ಸಾರಾಂಶ
ಬದುಕು ನಶ್ವರ ಎಂದು ಮಾಂಡಲೀಕನಾಗಿದ್ದ ಕನಕದಾಸರು ಯುದ್ಧದಲ್ಲಿ ಸಾವು ನೋವು ಕಂಡು ವಿರಕ್ತರಾದರು. ತಮ್ಮಲ್ಲಿದ್ದ ಐಶ್ವರ್ಯ ತೊರೆದು ಭಗವಂತನ ಸಾಕ್ಷಾತ್ಕಾರಕ್ಕೆ ದೇಶ ಪರ್ಯಟನೆ ಮಾಡಿದರು. ತಾವು ಕಂಡ ಬದುಕಿನ ಅನುಭವಗಳನ್ನು ಕೀರ್ತನೆಗಳ ಮೂಲಕ ಸಾರಿದರು. ಶ್ರೇಷ್ಠ ಗ್ರಂಥಗಳನ್ನು ರಚಿಸಿ ಮೇಲು ಕೀಳು ಭಾವನೆ ತೊರೆಯಲು ಸಂದೇಶ ಸಾರಿದರು.
ಕನ್ನಡಪ್ರಭ ವಾರ್ತೆ ಕಿಕ್ಕೇರಿ
ಸರಳತೆ ಜೊತೆಗೆ ಜಾತಿ ಸಂಕೋಲೆ ಬಿಟ್ಟು ಹೊರಬಂದು ವಿಶ್ವಮಾನವರಾಗಿ ಎಂದು ಜಗತ್ತಿಗೆ ಸಾರಿದ ಕನಕದಾಸರು ಮಹಾನ್ ಸಂತ ಎಂದು ಆರ್‌ಟಿಒ ಅಧಿಕಾರಿಗಳ ಸಂಘದ ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನ್ ಹೇಳಿದರು.ಸಮೀಪದ ಹಿರಿಕಳಲೆ ಗ್ರಾಮದ ಸಂಗೊಳ್ಳಿ ರಾಯಣ್ಣ ಯುವಕರ ಟ್ರಸ್ಟ್ ಹಮ್ಮಿಕೊಂಡಿದ್ದ ಕನಕದಾಸರ ಜಯಂತಿಯಲ್ಲಿ ಮಾತನಾಡಿ, ಶ್ರೇಷ್ಠ ವ್ಯಕ್ತಿಗಳ ಬದುಕಿನ ಸಾರ, ಜಗತ್ತಿಗೆ ನೀಡಿದ ಸಂದೇಶವನ್ನು ಯುವಕರು ಪಾಲಿಸಿದರೆ ಸಾಕು ಬದುಕು ಪಾವನವಾಗಲಿದೆ ಎಂದರು.
ಬದುಕು ನಶ್ವರ ಎಂದು ಮಾಂಡಲೀಕನಾಗಿದ್ದ ಕನಕದಾಸರು ಯುದ್ಧದಲ್ಲಿ ಸಾವು ನೋವು ಕಂಡು ವಿರಕ್ತರಾದರು. ತಮ್ಮಲ್ಲಿದ್ದ ಐಶ್ವರ್ಯ ತೊರೆದು ಭಗವಂತನ ಸಾಕ್ಷಾತ್ಕಾರಕ್ಕೆ ದೇಶ ಪರ್ಯಟನೆ ಮಾಡಿದರು. ತಾವು ಕಂಡ ಬದುಕಿನ ಅನುಭವಗಳನ್ನು ಕೀರ್ತನೆಗಳ ಮೂಲಕ ಸಾರಿದರು. ಶ್ರೇಷ್ಠ ಗ್ರಂಥಗಳನ್ನು ರಚಿಸಿ ಮೇಲು ಕೀಳು ಭಾವನೆ ತೊರೆಯಲು ಸಂದೇಶ ಸಾರಿದರು ನಮ್ಮಕನ್ನಡನಾಡಿನ ಹೆಮ್ಮೆಯ ಸಮಾಜ ಪರಿವರ್ತನೆ ಸುಧಾರಕರು ಕನಕರು ಎಂದರು.ಕನಕರನ್ನು ಒಂದು ಜಾತಿ ಸೀಮಿತಗೊಳಿಸದೆ ವಿಶ್ವ ಭ್ರಾತೃತ್ವ ಸಂತರು ಎಂದು ಆರಾಧಿಸಬೇಕು ಎಂದು ನುಡಿದರು. ಕನಕರ ಭಾವಚಿತ್ರಕ್ಕೆ ಗಣ್ಯರು ಪುಷ್ಪನಮನ ಸಲ್ಲಿಸಿ ಆರತಿ ಬೆಳಗಿದರು. ಟ್ರಸ್ಟ್ ಸದಸ್ಯರಿಗೆ ಸಂಘದ ಸದಸ್ಯತ್ವದ ಆದೇಶ ಪತ್ರ ನೀಡಲಾಯಿತು.
ಈ ವೇಳೆ ಹಿರಿಕಳಲೆ ಗ್ರಾಪಂ ಉಪಾಧ್ಯಕ್ಷ ರಾಮಕೃಷ್ಣ, ಮಾಜಿ ಅಧ್ಯಕ್ಷ ಜವರೇಗೌಡ, ತಾಪಂ ಮಾಜಿ ಸದಸ್ಯ ಮಂಜೇಗೌಡ, ಮುಖಂಡ ಎಲ್‌ಐಸಿ ರವಿಕುಮಾರ್, ಗೋಪಾಲ್, ಬಲರಾಮು, ಯೋಗೇಶ್, ದೇವರಾಜು, ಕೃಷ್ಣಗೌಡ, ಯೋಗೇಶ್, ಸಣ್ಣರಾಜು, ಕೃಷ್ಣಪ್ಪ, ಶಿಕ್ಷಕ ಶಿವಕುಮಾರ್, ಪುಟ್ಟರಾಜು, ರಾಜೇಶ್, ಟ್ರಸ್ಟ್‌ನ ಧರ್ಮೇಶ್, ಪ್ರದೀಪ್, ಅಣ್ಣಯ್ಯ, ಮಂಜೇಗೌಡ, ಮೋಹನ್, ಅಭಿಷೇಕ್, ಮಧುಕರಣ್, ಚಿಕ್ಕಯ್ಯ, ಚಿರಂಜೀವಿ, ಕೌಶಿಕ್, ವಿಕಾಸ್, ಹರೀಶ, ಸಚಿನ್, ಜಯಕೃಷ್ಣ ಇದ್ದರು.