ಯುನಿಕ್ ಅಬಾಕಸ್ ಕೇಂದ್ರದ 14 ಮಕ್ಕಳು ಪೈಕಿ 10 ಮಕ್ಕಳು ಸೂಪರ್ ಚಾಂಪಿಯನ್ ಆಗಿ ತಾಲೂಕಿಗೆ ಕೀರ್ತಿ ತಂದಿದ್ದಾರೆ.
ಕನಕಗಿರಿ: ಅಂತಾರಾಷ್ಟ್ರೀಯ ಗ್ಯಾಲಕ್ಷಿ ಎಜ್ಯುಕೇಷನ್ ಇನೊವೇಷನ್ಯಿವರ ಸಹಯೋಗದಲ್ಲಿ ಇತ್ತೀಚೆಗೆ ಗೋವಾದಲ್ಲಿ ನಡೆದ ರಾಷ್ಟ್ರೀಯ ಅಬಾಕಸ್ ಹಾಗೂ ಮೆಂಟಲ್ ಅರ್ಥಮೆಟಿಕ್ ಸ್ಪರ್ಧೆಯಲ್ಲಿ ಪಟ್ಟಣದ ಯುನಿಕ್ ಅಬಾಕಸ್ ಕೇಂದ್ರದ 14 ಮಕ್ಕಳು ಪೈಕಿ 10 ಮಕ್ಕಳು ಸೂಪರ್ ಚಾಂಪಿಯನ್ ಆಗಿ ತಾಲೂಕಿಗೆ ಕೀರ್ತಿ ತಂದಿದ್ದಾರೆ.
ಭರತ ರೇವಣಕಿ, ಆರೂಢರೆಡ್ಡಿ, ಆರೋಹಿ ರೆಡ್ಡಿ, ಸಯ್ಯೇದಾ ಸಾಧಿಕಾ, ದಿವ್ಯಾ ಕಡಿ, ಸಾಕ್ಷಿ ಕಡಿ, ಪ್ರಣತಿ, ದಾತ್ರಿ ರೆಡ್ಡಿ, ಚಿನ್ಮಯರೆಡ್ಡಿ, ಸಭಾ ತರುನ್ನುಮ್ ಈ 10 ಮಕ್ಕಳು ಸೂಪರ್ ಚಾಂಪಿಯನ್(ಪ್ರಥಮ) ಆಗಿ ಹೊಮ್ಮಿದ್ದಾರೆ.ಅಲ್ಲದೇ ಸಾತ್ವಿಕ್ ಎಂ.ಬಿ ಹಾಗೂ ಸುಧಿಕ್ಷಾ ಅಚ್ಚಲಕರ ಚಾಂಪಿಯನ್ (ದ್ವಿತೀಯ) ಪಟ್ಟ ಗಿಟ್ಟಿಸಿಕೊಂಡರು. ಇನ್ನೂ ಮಹ್ಮದ ದ್ಯಾನೀಶ ಅಲಿ ಮತ್ತು ರೋಹಿತ ರನ್ನರ್ ಅಪ್(ತೃತೀಯ) ಆಯ್ಕೆಯಾಗಿದ್ದು, ಯುನಿಕ್ ಅಬಾಕಸ್ ಸೆಂಟರನ 14ಕ್ಕೂ 14 ಮಕ್ಕಳು ಉತ್ತಮ ಫಲಿತಾಂಶ ಪಡೆದಿದ್ದಾರೆ.
ಗ್ಯಾಲಕ್ಷಿ ಎಜ್ಯಕೇಷನ್ ಇನೊವೇಷನ್ ಸಂಸ್ಥೆಯಿಂದ ಟ್ರೋಪಿ ಹಾಗೂ ಪ್ರಶಸ್ತಿ ಪತ್ರ ವಿತರಿಸಲಾಯಿತು. ಕನಕಗಿರಿ ಯೂನಿಕ್ ಅಬಾಕಸ್ ಸೆಂಟರ್‌ನ ಮಕ್ಕಳ ಕಲಿಕೆ ಕುರಿತು ಸಂಸ್ಥೆಯ ನಿರ್ದೇಶಕಿ ಶೈಲಜಾ ಹಾಗೂ ಪ್ರಕಾಶ ಪ್ರಶಂಸೆ ವ್ಯಕ್ತಪಡಿಸಿದರು. ಮಕ್ಕಳ ಈ ಸಾಧನೆಗೆ ಶಿಕ್ಷಣ ಪ್ರೇಮಿಗಳು, ಸಂಘ ಸಂಸ್ಥೆಗಳ ಪದಾಧಿಕಾರಿಗಳು ಅಭಿನಂದಿಸಿದ್ದಾರೆ.ಯೂನಿಕ್ ಅಬಾಕಸ್ ಕೇಂದ್ರದ ಮುಖ್ಯಸ್ಥೆ ಅರ್ಪಿತಾ ಧಾಯಿಪುಲ್ಲೆ, ಶಿಕ್ಷಕಿ ಭಾವನಾ ಕಡಿ ಇದ್ದರು.