ಕನಕದಾಸರು ಶೋಷಿತರನ್ನು ಸಮಾಜದ ಮುನ್ನಲೆಗೆ ತರಲು ಶ್ರಮಿಸಿದ್ದಾರೆ: ತಮ್ಮಯ್ಯ

| Published : Nov 11 2025, 02:00 AM IST

ಕನಕದಾಸರು ಶೋಷಿತರನ್ನು ಸಮಾಜದ ಮುನ್ನಲೆಗೆ ತರಲು ಶ್ರಮಿಸಿದ್ದಾರೆ: ತಮ್ಮಯ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಚಿಕ್ಕಮಗಳೂರು, ಶೋಷಿತ ವರ್ಗದ ಜನರನ್ನು ಸಮಾಜದ ಮುನ್ನಲೆಗೆ ತರಬೇಕೆಂಬ ಉದ್ದೇಶದಿಂದ ಸಂಕೀರ್ತನೆಗಳ ಮೂಲಕ ಕ್ರಾಂತಿ ಮಾಡಿದ ಮಹಾನ್‌ ಇತಿಹಾಸ ಪುರುಷ ಭಕ್ತ ಕನಕದಾಸರು ಎಂದು ಶಾಸಕ ಎಚ್.ಡಿ. ತಮ್ಮಯ್ಯ ಹೇಳಿದರು.

ಕೆಎಸ್‌ಆರ್‌ಟಿಸಿ ಡಿಪೋನಲ್ಲಿ ಸಾರಿಗೆ ನಿಗಮದ ನೌಕರರು ಏರ್ಪಡಿಸಿದ್ದ ಶ್ರೀ ಕನಕಜಯಂತಿ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಶೋಷಿತ ವರ್ಗದ ಜನರನ್ನು ಸಮಾಜದ ಮುನ್ನಲೆಗೆ ತರಬೇಕೆಂಬ ಉದ್ದೇಶದಿಂದ ಸಂಕೀರ್ತನೆಗಳ ಮೂಲಕ ಕ್ರಾಂತಿ ಮಾಡಿದ ಮಹಾನ್‌ ಇತಿಹಾಸ ಪುರುಷ ಭಕ್ತ ಕನಕದಾಸರು ಎಂದು ಶಾಸಕ ಎಚ್.ಡಿ. ತಮ್ಮಯ್ಯ ಹೇಳಿದರು.ಕೆಎಸ್‌ಆರ್‌ಟಿಸಿ ಡಿಪೋನಲ್ಲಿ ಸಾರಿಗೆ ನಿಗಮದ ನೌಕರರು ಏರ್ಪಡಿಸಿದ್ದ ಶ್ರೀ ಕನಕಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸಮಾಜದಲ್ಲಿ ತಲೆದೋರಿದ್ದ ಮೂಢನಂಬಿಕೆಗಳ ವಿರುದ್ಧ ಸೌಮ್ಯ, ಶಾಂತಿಯಿಂದ ಸಾಮಾಜಿಕ ಹೋರಾಟ ಮಾಡಲು ಅದ್ಭುತ ಸಾಹಿತಿಗಳಾಗಿ ಹೃದಯ ಬೆಸೆಯುವ ಸಂಕೀರ್ತನೆಗಳನ್ನು ರಚಿಸಿ, ಸಾಮಾಜಿಕ ಸಾಮರಸ್ಯವನ್ನು ಕನಕದಾಸರು ಕಾಪಾಡಿದ್ದಾರೆ ಎಂದರು.

