ಸಾರಾಂಶ
- ಹೊನ್ನಾಳಿಯಲ್ಲಿ ಸರ್ಕಾರಿ ಕಾಲೇಜಿನ ಪ್ರಾಂಶುಪಾಲ ಡಾ.ಬಿ.ಜಿ.ಧನಂಜಯ
- - -ಕನ್ನಡಪ್ರಭ ವಾರ್ತೆ ಹೊನ್ನಾಳಿ
ಕನಕದಾಸರು ದಾಸಶ್ರೇಷ್ಠ ಮಾತ್ರವಲ್ಲ, ಜನರ ಧ್ವನಿಯಾಗಿ, ಕವಿಯಾಗಿ, ಸಮಾಜದ ಅಂತರಂಗ ದರ್ಶನ ಮಾಡಿಸಿದ ಮಹಾಪುರುಷ ಎಂದು ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ಬಿ.ಜಿ. ಧನಂಜಯ ಹೇಳಿದರು.ಶನಿವಾರ ಕಾಲೇಜಿನಲ್ಲಿ ದಾಸಶ್ರೇಷ್ಠ ಕನಕದಾಸರ 538ನೇ ಜಯಂತಿ ಕಾರ್ಯಕ್ರಮದಲ್ಲಿ ಕನಕದಾಸ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಅವರು ಮಾತನಾಡಿದರು. ಕನಕದಾಸರ ಕಾಲವು ದಾಸಯುಗದ ಸುವರ್ಣಯುುಗ. ಅವರೊಬ್ಬ ಸಾರ್ವಕಾಲಿಕ, ಜಾಗತಿಕ ಸಮಾಜ ಸುಧಾರಕ. ಕುಲದ ತಾರತಮ್ಯ ವಿರುದ್ಧ ಧ್ವನಿ ಎತ್ತುವ ಮೂಲಕ ಜಾತ್ಯತೀತ, ಸಮಸಮಾಜ ನಿರ್ಮಾಣಕ್ಕೆ ಶ್ರಮಿಸಿದವರು ಎಂದರು.
ಬಾಡಾದಲ್ಲಿ ಜನಿಸಿ, ನಂತರ ಢಣಾಯಕ ಹುದ್ದೆಯನ್ನು ತ್ಯಜಿಸಿದ ನಂತರ ವಿಜಯನಗರದ ವ್ಯಾಸರಾಯರಲ್ಲಿ ಶಿಷ್ಯರಾದವರು. ಸಾಹಿತ್ಯ ಮತ್ತು ಆಧ್ಯಾತ್ಮಿಕ ಉನ್ನತಿಯ ನಂತರ ಕೊನೆಯಲ್ಲಿ ಅವರು ಕಾಗಿನೆಲೆಯಲ್ಲಿ ನೆಲೆಸಿದರು. ಕಾವ್ಯ ಮತ್ತು ಕೀರ್ತನೆಗಳ ಮೂಲಕ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದರು. ಶೂದ್ರರಾಗಿ ತಾವು ಸಮಾಜದಲ್ಲಿ ಅನುಭವಿಸಿದ ನೋವು- ನಲಿವುಗಳನ್ನು ಸಾಹಿತ್ಯದಲ್ಲಿ ಪರೋಕ್ಷವಾಗಿ ಚಿತ್ರಿಸಿದರು. ಸ್ವಂತ ಸಾಧನೆಯಿಂದ ದಾಸಶ್ರೇಷ್ಠರಾದವರು ಎಂದರು.ಕನಕದಾಸರು ಸಾಹಿತ್ಯದಲ್ಲಿ ಮೋಹನ ತರಂಗಿಣಿ, ರಾಮಧಾನ್ಯ ಚರಿತೆ, ಹರಿಭಕ್ತಿಸಾರ ಮತ್ತು ಕೀರ್ತನೆಗಳನ್ನು ರಚಿಸುವ ಮೂಲಕ ಕನ್ನಡ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಕನಕದಾಸರದ್ದು ವ್ಯಕ್ತಿನಿಷ್ಠೆ ಕಾವ್ಯವಲ್ಲ. ವಸ್ತುನಿಷ್ಠೆಯ ಕಾವ್ಯ ಮತ್ತು ಕೀರ್ತನೆಗಳಾಗಿದ್ದವು. ಜ್ಞಾನ, ಭಕ್ತಿ, ವೈರಾಗ್ಯ ಮತ್ತು ದೈವ ಪ್ರತಿಭೆಯನ್ನು ಅವರ ಸಾಹಿತ್ಯದಲ್ಲಿ ಕಾಣಬಹುದಾಗಿದೆ ಎಂದರು.
ಉಪನ್ಯಾಸಕ ಹರಾಳು ಮಹಾಬಲೇಶ್ವರ ಮಾತನಾಡಿ, ಕನಕದಾಸರ ಜೀವನ ಹೂವಿನ ಹಾಸಿಗೆಯಾಗಿರಲಿಲ್ಲ. ವಂಶಪಾರಂಪರ್ಯದಿಂದ ಬಂದಿದ್ದ ಢಣಾಯಕ ಹುದ್ದೆ ದಾಯಾದಿಗಳ ಕುತಂತ್ರದಿಂದ ಕೈತಪ್ಪಿಹೋದಾಗ ಪ್ರಾಮಾಣಿಕ ಪ್ರಯತ್ನಗಳಿಂದ ಮತ್ತೆ ಪಡೆದರು, ಅನಂತರ ಅವರು ಲೌಕಿಕ ಜೀವನದಿಂದ ಆಧ್ಯಾತ್ಮಿಕ ಜೀವನ ಸ್ವೀಕರಿಸಿದರು ಎಂದರು.ಉಪನ್ಯಾಸಕ ತಿಪ್ಪೇಶಪ್ಪ ಬಿ.ನಿರೂಪಿಸಿದರು. ಪ್ರಾಧ್ಯಾಪಕ ವೃಂದದವರು ಕನಕದಾಸರ ಕೀರ್ತನೆ ಮೂಲಕ ಪ್ರಾರ್ಥಿಸಿದರು. ವಿದ್ಯಾರ್ಥಿಗಳು ಕನಕದಾಸರ ಕುರಿತು ಮಾತನಾಡಿದರು. ಸಹಾಯಕ ಪ್ರಾಧ್ಯಾಪಕರಾದ ಶ್ರಿಸುದಿನ ಅವರು ಕನಕದಾಸರ ಕೀರ್ತನೆಗಳನ್ನು ಹಾಡಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಡಾ.ನಾಗರಾಜ ನಾಯ್ಕ ವಂದಿಸಿದರು.- - -
-9ಎಚ್.ಎಲ್.ಐ2.ಜೆಪಿಜಿ:ಹೊನ್ನಾಳಿ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ ದಾಸಶ್ರೇಷ್ಠ ಕನದಾಸರ 538ನೇ ಜಯಂತಿ ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ಡಾ. ಬಿ.ಜಿ.ಧನಂಜಯ ಮಾತನಾಡಿದರು.
;Resize=(128,128))
;Resize=(128,128))
;Resize=(128,128))
;Resize=(128,128))