ಕನಕದಾಸರು ದಾರ್ಶನಿಕ: ಸಿಎಂ

| Published : Nov 09 2025, 02:30 AM IST

ಸಾರಾಂಶ

ಕನಕದಾಸರು ಕೇವಲ ಶ್ರೀಕೃಷ್ಣನ ಭಕ್ತರಾಗಿರದೇ ಒಬ್ಬ ದಾರ್ಶನಿಕರಾಗಿದ್ದರು. ಸಮಾಜದಲ್ಲಿನ ಅಂಕುಡೊಂಕುಗಳನ್ನು ತಿದ್ದಿ ಬದಲಾವಣೆ ತರಲು ಸಾಕಷ್ಟು ಶ್ರಮಿಸಿದ್ದರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಕನ್ನಡಪ್ರಭ ವಾರ್ತೆ ಬೆಂಗಳೂರು

ಕನಕದಾಸರು ಕೇವಲ ಶ್ರೀಕೃಷ್ಣನ ಭಕ್ತರಾಗಿರದೇ ಒಬ್ಬ ದಾರ್ಶನಿಕರಾಗಿದ್ದರು. ಸಮಾಜದಲ್ಲಿನ ಅಂಕುಡೊಂಕುಗಳನ್ನು ತಿದ್ದಿ ಬದಲಾವಣೆ ತರಲು ಸಾಕಷ್ಟು ಶ್ರಮಿಸಿದ್ದರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಕನಕ ದಾಸರ ಜಯಂತಿ ಅಂಗವಾಗಿ ಶನಿವಾರ ಶಾಸಕರ ಭವನದ ಆವರಣದಲ್ಲಿರುವ ಕನಕದಾಸರ ಪ್ರತಿಮೆಯ ಮುಂಭಾಗ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕನಕದಾಸರು ಶ್ರೀಕೃಷ್ಣನ ಪರಮಭಕ್ತರಾಗಿದ್ದರು. ಉಡುಪಿ ಕೃಷ್ಣ ದೇವಸ್ಥಾನದಲ್ಲಿ ಕನಕನಕಿಂಡಿ ಸ್ಥಾಪನೆಗೆ ಕಾರಣರಾದರು. ಅವರು ಕೇವಲ ಕೃಷ್ಣ ಭಕ್ತರಾಗಿರದೇ ಸಮಾಜದಲ್ಲಿನ ಅಂಕುಡೊಂಕುಗಳನ್ನು ತಿದ್ದಿ ದಾರ್ಶನಿಕರಾಗಿದ್ದರು. ಅವರು ಕುರುಬ ಸಮುದಾಯದಲ್ಲಿ ಜನಿಸಿದರೂ ವಿಶ್ವಮಾನವರಾದವರು. ಕುಲಕುಲವೆಂದು ಹೊಡೆದಾಡದಿರಿ ಎಂದು ಹೇಳಿ ಮನುಷ್ಯರೆಲ್ಲರು ಒಂದೇ ಎಂದು ಸಾರಿದರು. ತಮ್ಮ ಕೀರ್ತನೆ, ಹಾಡುಗಳ ಮೂಲಕ ಸಂದೇಶ ತಿಳಿಸಿದ್ದರು. ಅವರನ್ನು ಗೌರವಿಸಿ, ಸ್ಮರಿಸುವುದು ರಾಜ್ಯ ಸರ್ಕಾರ ಕರ್ತವ್ಯವಾಗಿದ್ದು, ಅದನ್ನು ಮಾಡಲಾಗುತ್ತಿದೆ ಎಂದರು.

ಸಚಿವರಾದ ಡಾ. ಎಚ್‌.ಸಿ. ಮಹದೇವಪ್ಪ, ಶಿವರಾಜ ತಂಗಡಗಿ ಇತರರಿದ್ದರು.