ಕನಕದಾಸರು ಬರೀ ಒಂದೇ ಜಾತಿಗೆ ಸಿಮೀತರಾದವರಲ್ಲ

| Published : Nov 25 2024, 01:05 AM IST

ಸಾರಾಂಶ

ಮಹಾಲಿಂಗಪುರದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ನಡೆದ ಕನಕದಾಸರ ಭಾವಚಿತ್ರ ಮೆರವಣಿಗೆಗೆ ಗಣ್ಯರು ಡೊಳ್ಳೂ ಬಾರಿಸುವ ಮೂಲಕ ಚಾಲನೆ ನೀಡಿದರು.

ಕನ್ನಡಪ್ರಭ ವಾರ್ತೆ ಮಹಾಲಿಂಗಪುರ

ಕನಕದಾಸರು ಬರೀ ಒಂದೇ ಜಾತಿಗೆ ಸಿಮೀತರಾದವರಲ್ಲ. ಅವರು ಎಲ್ಲ ಜನಾಂಗಕ್ಕೂ ಮಹಾನ್ ದಾಸರು ಎಂದು ಕಾಂಗ್ರೆಸ್ ಮುಖಂಡ ಸಿದ್ದು ಕೊಣ್ಣೂರ ಹೇಳಿದರು.

ಬುದ್ನಿ ಪಿ.ಡಿಯಲ್ಲಿರುವ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣರ ವೃತ್ತದಲ್ಲಿ ರಾಯಣ್ಣ ಮತ್ತು ಕನಕದಾಸರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಕನಕದಾಸರ ಭಾವಚಿತ್ರ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿದ ಅವರು, ಕನಕದಾಸರು ತಮಗೆ ಸಿಕ್ಕ ಬಂಗಾರದಿಂದ ಎಲ್ಲ ಮಂದಿರಗಳ ಅಭಿವೃದ್ಧಿ ಮಾಡಿದ ಮಹಾನ್ ಪುರಷ, ತಿರುಪತಿ ತಿಮ್ಮಪ್ಪ, ಉಡುಪಿ ಕೃಷ್ಣಣ ಆಪ್ತ ಭಕ್ತರಾಗಿದ್ದರು. ಇವರ ಭಕ್ತಿ ಪ್ರದರ್ಶನಕ್ಕೆ ಸಾಕಷ್ಟು ಉದಾರಣೆಗಳಿವೆ. ಮಹಾತ್ಮರ ಜಯಂತಿಗಳು ಮೆರವಣಿಗೆಗೆ ಸಿಮೀತವಾಗದೆ ಅವರು ನಡೆದು ಬಂದ ಹಾದಿ ಎಲ್ಲರೂ ಅರಿತುಕೊಂಡು ಅವರ ತತ್ವಾದರ್ಶಗಳನ್ನು ಜೀವನದಲ್ಲಿ ಸ್ವಲ್ಪಮಟ್ಟಿಗಾದರೂ ಅಳವಡಿಸಿಕೊಂಡಾಗ ಮಾತ್ರ ಜಯಂತಿ ಕಾರ್ಯಕ್ರಮಕ್ಕೆ ಅರ್ಥಬರುತ್ತದೆ. ಮತ್ತು ಮಹಾತ್ಮರನ್ನು ಯಾವುದೇ ಒಂದು ಜಾತಿಗಳಿಗೆ ಹೋಲಿಸುವುದು ಬಿಡಬೇಕು, ಮಹಾತ್ಮ ಎಲ್ಲರ ಉದ್ದಾರಕ್ಕಾಗಿಯೇ ಜನಿಸಿದವರು ಎಂದರು.

ಹಲಿಂಗಳಿ ಪೂಜ್ಯ ಮಹಾವೀರ ಪ್ರಭುಗಳು ಮಾತನಾಡಿ, ವರಕವಿಗಳು, ಕಿರ್ತನಕಾರರು ಎನಿಸಿಕೊಂಡ ಕನಕದಾಸರು ಕರ್ನಾಟಕ ಹರಿದಾಸ ಸಾಹಿತ್ಯದ ಅಶ್ವಿನಿ ದೇವತೆಗಳಲ್ಲೊಬ್ಬರು. ದಾಸ ಸಾಹಿತ್ಯದ ಸುವರ್ಣಯುಗದ ಪ್ರವರ್ತಕರು. ನಿರ್ಮೋಹಿಯಾಗಿ ಇಹದಲ್ಲಿ ಇದ್ದು, ಪರವನ್ನು ಗೆದ್ದ ಮಹಾನ ಸಂತ್ ಸರ್ವಕಾಲಿಕ ಸತ್ಯ ಸಾರಿ ವಿಶ್ವದ ಮಹಾತ್ಮ ವಿಶ್ವ ಸಂತ್ ಕನಕದಾಸರ ಕೊಡುಗೆ ಅಪಾರ ಅವರ ನಾಮ ಬಲವೇ ಎಲ್ಲರಿಗೂ ಸ್ಫೂರ್ತಿಯಾಗಿದೆ ಎಂದು ಹೇಳಿದರು.

