ಕಂಡಂಗಾಲ ಹಾಕಿ: ಸಾಧಕರಿಗೆ ಸನ್ಮಾನ

| Published : Dec 28 2024, 01:01 AM IST

ಸಾರಾಂಶ

ಕಂಡಂಗಾಲ ಹಿರಿಯ ಪ್ರಾಥಮಿಕ ಶಾಲಾ ಕ್ರೀಡಾ ಸಮಿತಿ ನೇತೃತ್ವದಲ್ಲಿ ನಡೆದ ಪುರುಷರ ಕೌಟುಂಬಿಕ ಹಾಕಿ ಪಂದ್ಯಾಟದ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ 8 ಮಂದಿ ಸಾಧಕರನ್ನು ಗುರುತಿಸಿ ಸನ್ಮಾನಿಸಲಾಯಿತು.

ಕನ್ನಡಪ್ರಭ ವಾರ್ತೆ ಗೋಣಿಕೊಪ್ಪ

ಕಂಡಂಗಾಲ ಹಿರಿಯ ಪ್ರಾಥಮಿಕ ಶಾಲಾ ಕ್ರೀಡಾ ಸಮಿತಿ ನೇತೃತ್ವದಲ್ಲಿ ನಡೆದ ಪುರುಷರ ಕೌಟುಂಬಿಕ ಹಾಕಿ ಪಂದ್ಯಾಟದ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ 8 ಮಂದಿ ಸಾಧಕರನ್ನು ಗುರುತಿಸಿ ಸನ್ಮಾನಿಸಲಾಯಿತು.

ತೂಕ್ ಬೊಳಕ್ ಕಲೆ, ಕ್ರೀಡಾ ಹಾಗೂ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಮುಲ್ಲೇಂಗಡ ಶಂಕರಿ ಪೊನ್ನಪ್ಪ, ಕಂಡಂಗಾಲ ನಿವೃತ್ತ ದೈಹಿಕ ಶಿಕ್ಷಕ ಮುಲ್ಲೇಂಗಡ ದೇವಯ್ಯ, ಅಪ್ಪಂಡೇರಂಡ ಚಿಟ್ಟಿಯಪ್ಪ, ಮುಖ್ಯ ಪಶುವೈದ್ಯಾಧಿಕಾರಿ, ನಿವೃತ್ತ ವನ್ಯ ಜೀವಿ ವೈದ್ಯ ಬಲ್ಲಡಿಚಂಡ ಡಾ.ಸಿ.ಚಿಟ್ಟಿಯಪ್ಪ, ವೀರಾಜಪೇಟೆ ಕೊಡವ ಸಮಾಜ ಗೌರವ ಕಾರ್ಯದರ್ಶಿ ಮತ್ತು ವೀಕ್ಷಕ ವಿವರಣೆಗಾರ ಮಾಳೇಟಿರ ಶ್ರೀನಿವಾಸ್, ತಿರುವನಂತಪುರ ವಾಯುಪಡೆ ಅಧಿಕಾರಿ ಮಳವಂಡ ಅಶ್ವಥ್ ನಂಜಪ್ಪ ರುದ್ರಗುಪ್ಪೆ, ವಿ.ಎಸ್.ಎಸ್‌ಎನ್. ಕಾರ್ಯನಿರ್ವಹಣಾಧಿಕಾರಿ ನಾಗೇಶ್ ಪಿ.ಎಸ್ ಹಾಗೂ ಕಂಡಂಗಾಲ ನಿವೃತ್ತ ಪೋಸ್ಟ್ ಮ್ಯಾನ್ ಮಂದಮಾಡ ಮೊಯ್ದು ಅವರನ್ನು ಸನ್ಮಾನಿಸಲಾಯಿತು.

ವಿಜೇತ ತಂಡಗಳಿಗೆ ಬಹುಮಾನ:

ಬಲ್ಲಡಿಚಂಡ ಮಣಿ ಉತ್ತಯ್ಯ ಹಾಗೂ ನಂಜವ್ವ ಜ್ಞಾಪಕಾರ್ಥ ಅವರ ಪುತ್ರ ಮನು ಅವರು ಹಾಕಿ ಪಂದ್ಯ ವಿಜೇತ ತಂಡಕ್ಕೆ 50 ಸಾವಿರ ರು. ನಗದು ಹಾಗೂ ಪಾರಿತೋಷಕ ವಿತರಿಸಿದರು.

‌‌ದೇವಯ್ಯ, ಪೊನ್ನವ್ವ, ಪುತ್ರ ವಿವೇಕ್ ಮುತ್ತಪ್ಪ ಜ್ಞಾಪಕಾರ್ಥ ರನ್ನರ್ಸ್ ತಂಡಕ್ಕೆ ಮಾಂಗೇರ ಜಯ ಉತ್ತಪ್ಪ ಅವರು 30 ಸಾವಿರ ರು. ನಗದು ಮತ್ತು ಪಾರಿತೋಷಕ ವಿತರಿಸಿದರು‌.

