ಕಲ್ಲುಗಣಿಗಾರಿಕೆಗೆ ಕನಕನ ಬಸಾಪುರ ಗ್ರಾಮಸ್ಥರ ವಿರೋಧ

| Published : Nov 13 2024, 12:02 AM IST

ಸಾರಾಂಶ

ಕಲ್ಲುಗಣಿಗಾರಿಕೆ ಮಾಡಲು ಪರವಾನಗಿ ನೀಡದಂತೆ ಆಗ್ರಹಿಸಿ ತಾಲೂಕಿನ ಕನಕನ ಬಸಾಪುರ ಗ್ರಾಮಸ್ಥರು ಮತ್ತು ರೈತರು ಉಪವಿಭಾಗಾಧಿಕಾರಿ ಹಾಗೂ ತಹಸೀಲ್ದಾರ್‌ಗೆ ಮಂಗಳವಾರ ಮನವಿ ಸಲ್ಲಿಸಿದರು.

ಹರಪನಹಳ್ಳಿ: ಕಲ್ಲುಗಣಿಗಾರಿಕೆ ಮಾಡಲು ಪರವಾನಗಿ ನೀಡದಂತೆ ಆಗ್ರಹಿಸಿ ತಾಲೂಕಿನ ಕನಕನ ಬಸಾಪುರ ಗ್ರಾಮಸ್ಥರು ಮತ್ತು ರೈತರು ಉಪವಿಭಾಗಾಧಿಕಾರಿ ಹಾಗೂ ತಹಸೀಲ್ದಾರ್‌ಗೆ ಮಂಗಳವಾರ ಮನವಿ ಸಲ್ಲಿಸಿದರು.ತಾಲೂಕಿನ ಚಿಗಟೇರಿ ಹೋಬಳಿಯ ನಿಚ್ಚವ್ವನಹಳ್ಳಿ ಗ್ರಾಮದ ಸರ್ವೆ ನಂ. 278/5ರಲ್ಲಿ 17.50 ಎಕರೆ ಪ್ರದೇಶದ ಸರ್ಕಾರಿ ಜಮೀನಿನಲ್ಲಿ ಕಲ್ಲುಗಾಣಿಗಾರಿಕೆ ನಡೆಸಲು ದಾವಣಗೆರೆಯ ಗಿರೀಶ ಮತ್ತು ಜಿತೇಂದ್ರ ಎಂಬುವವರು ಅರ್ಜಿ ಸಲ್ಲಿಸಿದ್ದಾರೆ, ಇದೇ ನ. 5ರಂದು ಸ್ಥಳ ತನಿಖೆಗಾಗಿ ಚಿಗಟೇರಿ ಹೋಬಳಿಯ ಕಂದಾಯ ನಿರೀಕ್ಷಕರು ಹಾಗೂ ನಿಚ್ಚವ್ವನಹಳ್ಳಿ ವೃತ್ತದ ಆಡಳಿತಾಧಿಕಾರಿ ಸ್ಥಳಕ್ಕೆ ಆಗಮಿಸಿದಾಗ ಗ್ರಾಮಸ್ಥರು ವ್ಯಕ್ತಪಡಿಸಿದ್ದೇವೆ ಎಂದು ತಿಳಿಸಿದ್ದಾರೆ.

ಕಲ್ಲುಗಣಿಗಾರಿಕೆಯಿಂದ ಈ ಭಾಗದಲ್ಲಿ ಬೆಳೆಗಳಿಗೆ ಹಾನಿ ಉಂಟಾಗುವುದು ಪಕ್ಕದಲ್ಲಿರುವ ಕೆರೆ ನೀರು ಕಲುಷಿತವಾಗುವುದು. ಇದರಿಂದ ಜಾನುವಾರುಗಳಿಗೆ ನೀರಿನ ತೊಂದರೆ ಉಂಟಾಗುವುದು. ಮನೆಗಳು ಕುಸಿಯುವುದು, ಅಡಿಕೆ ತೋಟಗಳಿಗೆ ಹಾನಿ ಉಂಟಾಗುತ್ತದೆ. ಜಮೀನುಗಳಲ್ಲಿ ನೆರಳು ಪರದೆ ಮೂಲಕ ಬೀಜ ಉತ್ಪಾದನೆ ಮಾಡಲು ತೊಂದರೆ ಸೇರಿ ಇಂತಹ ಅನೇಕ ಸಮಸ್ಯೆಗಳು ಉಂಟಾಗುತ್ತವೆ. ಆದ್ದರಿಂದ ಪ್ರದೇಶದಲ್ಲಿ ಕಲ್ಲುಗಣಿಗಾರಿಕೆ ನಡೆಸಲು ಪರವಾನಗಿ ನೀಡಬಾರದು ಎಂದು ಗ್ರಾಮಸ್ಥರಾದ ಮಂಜುನಾಥ, ಪುತ್ರೇಶ ಸೇರಿದಂತೆ ಸಾರ್ವಜನಿಕರು ರೈತರು ಮನವಿ ಸಲ್ಲಿಸಿದ್ದಾರೆ.