ಮೆರವಣಿಗೆ:ಬುದ್ನಿ ಪಿ.ಡಿಯಲ್ಲಿರುವ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣರ ವೃತ್ತದಲ್ಲಿ ಸಿಂಗರಿಸಿದ ಬೃಹತ್ ವಾಹನದಲ್ಲಿ ಕನಕದಾಸರ ಭಾವಚಿತ್ರಕ್ಕೆ ಭಕ್ತಿಪೂರ್ವಕ ಪೂಜೆ ಸಲ್ಲಿಸಿ ವಿವಿಧ ವಾದ್ಯಗಳ ಮೂಲಕ ಚನ್ನಮ್ಮ ವೃತ್ತ, ಗಾಂಧಿ ವೃತ್ತ, ಜವಳಿ ಬಜಾರ, ನಡು ಚೌಕಿ, ಜಗದ್ಗುರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ಜಗನ್ಮಾತೆ ಬನಶಂಕರಿ ದೇವಸ್ಥಾನ, ಕಾಳಿಕಾ ಮಂದಿರ, ಮಾರುತಿ ಮಂದಿರ, ಸಾವಿತ್ರಿ ಪುಲೆ ವೃತ್ತ ಮೂಲಕ ಹಾಯ್ದು ಕರಿಸಿದ್ದೇಶ್ವರ ದೇವಸ್ಥಾನಕ್ಕೆ ಬಂದು ತಲುಪಿತು.

ಶಿರೂರದ ಚಿನ್ಮಯಾನಂದ ಮಹಾಸ್ವಾಮೀಜಿ ಮತ್ತು ಹಂದಿಗುಂದದ ಶ್ರೀಮಂತ ಮಹಾರಾಜರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಮುಖಂಡರಾದ ಪುರಸಭೆ ಅಧ್ಯಕ್ಷ ಯಲ್ಲಣ್ಣಗೌಡ ಪಾಟೀಲ, ಉಪಾಧ್ಯಕ್ಷ ಶೀಲಾ ಬಾವಿಕಟ್ಟಿ, ಬಿಜೆಪಿ ಮುಖಂಡ ಬಸನಗೌಡ ಪಾಟೀಲ, ಜಿಪಂ ಮಾಜಿ ಸದಸ್ಯ ಮಹಾಂತೇಶ ಹಿಟ್ಟಿನಮಠ, ಶಂಕರಗೌಡ ಪಾಟೀಲ, ಪ್ರಕಾಶ ಮಮದಾಪುರ, ಮುಸ್ತಾಕ ಚಿಕ್ಕೋಡಿ, ಮಹಾಲಿಂಗಪ್ಪ ಜಕ್ಕಣ್ಣವರ, ರಂಗಣ್ಣಗೌಡ ಪಾಟೀಲ, ರಾಜೇಶ ಬಾವಿಕಟ್ಟಿ, ಸಿದ್ದರಾಮ ಯರಗಟ್ಟಿ, ಮಲ್ಲಪ್ಪ ಸಿಂಗಾಡಿ, ಮಹಾಲಿಂಗ ಸನದಿ, ಬಂದೇನಮಾಜ ಪಕಾಲೀ, ಮಹೇಶ ಇಟಕನ್ನವರ, ಗಂಗಾಧರ ಮೇಟಿ, ಭೀಮಪ್ಪ ಸಂಶಿ, ಚಂದ್ರಪ್ಪ ದೋಣಿ, ಡಾ.ಎಸ್ ಆರ್ ಹಿಡಕಲ್, ಜೊತೆಪ್ಪ ಕಪರಟ್ಟಿ, ಮಾನಿಂಗಪ್ಪ ಸನದಿ,ಕರೆಪ್ಪ ಮೇಟಿ, ಮಹಾಲಿಂಗ ಮಾಳಿ, ಸಿದ್ದರಾಮ ಯರಗಟ್ಟಿ, ಶ್ರೀಕಾಂತ ಗುಳಣ್ಣವರ, ವಿಠಲ ಸಂಶಿ, ಕರೆಪ್ಪ ಹುಣಶೀಕಟ್ಟಿ, ಬಸಪ್ಪ ಬಂಡಿ, ಪ್ರಭು ಹುಣಶೀಕಟ್ಟಿ (ಪೂಜಾರಿ ), ಮಲ್ಲಪ್ಪ ಭಾವಿಕಟ್ಟಿ, ಸಂಜಯ ಜಮಖಂಡಿ, ಚೇತನ ಹಾದಿಮನಿ ಸೇರಿದಂತೆ ಹಲವರು ಇದ್ದರು.