ಚಂದುರ ಪೊನ್ನಪ್ಪ ಮತ್ತು ಸಹೋದರರು ಹಾಕಿ ಪಂದ್ಯಾಟದ 3ನೇ ಹಾಗೂ 4ನೇ ಬಹುಮಾನ ಪ್ರಾಯೋಜಕತ್ವ ವಹಿಸಿದ್ದರು.ಹಾಕಿ ಫೈನಲ್‌ನಲ್ಲಿ ಅಪ್ಪಂಡೇರಂಡ ತಂಡವು ಕೊಂಗಂಡ ತಂಡವನ್ನು 6-4 ಗೋಲುಗಳಿಂದ ಸೋಲಿಸಿ ಪ್ರಶಸ್ತಿ ಜಯಿಸಿತ್ತು. ಕುಪ್ಪಂಡ ತಂಡ ಮೂಕಚಂಡ ತಂಡದ ವಿರುದ್ಧ 2-0 ಗೋಲುಗಳಿಂದ ಗೆದ್ದು 3ನೇ ಸ್ಥಾನ ಗಳಿಸಿತ್ತು.

ಮಹಿಳಾ ಹಗ್ಗ ಜಗ್ಗಾಟದ ಪ್ರಥಮ ಹಾಗೂ ದ್ವಿತೀಯ ನಗದು ಬಹುಮಾನ ಮತ್ತು ಟ್ರೋಫಿಯನ್ನು ಕೊಂಗಂಡ ಭೀಮಯ್ಯ ಮತ್ತು ಮುಲ್ಲೇಂಗಡ ಕುಟ್ಟಪ್ಪ ಪ್ರಾಯೋಜಿಸಿದ್ದರು. ಮಹಿಳೆಯರ ಹಗ್ಗ ಜಗ್ಗಾಟದ ಫೈನಲ್‌ನಲ್ಲಿ ಕಡೇಮಾಡ ತಂಡವು ಬಲ್ಲಡಿಚಂಡ ಮಹಿಳೆಯರ ವಿರುದ್ಧ 2-0 ಅಂತರದಿಂದ ಗೆಲುವು ಸಾಧಿಸಿತ್ತು.

ಕ್ರೀಡಾ ಸಮಿತಿ ಅಧ್ಯಕ್ಷ ಬಲ್ಲಡಿಚಂಡ ರವಿ ಸೋಮಯ್ಯ ಅಧ್ಯಕ್ಷತೆಯಲ್ಲಿ ಹಾಕಿ ಪಂದ್ಯಾಟ ನಡೆದಿತ್ತು. ವೀಕ್ಷಕ ವಿವರಣೆಗಾರರಾಗಿ ಮಾಳೇಟಿರ ಶ್ರೀನಿವಾಸ್, ಮುಲ್ಲೇಂಗಡ ಮುಧೋಶ್ ಪೂವಯ್ಯ, ಫೈನಲ್ ಪಂದ್ಯದ ತೀರ್ಪುಗಾರರಾಗಿ ಅಪ್ಪಚೆಟ್ಟೋಳಂಡ ಅಯ್ಯಪ್ಪ ಹಾಗೂ ಅನ್ನಾಡಿಯಂಡ ಪೊನ್ನಣ್ಣ ಕಾರ್ಯನಿರ್ವಹಿಸಿದರು. ಟೂರ್ನಮೆಂಟ್ ನಿರ್ದೇಶಕರಾಗಿ ಲೋಕೇಶ್ ಕಾರ್ಯಪ್ಪ ಕಾರ್ಯನಿರ್ವಹಿಸಿದರು.

ಮುಖ್ಯ ಅತಿಥಿಗಳಾಗಿ ವರುಣ್ ಗಣಪತಿ, ವೀರಾಜಪೇಟೆಯ ರಾಹುಲ್, ಭಗತ್ ಸಿಂಗ್ ಮುಂತಾದವರು ಪಾಲ್ಗೊಂಡಿದ್ದರು. ಸಮಿತಿಯ ಉಪಾಧ್ಯಕ್ಷೆ ಮೂಕಚಂಡ ಜಾಲಿ ಕಾವೇರಮ್ಮ, ಗೌರವ ಕಾರ್ಯದರ್ಶಿ ಸುರೇಶ್ ಭೀಮಯ್ಯ, ಹಾಗೂ ಸಲಹಾ ಸಮಿತಿ ಸದಸ್ಯರು, ನಿರ್ದೇಶಕರ ಮುಂದಾಳತ್ವದಲ್ಲಿ ಕ್ರೀಡೋತ್ಸವ ಜನಮನ್ನಣೆಗೆ ಪಾತ್ರವಾಯಿತು.