16ನೇ ಶತಮಾನದಲ್ಲಿ ಸಂತ ಶ್ರೇಷ್ಠ ಕನಕದಾಸ ಅವರು ಸಮಾಜದಲ್ಲಿದ್ದ ಜಾತಿ ತಾರತಮ್ಯಗಳ ವಿರುದ್ಧ ಕೀರ್ತನೆಗಳ ರಚಿಸುವ ಮೂಲಕ ಜಾಗೃತಿ ಮೂಡಿಸುವ ಪ್ರಯತ್ನ ಮಾಡಿದರು. ಇಂದಿಗೂ ಇರುವ ಜಾತೀಯತೆ, ಅಸಮಾನತೆ, ಅವ್ಯವಸ್ಥೆ ತೊಲಗಬೇಕಾಗಿದೆ ಎಂದು ಶಾಸಕ ಡಿ.ಜಿ.ಶಾಂತನಗೌಡ ಹೇಳಿದ್ದಾರೆ.
- ಹೊನ್ನಾಳಿ ತಾಲೂಕು ಆಡಳಿತದಿಂದ ತಾಲೂಕು ಕಚೇರಿ ಸಭಾಂಗಣದಲ್ಲಿ 539ನೇ ಕನಕ ಜಯಂತಿ
- - -ಕನ್ನಡಪ್ರಭ ವಾರ್ತೆ ಹೊನ್ನಾಳಿ
16ನೇ ಶತಮಾನದಲ್ಲಿ ಸಂತ ಶ್ರೇಷ್ಠ ಕನಕದಾಸ ಅವರು ಸಮಾಜದಲ್ಲಿದ್ದ ಜಾತಿ ತಾರತಮ್ಯಗಳ ವಿರುದ್ಧ ಕೀರ್ತನೆಗಳ ರಚಿಸುವ ಮೂಲಕ ಜಾಗೃತಿ ಮೂಡಿಸುವ ಪ್ರಯತ್ನ ಮಾಡಿದರು. ಇಂದಿಗೂ ಇರುವ ಜಾತೀಯತೆ, ಅಸಮಾನತೆ, ಅವ್ಯವಸ್ಥೆ ತೊಲಗಬೇಕಾಗಿದೆ ಎಂದು ಶಾಸಕ ಡಿ.ಜಿ.ಶಾಂತನಗೌಡ ಹೇಳಿದರು.ಶುಕ್ರವಾರ ತಾಲೂಕು ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಸಂತ ಕನಕದಾಸ 539ನೇ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕನಕದಾಸರು ಒಂದು ಪ್ರಾಂತ್ಯದ ದಂಡನಾಯಕರಾಗಿ ಸೇವೆ ಸಲ್ಲಿಸಿದವರು. ತಮ್ಮ ಕಾಲಘಟ್ಟದಲ್ಲಿ ನಡೆದ ಯುದ್ಧದ ಪರಿಣಾಮಗಳನ್ನು ಕಂಡು ತಮ್ಮ ಹುದ್ದೆ ತೊರೆದು ಭಕ್ತಿ ಮಾರ್ಗದಲ್ಲಿ ನಡೆದರು. ಅನೇಕ ಕೀರ್ತನೆಗಳನ್ನು, ಅನೇಕ ಕಾವ್ಯಗಳನ್ನು ಬರೆದರು. ಆ ಮೂಲಕ ಸಮಾಜದಲ್ಲಿನ ಮೇಲು- ಕೀಳುಗಳ ಮೇಲೆ ಬೆಳಕು ಚೆಲ್ಲುವ ಪ್ರಯತ್ನ ಮಾಡಿದರು ಎಂದರು.ಬಯಲು ಸೀಮೆ ಪ್ರದೇಶ ಅಭಿವೃದ್ಧಿ ನಿಗಮ ಅಧ್ಯಕ್ಷ ಎಚ್.ಬಿ. ಮಂಜಪ್ಪ ಮಾತನಾಡಿ, ಜಗತ್ತಿನ ಇತಿಹಾಸ ಪುರುಷರಲ್ಲಿ ಕನಕದಾಸರೂ ಒಬ್ಬರು. ಇಂತಹ ಮಹಾನ್ ಪುರುಷರು ಕುರುಬ ಸಮಾಜದಲ್ಲಿ ಜನಿಸಿ ಸಮಾಜದ ಅವ್ಯವಸ್ಥೆ ಕಂಡು ಅದನ್ನು ತಮ್ಮ ಶಾಂತಿಯ ಮಾರ್ಗದಲ್ಲಿ ಹೋಗಲಾಡಿಸುವ ಪ್ರಯತ್ನ ಮಾಡಿದರು. ತಮ್ಮ ತತ್ವ, ಆದರ್ಶ, ಕೀರ್ತನೆ, ಸಾಹಿತ್ಯದ ಮೂಲಕ ಸಮಾಜವನ್ನು ಬಡಿದೆಚ್ಚರಿಸುವ ಕೆಲಸ ಮಾಡಿದರು. ಭಕ್ತಿಮಾರ್ಗದ ಮೂಲಕ ದೇವರನ್ನು ತನ್ನತ್ತ ಒಲಿಸಿಕೊಂಡ ಮಹಾನ್ ಸಂತ ಕನಕದಾಸ ಎಂದರು.
