ಸಾರಾಂಶ
ಚನ್ನಪಟ್ಟಣ: ಶತಮಾನಗಳ ಹಿಂದೆಯೇ ಸಮಾಜದಲ್ಲಿ ಬೇರೂರಿದ್ದ ಅಸಮಾನತೆ, ಸಾಮಾಜಿಕ ಸುಧಾರಣೆಗಾಗಿ ಕನಕದಾಸರು ಶ್ರಮಸಿದ್ದರು ಎಂದು ತಾಲೂಕು ದಂಡಾಧಿಕಾರಿ ನರಸಿಂಹಮೂರ್ತಿ ತಿಳಿಸಿದರು.
ಚನ್ನಪಟ್ಟಣ: ಶತಮಾನಗಳ ಹಿಂದೆಯೇ ಸಮಾಜದಲ್ಲಿ ಬೇರೂರಿದ್ದ ಅಸಮಾನತೆ, ಸಾಮಾಜಿಕ ಸುಧಾರಣೆಗಾಗಿ ಕನಕದಾಸರು ಶ್ರಮಸಿದ್ದರು ಎಂದು ತಾಲೂಕು ದಂಡಾಧಿಕಾರಿ ನರಸಿಂಹಮೂರ್ತಿ ತಿಳಿಸಿದರು.
ನಗರದ ತಾಲೂಕು ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಕನಕದಾಸರ ಜಯಂತಿ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಅವರು, ಕನಕದಾಸರು ತಮ್ಮ ಕೀರ್ತನೆಗಳ ಮೂಲಕ ಸಮಾಜದಲ್ಲಿ ಬೇರೂರಿದ್ದ ಜಾತಿ ಎಂಬ ಪೆಡಂಭೂತವನ್ನು ಹೋಗಲಾಡಿಸಲು ಶ್ರಮಿಸಿದರು. ಅವರು ರಚಿಸಿದ ಕೃತಿಗಳು ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಕೆಲಸ ಮಾಡಿತ್ತು. ದಾಸ ಶ್ರೇಷ್ಠರೆನಿಸಿದ ಅವರ ನೆನಪು ಅಜರಾಮರ ಎಂದು ತಿಳಿಸಿದರು.ನಗರಸಭೆ ಆಯುಕ್ತ ಮಹೇಂದ್ರ ಮಾತನಾಡಿ, ಕುಲಕುಲವೆಂದು ಬಡಿದಾಡದಿರಿ ಎಂದು ಶತಮಾನಗಳ ಹಿಂದೆಯೇ ಸಮಾಜಕ್ಕೆ ಸ್ವಷ್ಟ ಸಂದೇಶ ನೀಡಿದ ಕನಕದಾಸರು ತಮ್ಮ ಜೀವಿತಾವಧಿಯಲ್ಲಿ ಸಮಾಜದ ಬದಲಾವಣೆಗೆ ಶ್ರಮಿಸಿದರು. ಅವರು ಜನರಲ್ಲಿದ್ದ ಮೌಢ್ಯವನ್ನು ಅಳಿಸಲು ಶ್ರಮಿಸಿದ್ದರು. ಜಾತಿ ರಹಿತ ಸಮಾಜದ ಕನಸು ಕಂಡಿದ್ದರು ಎಂದು ಸ್ಮರಿಸಿದರು.
ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ರಾಮಲಿಂಗಯ್ಯ, ಉಪ ತಹಸೀಲ್ದಾರ್ ಲಕ್ಷ್ಮೀದೇವಮ್ಮ, ಶಿರಸ್ತೇದಾರ ಸೋಮಶೇಖರ್, ಅಕ್ಷರದಾಸೋಹ ನಿರ್ದೇಶಕ ಸಿದ್ದರಾಜಯ್ಯ, ದಲಿತ ಮುಖಂಡ ವೆಂಕಟೇಶ್ (ಶೇಟು), ಆಹಾರ ಇಲಾಖೆಯ ಪುಷ್ಪಲತಾ, ಗಿರೀಶ್, ವೇದಮೂರ್ತಿ ಇತರರಿದ್ದರು.ಪೊಟೋ೧೮ಸಿಪಿಟಿ೧:
ಚನ್ನಪಟ್ಟಣ ತಾಲೂಕು ಕಚೇರಿಯಲ್ಲಿ ಕನಕ ಜಯಂತಿ ಆಚರಿಸಲಾಯಿತು.