ಸಾರಾಂಶ
- ಅಮೃತವರ್ಷಿಣಿ ವಿದ್ಯಾಲಯದಲ್ಲಿ ಕನಕ ಜಯಂತಿಯಲ್ಲಿ ಪಿ.ಕೆ.ಪ್ರಕಾಶ ರಾವ್
- - -ಹರಿಹರ: ಶ್ರೀಕೃಷ್ಣನ ಪರಮ ಭಕ್ತ ಕನಕದಾಸರು ತಮ್ಮ ಕೀರ್ತನೆಗಳ ಮೂಲಕ ಸಮಾಜದಲ್ಲಿಯ ಜಾತೀಯತೆ ಮೇಲು-ಕೀಳೆಂಬ ಭಾವನೆಗಳನ್ನು ತೊಲಗಿಸುವ ಪ್ರಯತ್ನ ಮಾಡಿದರು ಎಂದು ಅಮೃತವರ್ಷಿಣಿ ವಿದ್ಯಾಲಯದ ಸಂಸ್ಥಾಪಕ ಪಿ.ಕೆ. ಪ್ರಕಾಶ್ ರಾವ್ ಹೇಳಿದರು. ಇಲ್ಲಿಗೆ ಸಮೀಪದ ಕುಮಾರಪಟ್ಟಣಂನ ಅಮೃತವರ್ಷಿಣಿ ವಿದ್ಯಾಲಯದಲ್ಲಿ ಶನಿವಾರ ನಡೆದ ಶ್ರೀ ಕನಕದಾಸರ ೫೩೧ನೇ ವಾರ್ಷಿಕೋತ್ಸವದಲ್ಲಿ ಅವರು ಮಾತನಾಡಿದರು. ಕನಕದಾಸರು ಸಮಾಜ ಸುಧಾರಕರಾಗಿ ಸಮಾನತೆ ಸಂದೇಶಗಳನ್ನು ಸಾರಿದರು. ಕರ್ನಾಟಕದ ಭಕ್ತಿ ಚಳವಳಿಯ ಹರಿಕಾರ ಶ್ರೇಷ್ಠಸಂತ ಮತ್ತು ತತ್ವಜ್ಞಾನಿ ಎಂದರು.
ಇದೇ ಸಂದರ್ಭದಲ್ಲಿ ಬಂಗಾಲದ ಕವಿ ಶ್ರೀ ಬಂಕಿಮಚಂದ್ರ ಚಟರ್ಜಿ ಅವರು ರಚಿಸಿದ ವಂದೇ ಮಾತರಂ ಗೀತೆಯು ರಚನೆಯಾಗಿ ೧೫೦ ವರ್ಷಗಳು ಕಳೆದ ಸವಿನೆನಪಿಗಾಗಿ ವಂದೇ ಮಾತರಂ ಗೀತೆ ಹಾಗೂ ಶ್ರೀ ಕನಕದಾಸರ ಆಯ್ದ ಹತ್ತು ಕೀರ್ತನೆಗಳನ್ನು ಸುಮಧುರವಾಗಿ ಹಾಡಲಾಯಿತು. ಶಿಕ್ಷಕಿಯರು ತಮ್ಮ ಭಾಷಣಗಳಲ್ಲಿ ಕನಕದಾಸರ ಜೀವನ ಸಾಧನೆಗಳ ಬಗ್ಗೆ ಪರಿಚಯಿಸಿದರು.ತಿಮ್ಮಪ್ಪ ನಾಯಕರಾಗಿದ್ದ ಸಾಮಾನ್ಯ ಯುವಕ ಕನಕದಾಸನಾಗಿ ಬದಲಾಗಿ, ಶ್ರೀಕೃಷ್ಣನ ಪರಮಭಕ್ತನಾಗಿ ಮಾರ್ಪಟ್ಟ ಸನ್ನಿವೇಶಗಳನ್ನು ಕಥೆಯ ರೂಪದಲ್ಲಿ ವಿವರಿಸಿದರು. ಈ ಮೂಲಕ ಮಕ್ಕಳಲ್ಲಿ ನೈತಿಕ, ಮಾನವೀಯ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ವಿನಯ್ ಪಿ. ರಾವ್, ಪ್ರಾಂಶುಪಾಲೆ ಚೇತನಾ ವಿ. ರಾವ್, ಮುಖ್ಯ ಶಿಕ್ಷಕರು ಹಾಗೂ ಶಿಕ್ಷಕ ಸಿಬ್ಬಂದಿ ಹಾಜರಿದ್ದರು.- - -
-08ಎಚ್‌ಆರ್‌ಆರ್03:ಹರಿಹರ ಸಮೀಪದ ಕುಮಾರಪಟ್ಟಣಂನಲ್ಲಿರುವ ಅಮೃತವರ್ಷಿಣಿ ವಿದ್ಯಾಲಯದಲ್ಲಿ ಶನಿವಾರ ಶ್ರೀ ಕನಕದಾಸರ ೫೩೧ನೇ ವಾರ್ಷಿಕೋತ್ಸವ ಆಚರಿಸಲಾಯಿತು.
;Resize=(128,128))
;Resize=(128,128))
;Resize=(128,128))
;Resize=(128,128))