ಕನಕರು ಸಮಸಮಾಜ ನಿರ್ಮಾಣದ ಹರಿಕಾರ: ಮಂಜುನಾಥ ಕೊಕ್ಕರಗುಂದಿ

| Published : Nov 10 2025, 01:30 AM IST

ಕನಕರು ಸಮಸಮಾಜ ನಿರ್ಮಾಣದ ಹರಿಕಾರ: ಮಂಜುನಾಥ ಕೊಕ್ಕರಗುಂದಿ
Share this Article
  • FB
  • TW
  • Linkdin
  • Email

ಸಾರಾಂಶ

ಸಾಹಿತಿ ಬಸವರಾಜ ಯರಗುಪ್ಪಿ ಮಾತನಾಡಿ, ಕನಕದಾಸರು ಯಾವುದೇ ಒಂದು ಜಾತಿ, ಮತಕ್ಕೆ ಸೀಮಿತರಾಗದೆ ಎಲ್ಲರೂ ಅಪ್ಪಿ ಒಪ್ಪಿಕೊಳ್ಳುವ ದಾಸಶ್ರೇಷ್ಠರಾಗಿದ್ದಾರೆ ಎಂದರು.

ಲಕ್ಷ್ಮೇಶ್ವರ: ಕನ್ನಡದ ದಾಸ ಪರಂಪರೆಯಲ್ಲಿ ೨೫೦ಕ್ಕೂ ಹೆಚ್ಚು ದಾಸರಲ್ಲಿ ದಾಸಶ್ರೇಷ್ಠರು ಎಂದರೆ ಕನಕದಾಸರು. ಕನ್ನಡ ಭಾಷೆಯ ಪ್ರಸಿದ್ಧ ಕೀರ್ತನಕಾರರು. ಸಮಸಮಾಜ ನಿರ್ಮಾಣದ ಹರಿಕಾರರು. ಕರ್ನಾಟಕ ಸಂಗೀತಕ್ಕೆ ಬಹುದೊಡ್ಡ ಕಾಣಿಕೆ ಕೊಟ್ಟವರು ಎಂದು ತಾಲೂಕು ಪದವಿಪೂರ್ವ ಉಪನ್ಯಾಸಕರ ಸಂಘದ ಅಧ್ಯಕ್ಷ ಮಂಜುನಾಥ ಕೊಕ್ಕರಗುಂದಿ ತಿಳಿಸಿದರು.

ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಭಾನುವಾರ ಹಮ್ಮಿಕೊಂಡ ಮಾಸದ ಮಾತು ಕಾರ‍್ಯಕ್ರಮ ಸರಣಿಯಲ್ಲಿ ದಾಸ ಶ್ರೇಷ್ಠ ಕನಕದಾಸರ ಜಯಂತಿ ಕಾರ‍್ಯಕ್ರಮದಲ್ಲಿ ಉಪನ್ಯಾಸ ನೀಡಿದರು.ಕಾರ‍್ಯಕ್ರಮ ಉದ್ಘಾಟಿಸಿದ ಶಿಕ್ಷಕ ಮುತ್ತು ಸಾವಿರಕುರಿ ಮಾತನಾಡಿ, ಕನಕದಾಸರು ಕೇವಲ ದಾಸರಲ್ಲ. ಕವಿ, ಸಂತ, ನಿಸ್ವಾರ್ಥ ಆಡಳಿತಗಾರ, ಸಾಹಿತಿ, ದಾರ್ಶನಿಕ ಆಗಿದ್ದರು. ೫೦೦ ವರ್ಷಗಳ ಹಿಂದೆಯೇ ಅವರು ತೋರಿದ ದಾರಿಯಲ್ಲಿ ನಾವು ಸಾಗಬೇಕಾಗಿದೆ ಎಂದರು.ಶಿಕ್ಷಕ ಸಾಹಿತಿ ಬಸವರಾಜ ಯರಗುಪ್ಪಿ ಮಾತನಾಡಿ, ಕನಕದಾಸರು ಯಾವುದೇ ಒಂದು ಜಾತಿ, ಮತಕ್ಕೆ ಸೀಮಿತರಾಗದೆ ಎಲ್ಲರೂ ಅಪ್ಪಿ ಒಪ್ಪಿಕೊಳ್ಳುವ ದಾಸಶ್ರೇಷ್ಠರಾಗಿದ್ದಾರೆ ಎಂದರು.

ಕೆಂಚಮ್ಮ ಮತ್ತು ಸಾವಿರಕುರಿ ಕನಕದಾಸರ ಕೀರ್ತನೆಯನ್ನು ಹಾಡಿದರು. ತಾಲೂಕು ಕಸಾಪ ಅಧ್ಯಕ್ಷ ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರೀಕಾಂತ ಬಾಲೆಹೊಸೂರು ಕನಕದಾಸರ ಕುರಿತಾದ ಸ್ವರಚಿತ ಕವನ ವಾಚನ ಮಾಡಿದರು.

ಎಂ.ವಿ. ಹೂಗಾರ, ಚಂದ್ರಶೇಖರ ವಡಕಣ್ಣವರ ಕನಕದಾಸರ ಕರ‍್ತನೆಗಳನ್ನು ಹಾಡಿದರು. ಎನ್.ವಿ. ಹೇಮಗಿರಿಮಠ, ಪಿ.ಎಚ್. ಕೊಂಡಾಬಿಂಗಿ, ನಾಗರಾಜ ಮಜ್ಜಿಗುಡ್ಡ, ಮಂಜುನಾಥ ಚಾಕಲಬ್ಬಿ, ಉಮೇಶ ನೇಕಾರ, ಶಂಕರ ಶಿಳ್ಳಿನ, ಎಚ್.ಡಿ. ನಿಂಗರೆಡ್ಡಿ, ಎಸ್.ಎಫ್. ಆದಿ, ಜೆ.ಎಸ್. ರಾಮಶೆಟ್ಟರ, ಅಶೋಕ ಸರವಿ, ರವೀಂದ್ರ ಚೌಹಾಣ, ಕೃಷ್ಣ ಗಾರಗಿ, ಆರ್.ಎಸ್. ಪಾಟೀಲ, ಪ್ರಭು ಹಾಲಗುಂಡಿ, ಪುಷ್ಪ ಹೇಮಗಿರಿಮಠ, ಸುಮ ಗಾರಗಿ, ಶಿವಮ್ಮ ಗೋಣೆಪ್ಪನವರ, ಶಕುಂತಲಾ ಹೋರಿ ಇದ್ದರು.