ಹೊನ್ನಾಳಿ ಮತ್ತು ನ್ಯಾಮತಿ ಅವಳಿ ತಾಲೂಕುಗಳ ಕರ್ನಾಟಕ ಪ್ರದೇಶ ಕುರುಬ ಸಂಘಗಳ ವತಿಯಿಂದ ಡಿ.17ರಂದು ದಾಸಶ್ರೇಷ್ಠ ಕನಕದಾಸರ 538ನೇ ಅದ್ಧೂರಿ ಜಯಂತ್ಯುತ್ಸವ, ಮೆರವಣಿಗೆ, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ ಎಂದು ಕುರುಬ ಸಮಾಜ ಮುಖಂಡ ಹಾಗೂ ಬಯಲುಸೀಮೆ ಪ್ರದೇಶ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಚ್.ಬಿ. ಮಂಜಪ್ಪ ಹೇಳಿದ್ದಾರೆ.

- ಹೊನ್ನಾಳಿ ಖಾಸಗಿ ಬಸ್ ನಿಲ್ದಾಣದಲ್ಲಿ ಅದ್ಧೂರಿ ಕಾರ್ಯಕ್ರಮಗಳಿಗೆ ವೇದಿಕೆ ಸಿದ್ಧತೆ

- - -

ಕನ್ನಡಪ್ರಭ ವಾರ್ತೆ ಹೊನ್ನಾಳಿ

ಹೊನ್ನಾಳಿ ಮತ್ತು ನ್ಯಾಮತಿ ಅವಳಿ ತಾಲೂಕುಗಳ ಕರ್ನಾಟಕ ಪ್ರದೇಶ ಕುರುಬ ಸಂಘಗಳ ವತಿಯಿಂದ ಡಿ.17ರಂದು ದಾಸಶ್ರೇಷ್ಠ ಕನಕದಾಸರ 538ನೇ ಅದ್ಧೂರಿ ಜಯಂತ್ಯುತ್ಸವ, ಮೆರವಣಿಗೆ, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ ಎಂದು ಕುರುಬ ಸಮಾಜ ಮುಖಂಡ ಹಾಗೂ ಬಯಲುಸೀಮೆ ಪ್ರದೇಶ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಚ್.ಬಿ. ಮಂಜಪ್ಪ ಹೇಳಿದರು.

ಪಟ್ಟಣದ ಖಾಸಗಿ ಬಸ್ ನಿಲ್ದಾಣದಲ್ಲಿ ನಡೆಯಲಿರುವ ಕಾರ್ಯಕ್ರಮದ ಪೂರ್ವಸಿದ್ದತೆಗಳನ್ನು ಮಂಗಳವಾರ ಅವಳಿ ತಾಲೂಕುಗಳ ಕುರುಬ ಸಂಘಗಳ ಅಧ್ಯಕ್ಷರು, ಪದಾಧಿಕಾರಿಗಳೊಂದಿಗೆ ಪರಿಶೀಲನೆ ನಡೆಸಿ ನಂತರ ಅವರು ಪತ್ರಿಕಾಗೋಷ್ಠಿಯಲ್ಲಿ ಕಾರ್ಯಕ್ರಮ ಕುರಿತು ಮಾಹಿತಿ ನೀಡಿದರು.

ಕನಕ ಜಯಂತಿ ನಿಮಿತ್ತ ಬುಧವಾರ ಬೆಳಗ್ಗೆ ಕನಕ ಗುರುಪೀಠದ ಜಗದ್ಗುರು ಶ್ರೀ ಡಾ.ನಿರಂಜನಾನಂದ ಪುರಿ ಮಹಾಸ್ವಾಮಿಜಿ ಮತ್ತು ಹೊಸದುರ್ಗ ಶಾಖಾ ಮಠದ ಈಶ್ವರಾನಂದಪುರಿ ಮಹಾಸ್ವಾಮಿಜಿ ಅವರನ್ನು ತಾಲೂಕಿನ ಆರಕೆರೆ ಗ್ರಾಮದದಿಂದ ಬೈಕ್ ರ್ಯಾಲಿ ಮೂಲಕ ದೇವನಾಯ್ಕನಹಳ್ಳಿ ಕನಕದಾಸ ವೃತ್ತಕ್ಕೆ ಕರೆ ತರಲಅಗುವುದು. ಅಲ್ಲಿಂದ ಬೆಳಗ್ಗೆ 11 ಗಂಟೆಗೆ ವೃತ್ತದಲ್ಲಿರುವ ಕನಕದಾಸ ಪುತ್ಥಳಿಗೆ ಮಾಲಾರ್ಪಣೆ ಮಾಡಿ, ಸುಮಂಗಲೆಯರ 101 ಪೂರ್ಣಕುಂಭದೊಂದಿಗೆ ಡೊಳ್ಳು ವಾದ್ಯ ಸೇರಿದಂತೆ ವಿವಿಧ ಮಂಗಳ ವಾದ್ಯಗಳೊಂದಿಗೆ ಸ್ವಾಗತಿಸಿ, ಮೆರವಣೆಗೆ ಮೂಲಕ ಕಾರ್ಯಕ್ರಮ ನಡೆಯುವ ಖಾಸಗಿ ಬಸ್ ನಿಲ್ದಾಣದ ವೇದಿಕೆಗೆ ಆಗಮಿಸಲಾಗುವುದು ಎಂದರು.

