ಸಾರಾಂಶ
ಹಿರೇಕೆರೂರು: ಭಕ್ತ ಕನಕದಾಸರ ವಿಶ್ವ ಮಾನವ ಪರಿಕಲ್ಪನೆಯ ಸಂದೇಶಗಳು ಯಾವುದೇ ಜಾತಿ, ಧರ್ಮ, ಪ್ರದೇಶ ಅಥವಾ ಭಾಷೆಗೆ ಸೀಮಿತವಾಗಿಲ್ಲ. ಅವು ಇಂದಿನ ಆಧುನಿಕ ಸಮಾಜಕ್ಕೆ ಅತ್ಯಂತ ಅವಶ್ಯಕವಾಗಿವೆ. ಅವರ ಆದರ್ಶಗಳನ್ನು ನಾವು ನೀವು ಅಳವಡಿಸಿಕೊಂಡು ಹೊಗೋಣ ಎಂದು ಶಾಸಕ ಯು.ಬಿ. ಬಣಕಾರ ಹೇಳಿದರು.ಪಟ್ಟಣದಲ್ಲಿ ತಾಲೂಕು ಆಡಳಿತ ಹಾಗೂ ರಾಷ್ಟ್ರೀಯ ಹಬ್ಬಗಳ ಸಮಿತಿಯ ಸಹಯೋಗದಲ್ಲಿ ಶನಿವಾರ ನಡೆದ ಶ್ರೀ ಕನಕದಾಸರ ಜಯಂತ್ಯುತ್ಸವ ಮೆರವಣಿಗೆಗೆ ಪುಷ್ಟ ನಮನ ಮೂಲಕ ಚಾಲನೆ ನೀಡಿ ಮಾತನಾಡಿದರು.ಕನ್ನಡ ಹರಿದಾಸ ಪರಂಪರೆಯಲ್ಲಿ ಅಸಾಧಾರಣ ಕೊಡುಗೆ ನೀಡಿದ ಕನಕದಾಸರನ್ನು ಕವಿಗಳಲ್ಲಿ ದಾಸರು, ದಾಸರಲ್ಲಿ ಕವಿ ಎಂದು ಸ್ಮರಿಸಲಾಗುತ್ತದೆ. ಅವರ ಕೀರ್ತನೆಗಳು, ಮುಂಡಿಗೆಗಳು, ಉಗಾಭೋಗಗಳು ಮತ್ತು ದಂಡಕಗಳಲ್ಲದೆ, ಮೋಹನತರಂಗಿಣಿ , ನಳಚರಿತ್ರೆ , ಹರಿಭಕ್ತಿಸಾರದಂತಹ ಕಾವ್ಯಗಳ ಮೂಲಕ ಸಾರ್ವಕಾಲಿಕ ಮೌಲ್ಯಗಳನ್ನು ಸಾರಿದ್ದಾರೆ. ಅವರ ಜೀವನದ ಮೌಲ್ಯಗಳನ್ನು ಇಂದಿನ ಯುವಕರು ಆದರ್ಶವಾಗಿಟ್ಟುಕೊಂಡು ಪಾಲಿಸಬೇಕು ಎಂದರು.ಈ ಸಂದರ್ಭದಲ್ಲಿ ತಹಸೀಲ್ದಾರ್ ಎಂ.ರೇಣುಕಾ, ಗ್ಯಾರಂಟಿ ಸಮಿತಿಯ ತಾಲೂಕು ಅಧ್ಯಕ್ಷ ಮಲ್ಲಿಕಾರ್ಜುನ ಬುರಡಿಕಟ್ಟಿ, ಕುರುಬ ಸಮಾಜದ ತಾಲೂಕು ಅಧ್ಯಕ್ಷ ಕೆಂಚಪ್ಪ ಕುರಿಯವರ, ಕ್ಷೇತ್ರಶಿಕ್ಷಣಾಧಿಕಾರಿ ಎನ್.ಶ್ರೀಧರ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಎಚ್.ಎಚ್. ಜಾಡರ, ಡಾ. ನಿಂಗಪ್ಪ ಚಳಗೇರಿ, ಮುಖಂಡರಾದ ರಾಜು ಕರಡಿ, ಹನುಮಂತಪ್ಪ ಕುರುಬರ, ಕವಿತಾ ಹಾರ್ನಳ್ಳಿ, ರಜಿಯಾ ಅಸಾದಿ, ರಮೇಶ್ ಕೋಡಿಹಳ್ಳಿ, ಚಂದ್ರಶೇಖರ ಒಡೆಯರ, ಬಿರೇಶ ಹಾರ‍್ನಳ್ಳಿ, ಸನಾವುಲ್ಲ ಮಖಾಂದರ, ಮನೋಹರ ಒಡೆಯರ, ಸಂದೀಪ, ರಾಘು ಮಾಳಮ್ಮನವರ , ಶಂಭು ಹುಂಸಬಾವಿ, ಸುರೇಶ ಮಡಿವಾಳರ, ಆಂಜನೇಯ ಎಚ್., ರಾಮು ಚಿಗಮರಬ, ನಾಗರಾಜ ಕಟ್ಟಿಮನಿ, ಹಾಗೂ ಸಮಾಜ ಮುಖಂಡರು ಇದ್ದರು.
;Resize=(128,128))
;Resize=(128,128))
;Resize=(128,128))
;Resize=(128,128))