ಹಾವೇರಿ ಜಿಲ್ಲೆಯ ಬಾಡಾ ಗ್ರಾಮದಲ್ಲಿ ಜನಿಸಿದ ತಿಮ್ಮಪ್ಪ ನಾಯಕ ಮುಂದೆ ಕನಕದಾಸರಾಗಿ ಕಾಗಿನೆಲೆಯಲ್ಲಿ ವ್ಯವಸಾಯ ಮಾಡುತ್ತಿದ್ದಾಗ ಚಿನ್ನದ ಗಣಿ ಸಿಗುತ್ತದೆ. ಅದನ್ನು ಸ್ವಾರ್ಥಕ್ಕೆ ಬಳಸದೆ ದೇವಾಲಯ ನಿರ್ಮಿಸುವಲ್ಲಿ ಮುಂದಾಗಿದ್ದರು ಎಂದು ಹೇಳಿದರು.ಅಜ್ಞಾನದಿಂದ ಸುಜ್ಞಾನದ ಕಡೆ ಪ್ರಭಾವಿತರಾಗಿ ಮೋಹಿನಿ ತರಂಗಿಣಿಯಲ್ಲಿ ಕವಿತೆ, ಕವನ ರಚಿಸಿ ದಾಸ ಕೀರ್ತನೆಗಳ ಮೂಲಕ ಜಗತ್ತಿಗೆ ಭಕ್ತಿಯಿಂದ ದೇವರು ಒಲಿಯುತ್ತಾನೆ ಎಂಬುದನ್ನು ಕನಕದಾಸರು ತೋರಿಸಿ ಮಾರ್ಗದರ್ಶನ ನೀಡಿದ್ದಾರೆ ಎಂದರು.ಬುದ್ಧ, ಬಸವ, ಅಂಬೇಡ್ಕರ್, ಕನಕದಾಸ, ವಾಲ್ಮೀಕಿ ಮುಂತಾದ ಮಹಾನ್ ಪುರುಷರನ್ನು ಕೇವಲ ಒಂದು ಜಾತಿಗೆ, ಒಂದು ಸಮುದಾಯಕ್ಕೆ ಸೀಮಿತಗೊಳಿಸದೆ ಎಲ್ಲಾ ವರ್ಗದ ಜನರು ಒಟ್ಟುಗೂಡಿಸಿ ಆಚರಿಸಿದಾಗ ಮಹಾನ್‌ ದಾರ್ಶನಿಕರ ಜಯಂತಿಗೆ ನಿಜ ಅರ್ಥ ಬರುತ್ತದೆ ಎಂದು ಹೇಳಿದರು.ವಿಧಾನ ಪರಿಷತ್ ಮಾಜಿ ಸದಸ್ಯೆ ಗಾಯಿತ್ರಿ ಶಾಂತೇಗೌಡ ಮಾತನಾಡಿ, ಭಕ್ತ ಕನಕದಾಸರ ಸಂಕೀರ್ತನೆಗಳ ಬಗ್ಗೆ ಸಂಸ್ಕೃತಿ, ಪರಂಪರೆ ನೆಲೆಯನ್ನು ಯುವ ಪೀಳಿಗೆಗೆ ಪರಿಚಯಿಸುವ ಅಗತ್ಯಇದೆ. ಕೇವಲ ಒಂದು ದಿನಕ್ಕೆ ಮಹಾನ್ ಪುರುಷರ ಜಯಂತಿಗಳು ಸೀಮಿತವಾಗದೆ ಪ್ರತೀ ಮನೆ ಮನದಲ್ಲಿ ಅಚರಣೆಗಳು ನಡೆಯುವಂತಾಗಬೇಕು ಎಂದು ತಿಳಿಸಿದರು.ಅಜ್ಞಾನದಿಂದ ಸುಜ್ಞಾನದ ಕಡೆಗೆ ಹೋಗಬೇಕೆಂಬ ನಿಟ್ಟಿನಲ್ಲಿ ಕನಕದಾಸರು ಉಡುಪಿಯಲ್ಲಿ ಶ್ರೀಕೃಷ್ಣನನ್ನು ದರ್ಶನ ಮಾಡಬೇಕು ಎಂಬ ಉದ್ದೇಶದೊಂದಿಗೆ ಮಠದಲ್ಲಿ ಮುಂದಾದಾಗ ಪುರೋಹಿತ ಶಾಹಿಗಳು ತಡೆಯುತ್ತಾರೆ, ಆಗ ಕನಕ ದಾಸರು ಬಾಗಿಲನು ತೆರೆದು ದರ್ಶನ ಕೊಡು ಹರಿಯೇ ಎಂಬ ಗೀತೆಯ ಮೂಲಕ ತನ್ನೆಡೆಗೆ ಶ್ರೀ ಕೃಷ್ಣನ ನೋಡಿದಾಗ ಅದೇ ಕನಕನ ಕಿಂಡಿಯಾಗಿ ಪ್ರಸಿದ್ಧಿಯಾಗಿದೆ ಎಂದರು.ಕನ್ನಡ ನಾಡಿನ ಸಂಸ್ಕೃತಿ, ಪರಂಪರೆ ಬಗ್ಗೆ ವಿದ್ಯಾರ್ಥಿಗಳಲ್ಲಿ ಪಠ್ಯಗಳ ಮೂಲಕ ಜಾಗೃತಿ ಮೂಡಿಸಬೇಕು. ಇದು ಆದಾಗ ಎಲ್ಲರಲ್ಲೂ ಸಮಾನತೆಯ ಮನೋಭಾವ ಬರುತ್ತದೆ ಎಂದು ಹೇಳಿದರು.ಕನಕ ಸಮಿತಿ ಅಧ್ಯಕ್ಷ ಜಯಪ್ಪ ಅಧ್ಯಕ್ಷತೆ ವಹಿಸಿದ್ದರು. ಘಟಕ ವ್ಯವಸ್ಥಾಪಕ ರವೀಶ್, ಉಪಾಧ್ಯಕ್ಷರಾದ ಸಿದ್ದೇಗೌಡ, ಕಾರ್ಯ ದರ್ಶಿ ಸುರೇಶ್, ಸಹ ಕಾರ್ಯದರ್ಶಿ ಬೀರೇಗೌಡ, ಖಜಾಂಚಿ ಚಂದ್ರಶೇಖರ್, ಸದಸ್ಯರುಗಳಾದ ವಸಂತ, ಪುರುಷೋತ್ತಮ, ರಘು, ಲೋಕೇಶ್, ದಿನೇಶ್, ಮೋಹನ್‌ಗೌಡ ಹಾಗೂ ಸಾರಿಗೆ ಸಂಸ್ಥೆ ಸಿಬ್ಬಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. 9 ಕೆಸಿಕೆಎಂ 3ಚಿಕ್ಕಮಗಳೂರಿನ ಕೆಎಸ್‌ಆರ್‌ಟಿಸಿ ಡಿಪೋನಲ್ಲಿ ಸಾರಿಗೆ ನಿಗಮದ ನೌಕರರು ಏರ್ಪಡಿಸಿದ್ದ ಕನಕ ಜಯಂತಿ ಕಾರ್ಯಕ್ರಮದಲ್ಲಿ ಶಾಸಕ ಎಚ್‌.ಡಿ. ತಮ್ಮಯ್ಯ, ಎ.ವಿ. ಗಾಯತ್ರಿ ಶಾಂತೇಗೌಡ, ಜಯಪ್ಪ ಹಾಗೂ ಸಾರಿಗೆ ಸಂಸ್ಥೆ ಸಿಬ್ಬಂದಿ ಭಾಗವಹಿಸಿದ್ದರು.