ಮಧ್ಯಾಹ್ನ 1 ಗಂಟೆಗೆ ವೇದಿಕೆ ಕಾರ್ಯಕ್ರಮ ಆರಂಭಗೊಳ್ಳಲಿದೆ. ಪಾವನ ಸಾನ್ನಿಧ್ಯವನ್ನು ಜಗದ್ಗುರು ಡಾ.ನಿರಂಜನಾನಂದ ಪುರಿ ಸ್ವಾಮೀಜಿ, ಈಶ್ವರಾನಂದ ಪುರಿ ಸ್ವಾಮೀಜಿ ವಹಿಸಲಿದ್ದಾರೆ. ಉದ್ಘಾಟನೆಯನ್ನು ಮಾಜಿ ಸಚಿವ, ರಾಜ್ಯದ 5 ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್.ಎಂ. ರೇವಣ್ಣ ನೆರವೇರಿಸಲಿದ್ದಾರೆ. ಕನಕದಾಸರ ಭಾವಚಿತ್ರವನ್ನು ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅನಾವರಣಗೊಳಿಸಲಿದ್ದಾರೆ. ಕಾರ್ಯಕ್ರಮ ಅಧ್ಯಕ್ಷತೆ ಬಯಲುಸೀಮೆ ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ಎಚ್.ಬಿ. ಮಂಜಪ್ಪ ವಹಿಸಲಿದ್ದಾರೆ ಎಂದು ವಿವರಿಸಿದರು.

ಕನಕ ಉತ್ವವಕ್ಕೆ ರಾಜ್ಯ ಮಹಿಳಾ ಆಯೋಗ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಜೌಧರಿ ಚಾಲನೆ ನೀಡಲಿದ್ದಾರೆ. ವಿಶೇಷ ಆಹ್ವಾನಿತರಾಗಿ ಕ್ಷೇತ್ರದ ಶಾಸಕ ಡಿ.ಜಿ.ಶಾಂತನಗೌಡ, ತಾಲೂಕು ಕುರುಬ ಸಂಘದ ಅಧ್ಯಕ್ಷ ಎಂ.ಸಿ. ಮೋಹನ್ ನೆಲಹೊನ್ನೆ ಭಾಗವಹಿಸಲಿದ್ದಾರೆ. ಕನಕದಾಸದ ಕುರಿತು ಶಿವಮೊಗ್ಗದ ರಾಜ್ಯ ಕನಕಶ್ರಿ ಪ್ರಶಸ್ತಿ ಪುರಸ್ಕೃತ, ನಿವೃತ್ತ ಸೂಪರಿಂಟೆಂಡೆಂಟ್ ಎಂಜಿನಿಯರ್ ಡಾ.ಲಿಂಗದಹಳ್ಳಿ ಹಾಲಪ್ಪ ಉಪನ್ಯಾಸ ನೀಡಲಿದ್ದಾರೆ. ಮಾಜಿ ಎಂ.ಎಲ್.ಸಿ. ಪ್ರಸನ್ನ ಕುಮಾರ್, ಹರಿಹರ ಮಾಜಿ ಶಾಸಕ ರಾಮಪ್ಪ, ಶಿವಮೊಗ್ಗದ ಶ್ರೀಕಾಂತ್, ಕೆಪಿಸಿಸಿ ಸದಸ್ಯ ಶಿಕಾರಿಪುರದ ಗೋಣಿ ಮಾಲತೇಶ್, ಇತರ ಗಣ್ಯರು ಭಾಗವಹಿಸಲಿದ್ದಾರೆ ಎಂದರು.