ಅವಳಿ ತಾಲೂಕು ಕುರುಬ ಸಮಾಜದ ಅಧ್ಯಕ್ಷ ನೆಲಹೊನ್ನೆ ಮೋಹನ್ ಮಾತನಾಡಿ, 1509ರಲ್ಲಿ ಜನಿಸಿದ ತಿಮ್ಮಪ್ಪ ನಾಯಕ, ಅನಂತರ ಕನಕದಾಸರಾಗಿ ಬದಲಾದ ವಿಚಾರಗಳ ಕುರಿತು ಮಾತನಾಡಿದರು. ಆದಿಕೇಶವನ ಭಕ್ತನಾಗಿ, ಹರಿ ಕೀರ್ತನೆಗಳ ಮೂಲಕ ಸಮಾಜವನ್ನು ತಿದ್ದುವ ಪ್ರಯತ್ನ ಮಾಡಿದರು ಎಂದರು.ಕಾರ್ಯಕ್ರಮಮದಲ್ಲಿ ಎಂ.ಎಲ್. ತಿಪ್ಪೇಸ್ವಾಮಿ (ಭಾಮಿನಿ ಷಟ್ಪದಿ ಕಾವ್ಯ ಗದ್ಯಾನುಸಹಿತ) ಅವರು ಸಂಪಾದಿಸಿದ ಕೃತಿ ಕನಕದಾಸರ ಚರಿತ್ರೆಯನ್ನು ಶಾಸಕ ಡಿ.ಜಿ.ಶಾಂತನಗೌಡ, ಬಯಲು ಸೀಮೆ ಪ್ರದೇಶಾಭಿವೃದ್ಧಿ ನಿಗಮದ ಅಧ್ಯಕ್ಷ ಎಚ್.ಬಿ. ಮಂಜಪ್ಪ ಬಿಡುಗಡೆ ಮಾಡಿದರು.
ಉಪವಿಭಾಗಾಧಿಕಾರಿ ಎಚ್.ಬಿ.ಚನ್ನಪ್ಪ, ತಹಸೀಲ್ದಾರ್ ಎಂ.ಪಿ. ಕವಿರಾಜ್, ಮಾಜಿ ಸೈನಿಕ ಎಂ. ವಾಸಪ್ಪ, ರಾಜು ಕಡಗಣ್ಣಾರ ಮಾತನಾಡಿದರು. ಸಮಾರಂಭದಲ್ಲಿ ತಾಲೂಕು ಹಾಲುಮತ ಸಮಾಜದ ಮಹಿಳಾ ಅಧ್ಯಕ್ಷರಾದ ಪಂಕಜ ಅರುಣ್ಕುಮಾರ್, ರಾಜ್ಯ ಪದಾಧಿಕಾರಿಗಳಾದ ಸೌಮ್ಯ, ಸಮಾಜದ ಮುಖಂಡ ಹರಳಹಳ್ಳಿ ಶೇಖರಪ್ಪ, ಪಂಚಮಸಾಲಿ ಸಮಾಜದ ಅಧ್ಯಕ್ಷ ಬೆನಕನಕಹಳ್ಳಿ ವೀರಣ್ಣ ಸೇರಿದಂತೆ ಅನೇಕ ಮುಖಂಡರು, ಅಧಿಕಾರಿಗಳು ಉಪಸ್ಥಿತರಿದ್ದರು.- - -
-27ಎಚ್.ಎಲ್.ಐ2:ಹೊನ್ನಾಳಿ ತಾಲೂಕು ಕಚೇರಿ ಸಭಾಂಗಣದಲ್ಲಿ ನಡೆದ ಕನಕ ಜಯಂತಿ ಸಮಾರಂಭದಲ್ಲಿ ಎಂ.ಎಲ್. ತಿಪ್ಪೇಸ್ವಾಮಿ ಸಂಪಾದಿಸಿದ ಭಾಮಿನಿ ಷಟ್ಪದಿ ಕಾವ್ಯ ಗದ್ಯಾನುಸಹಿತ ಕೃತಿಯನ್ನು ಡಿ.ಜಿ. ಶಾಂತನಗೌಡ, ಎಚ್.ಬಿ.ಮಂಜಪ್ಪ ಬಿಡುಗಡೆ ಮಾಡಿದರು.