡುಗೆಗಳನ್ನು ನೀಡಿದ್ದಾರೆ. ಅವರ ದೃಢವಾದ ಭಕ್ತಿಗೆ ಉಡುಪಿಯ ಶ್ರೀ ಕೃಷ್ಣನೇ ತನ್ನ ಸ್ಥಾನವನ್ನು ಬದಲಿಸಿದ ಎಂದು ಹೇಳಲಾಗುತ್ತದೆ. ಜೊತೆಗೆ ಅದನ್ನು ಕನಕನ ಕಿಂಡಿ ಎಂದು ಕರೆಯಲಾಗುತ್ತದೆ. ಅವರು ತಮ್ಮ ಜೀವಿತಾವಧಿಯಲ್ಲಿ ಅನೇಕ ದೇಗುಲಗಳನ್ನು ಸಂದರ್ಶಿಸಿದ್ದಾರೆ. ಅವರು ಪಾದಸ್ಪರ್ಶ ಮಾಡಿದ ದೇಗುಲಗಳು ಪವಾಡಕ್ಕೆ ಸಾಕ್ಷಿಯಾಗಿವೆ ಎಂದರು.
ಈ ಸಂದರ್ಭದಲ್ಲಿ ಸಾರ್ವಜನಿಕ ಹಿತರಕ್ಷಣಾ ಹೋರಾಟ ಸಮಿತಿ ಉಪಾಧ್ಯಕ್ಷ ದತ್ತಾ ಸೊರಬ, ಬಾಲಕೃಷ್ಣ ಸಿದ್ದಾಪುರ, ಯಶವಂತ ಸಿದ್ದಾಪುರ, ಈಶ್ವರ ಸಮನವಳ್ಳಿ, ವೈಷ್ಣವಿ, ಅಲಿನಾ ಸೇರಿದಂತೆ ಇತರರಿದ್ದರು.;Resize=(128,128))
;Resize=(128,128))
;Resize=(128,128))
;Resize=(128,128))