ಮಧ್ಯಾಹ್ನ 2 ಗಂಟೆಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ, ಕಲರ್ಸ್‌ ಕನ್ನಡ ವಾಹಿನಿ ಸಹಯೋಗದೊಂದಿಗೆ ಖಾಸಿಂ ಇವೆಂಟ್ಸ್ ಬೆಂಗಳೂರು ಅವರಿಂದ ರಸಮಂಜರಿ ಕಾರ್ಯಕ್ರಮ, ಪ್ರೇರಣಾ ಪಬ್ಲಿಕ್ ಸ್ಕೂಲ್, ಶ್ರೀ ಕಾಗಿನೆಲೆ ಮಹಾಸಂಸ್ಥಾನ ಶೈಕ್ಷಣಿಕ ಸಂಸ್ಥೆ ಹೊನ್ನಾಳಿ, ಶ್ರೀ ಸಾಧನಾ ಪಬ್ಲಿಕ್ ಸೂಕ್ತ (ಕನಕ ಎಜ್ಯುಕೇಷನ್ ಸೊಸೈಟಿ) ಈ ಶಾಲೆಗಳ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮವಿದೆ ಎಂದು ಹೇಳಿದರು.

ಸಂಜೆ ಖಾಸಗಿ ಬಸ್ ನಿಲ್ದಾಣದಲ್ಲಿ ನಡೆಯುವ ವಿವಿಧ ಕಾರ್ಯಕ್ರಮಗಳ ಅಧ್ಯಕ್ಷತೆ ಹೊನ್ನಾಳಿ, ನ್ಯಾಮತಿ ಅವಳಿ ತಾಲೂಕುಗಳ ಕುರುಬ ಸಂಘದ ಅಧ್ಯಕ್ಷ ಎಂ.ಸಿ.ಮೋಹನ್ ವಹಿಸಲಿದ್ದಾರೆ. ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಕುರುಬ ಸಂಘದ ಕಾರ್ಯಾಧ್ಯಕ್ಷ ಧರ್ಮಪ್ಪ ಹಾಗೂ ಸಂಘದ ಪ್ರಧಾನ ಕಾರ್ಯದರ್ಶಿ ಎಂ.ಆರ್. ಮಹೇಶ್ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕುರುಬ ಸಂಘದ ಖಜಾಂಚಿ ಎಚ್.ಎ.ನರಸಿಂಹಪ್ಪ, ಗೌರವಾದ್ಯಕ್ಷ ಪ್ರಕಾಶ್ ಆರುಂಡಿ, ಉಪಾಧ್ಯಕ್ಷ ಬಿ.ಎಚ್.ವಾಗೀಶ್, ಕೆ.ಪುಟ್ಟಪ್ಪ, ಬೆನಕಪ್ಪ ಹರಳಹಳ್ಳಿ, ಸಂಚಾಲಕ ಎನ್.ಕೆ. ಆಂಜನೇಯ ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಧರ್ಮಪ್ಪ, ಎಂ.ಆರ್. ಮಹೇಶ್, ಎಚ್.ಎ. ನರಸಿಂಹಪ್ಪ, ಎಚ್.ಬಿ.ಅಣ್ಣಪ್ಪ, ರೇವಣಸಿದ್ದ ಮೂಲಿ, ರಾಜು ಸರಳಿನಮನೆ, ಮಾದಪ್ಪ, ಬೆನಕಪ್ಪ, ಪುಟ್ಟಪ್ಪ, ಮಹಳಾ ಅಧ್ಯಕ್ಷೆ ಪಂಕಜ ಅರುಣ್ ಕುಮಾರ್, ಎಂ.ಸಿ. ಮೋಹನ್, ಸಮಾಜದ ಮುಖಂಡರು ಇದ್ದರು.

- - -

-16ಎಚ್.ಎಲ್.ಐ1:

ಹೊನ್ನಾಳಿ ಪಟ್ಟಣದ ಖಾಸಗಿ ಬಸ್ ನಿಲ್ದಾಣದಲ್ಲಿ ಬುಧವಾರ ಕನಕದಾಸ ಜಯಂತಿ ಕಾರ್ಯಕ್ರಮ ಹಿನ್ನೆಲೆ ಅವಳಿ ತಾಲೂಕುಗಳ ಕುರುಬ ಸಂಘದ ಅಧ್ಯಕ್ಷರು, ಪದಾಧಿಕಾರಿಗಳೊಂದಿಗೆ ಮಂಗಳವಾರ ಎಚ್.ಬಿ.ಮಂಜಪ್ಪ ಸಿದ್ಧತಾ ಕಾರ್ಯಗಳ ಪರಿಶೀಲನೆ ನಡೆಸಿದರು.